For Quick Alerts
  ALLOW NOTIFICATIONS  
  For Daily Alerts

  ನಮ್ಮಲ್ಲಿ 'ನೆಪೋಟಿಸಂ' ಇಲ್ಲ; ಹೊಸ ಪ್ರತಿಭೆಗಳಿಗೆ ಪುನೀತ್ ಪ್ರೋತ್ಸಾಹ ಮೆಚ್ಚಿಕೊಂಡ ಅಭಿಮಾನಿಗಳು

  |

  ಪುನೀತ್ ರಾಜ್ ಕುಮಾರ್ ತಮ್ಮ ನಟನೆಯ ಸಿನಿಮಾಗಳಾಚೆ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ ಮೂಲಕ ಹೊಸ ನಿರ್ದೇಶಕರು, ಕಲಾವಿದರ ಎರಡು ಚಿತ್ರಗಳು ಬಿಡುಗಡೆಯಾಗಿದ್ದವು. ಇನ್ನೆರಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಅದರ ಬೆನ್ನಲ್ಲೇ ಇನ್ನೂ ಕೆಲವು ಸಿನಿಮಾಗಳನ್ನು ಪುನೀತ್ ನಿರ್ಮಿಸುತ್ತಿದ್ದಾರೆ.

  ನಮ್ಮಲ್ಲಿ ನೆಪೊಟಿಸಮ್ ಭೂತ ಇಲ್ಲ ಎಂದು ತೋರಿಸಿಕೊಟ್ಟ ಅಪ್ಪು | Puneeth Rajkumar | Sandalwood

  ಪುನೀತ್ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮಾಡುತ್ತಿರುವವರಲ್ಲಿ ಹೆಚ್ಚಿನವರು ಒಂದು ಅಥವಾ ಎರಡು ಸಿನಿಮಾಗಳನ್ನು ಮಾಡಿದವರು. ಅವರಲ್ಲಿನ ಪ್ರತಿಭೆ ಮತ್ತು ಕಥೆಗೆ ಮನ್ನಣೆ ನೀಡುತ್ತಿರುವ ಪುನೀತ್, ಅದನ್ನು ನಂಬಿಕೊಂಡು ಬಂಡವಾಳ ಹೂಡುತ್ತಿದ್ದಾರೆ.

  ಸಿಕ್ಸ್‌ಪ್ಯಾಕ್ ನಿಂದ ಫ್ಯಾಮಿಲಿ ಪ್ಯಾಕ್‌ ಕಡೆಗೆ ಪುನೀತ್ ರಾಜ್‌ಕುಮಾರ್!ಸಿಕ್ಸ್‌ಪ್ಯಾಕ್ ನಿಂದ ಫ್ಯಾಮಿಲಿ ಪ್ಯಾಕ್‌ ಕಡೆಗೆ ಪುನೀತ್ ರಾಜ್‌ಕುಮಾರ್!

  ಬಾಲಿವುಡ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ತೀವ್ರ ಚರ್ಚೆಯಾಗುತ್ತಿರುವ ನೆಪೋಟಿಸಂ (ಸ್ವಜನಪಕ್ಷಪಾತ) ನಮ್ಮ ಚಿತ್ರರಂಗದಲ್ಲಿ ಇಲ್ಲ ಎಂಬುದನ್ನು ಪುನೀತ್ ಸಾಬೀತುಪಡಿಸುತ್ತಿದ್ದಾರೆ. ಚಿತ್ರರಂಗಕ್ಕೆ ಹೊಸಬರಾದ ಪ್ರತಿಭೆಗಳನ್ನು ಬೆಳೆಸುತ್ತಿದ್ದಾರೆ ಎಂದು ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದಾರೆ. ಮುಂದೆ ಓದಿ...

  ತರಣ್ ಆದರ್ಶ್ ಪ್ರಚಾರ

  ತರಣ್ ಆದರ್ಶ್ ಪ್ರಚಾರ

  ಪುನೀತ್ ರಾಜ್ ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನಲ್ಲಿ ಹೊಸ ಚಿತ್ರ 'ಫ್ಯಾಮಿಲಿ ಪ್ಯಾಕ್' ಸೆಟ್ಟೇರುತ್ತಿದೆ. 'ಸಂಕಷ್ಟಕರ ಗಣಪತಿ' ಎಂಬ ಚಿತ್ರ ನಿರ್ದೇಶಿಸಿದ್ದ ಅರ್ಜುನ್ ಕುಮಾರ್, ಈ ಸಿನಿಮಾದ ನಿರ್ದೇಶಕರು. ನಾಯಕರಾಗಿ ಲಿಖಿತ್ ಶೆಟ್ಟಿ ಮತ್ತು ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್, ಲಿಖಿತ್ ಶೆಟ್ಟಿ ಮತ್ತು ದೇಶ್‌ರಾಜ್ ರೈ ಈ ಚಿತ್ರದ ನಿರ್ಮಾಪಕರು. ಗುರುಕಿರಣ್ ಸಂಗೀತ ಚಿತ್ರಕ್ಕಿದೆ. ಈ ಚಿತ್ರದ ಫಸ್ಟ್ ಲುಕ್‌ಅನ್ನು ಬಾಲಿವುಡ್‌ನ ಖ್ಯಾತ ವಿಮರ್ಶಕ ತರಣ್ ಆದರ್ಶ್ ಕೂಡ ಹಂಚಿಕೊಂಡು ಪ್ರಚಾರ ನೀಡಿದ್ದಾರೆ.

  ಹೊಸಬರಿಗೆ ಅವಕಾಶ

  ಹೊಸಬರಿಗೆ ಅವಕಾಶ

  ಹೊಸಬರ ಅರಂಭದ ಪ್ರಯತ್ನಗಳು ಯಶಸ್ವಿಯಾಗಿರಲೇಬೇಕು ಎನ್ನದೆ ಪುನೀತ್ ಅವರ ಪ್ರತಿಭೆಗೆ ಮನ್ನಣೆ ನೀಡಿ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದಾರೆ. ಸ್ವಜನಪಕ್ಷಪಾತದಿಂದ ತುಂಬಿದ ಜಗತ್ತಿನಲ್ಲಿ ಪುನೀತ್ ರಾಜ್ ಕುಮಾರ್ ಅವರಂತಹ ಜೆಂಟಲ್‌ಮ್ಯಾನ್ ಪ್ರತಿಭಾನ್ವಿತ ಮತ್ತು ಹೊಸ ನೈಜ ಕಲಾವಿದರಿಗೆ ಅವಕಾಶ ನೀಡುತ್ತಿದ್ದಾರೆ ಎಂದು ಅನೇಕರು ಮೆಚ್ಚಿಕೊಂಡಿದ್ದಾರೆ.

  ಪುನೀತ್ ರಾಜ್‌ಕುಮಾರ್ ವಿಡಿಯೋ ನೋಡಿ ಶಾಕ್ ಆದ ಅಲ್ಲು ಅರ್ಜುನ್ ತಮ್ಮಪುನೀತ್ ರಾಜ್‌ಕುಮಾರ್ ವಿಡಿಯೋ ನೋಡಿ ಶಾಕ್ ಆದ ಅಲ್ಲು ಅರ್ಜುನ್ ತಮ್ಮ

  ಹೆಮ್ಮೆಯಾಗುತ್ತಿದೆ

  ಹೆಮ್ಮೆಯಾಗುತ್ತಿದೆ

  ಜನರು ಬಾಲಿವುಡ್‌ನಲ್ಲಿನ ಸ್ವಜನಪಕ್ಷಪಾತದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಮಧ್ಯೆ ನಮ್ಮ ಕನ್ನಡ ಚಿತ್ರರಂಗದ ಅತಿ ದೊಡ್ಡ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವ ಪ್ರತಿಭೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಅಭಿಮಾನಿಯಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ರಾಜಶೇಖರ್ ಎಂಬುವವರು ಹೇಳಿದ್ದಾರೆ.

  ಇಲ್ಲಿ ಪ್ರತಿಭೆಯೇ ಮುಖ್ಯ

  ಇಲ್ಲಿ ಪ್ರತಿಭೆಯೇ ಮುಖ್ಯ

  ದಕ್ಷಿಣ ಭಾರತದ ಚಿತ್ರರಂಗಗಳು ಬಾಲಿವುಡ್‌ಗಿಂತ ಎಷ್ಟೋ ಉತ್ತಮ. ಇಲ್ಲಿ ಪ್ರತಿಭೆಯೇ ಎಲ್ಲವೂ. ನೀವು ಪ್ರತಿಭಾವಂತರಾಗಿದ್ದರೆ ನಿರ್ಮಾಪಕರು ನಿಮ್ಮ ಡೇಟ್ಸ್‌ಗಾಗಿ ಸಾಲುಗಟ್ಟಿ ನಿಲ್ಲುತ್ತಾರೆ. ನಿಮಗಿಂತಲೂ ಪ್ರತಿಭಾವಂತರು ಮತ್ತು ಕಠಿಣ ಪರಿಶ್ರಮಿಗಳಾಗಿರದ ಹೊರತು ಬೇರೆ ಯಾರೂ ನಿಮ್ಮ ಅವಕಾಶಗಳನ್ನು ಕಿತ್ತುಕೊಳ್ಳಲಾರರು ಎಂದು ಅಭಿಮಾನಿಯೊಬ್ಬರು ತಿಳಿಸಿದ್ದಾರೆ.

  ಅಂದು ಮಲ್ಟಿಪ್ಲೆಕ್ಸ್‌ನಲ್ಲಿ ಕನ್ನಡ ಸಿನಿಮಾಗಳ ಪರ ದನಿ ಎತ್ತಿದ್ದ ಪುನೀತ್ ತೋರಿಸಿದ ರಾಜಮಾರ್ಗ!ಅಂದು ಮಲ್ಟಿಪ್ಲೆಕ್ಸ್‌ನಲ್ಲಿ ಕನ್ನಡ ಸಿನಿಮಾಗಳ ಪರ ದನಿ ಎತ್ತಿದ್ದ ಪುನೀತ್ ತೋರಿಸಿದ ರಾಜಮಾರ್ಗ!

  ಸರಳತೆಗೆ ಉದಾಹರಣೆ ಪುನೀತ್

  ಸರಳತೆಗೆ ಉದಾಹರಣೆ ಪುನೀತ್

  ಸರಳತೆ ಮತ್ತು ಕರುಣೆಯ ಹೃದಯಕ್ಕೆ ಜೀವಂತ ಉದಾಹರಣೆ ಎಂದರೆ ಪುನೀತ್ ರಾಜ್ ಕುಮಾರ್. ಈಗಿನ ಪೀಳಿಗೆಯಲ್ಲಿ ಹೊಸಬರಿಗೆ ಅವಕಾಶ ನೀಡುವುದು ಸಣ್ಣ ಮಾತಲ್ಲ. ಬಾಲಿವುಡ್ ಪ್ರತಿಭೆಗಳನ್ನು ಹತ್ತಿಕ್ಕುತ್ತಿರುವಾಗ ಪುನೀತ್‌ರಂತಹವರು ಪ್ರತಿಭೆಗಳನ್ನು ಬೆಳೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  English summary
  Fans of Puneet Rajkumar praising him for giving more opportunities for new talents while the bollywood is speaking about nepotism.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X