For Quick Alerts
  ALLOW NOTIFICATIONS  
  For Daily Alerts

  ಹೆಂಡತಿ ಒಡವೆ ಅಡವಿಟ್ಟು ಸಿನಿಮಾ ಮಾಡಿದ್ದರು ದಾದಾಸಾಹೇಬ್ ಫಾಲ್ಕೆ!

  By Naveen
  |
  ಈ ಸುದಿನ ದಾದಾ ಸಾಹೇಬ್ ಫಾಲ್ಕೆ ಜನುಮದಿನ | FIlmibeat Kannada

  ಇಂದು ಭಾರತದ ಮೊದಲ ಸಿನಿಮಾ ನಿರ್ದೇಶಕ ದಾದಾಸಾಹೇಬ್ ಫಾಲ್ಕೆ ಅವರ ಹುಟ್ಟುಹಬ್ಬದ ಸವಿನೆನಪು. ಫಾದರ್ ಆಫ್ ಇಂಡಿಯನ್ ಸಿನಿಮಾ ಎಂದೇ ಕರಿಸಿಕೊಳ್ಳುವ ದಾದಾಸಾಹೇಬ್ ಫಾಲ್ಕೆ ಅವರು ಮೊದಲು ಮರಾಠಿಯಲ್ಲಿ 'ರಾಜ ಹರಿಶ್ಚಂದ್ರ' (1913) ಸಿನಿಮಾವನ್ನು ನಿರ್ದೇಶನ ಮಾಡಿದರು. ಇದು ಮರಾಠಿ ಮಾತ್ರವಲ್ಲದೆ ಭಾರತದ ಮೊದಲ ಚಲನಚಿತ್ರವಾಗಿದೆ.

  ಇಂದಿನ ಕಾಲದಲ್ಲಿಯೇ ಒಂದು ಸಿನಿಮಾ ಮಾಡಬೇಕು ಅಂದರೆ ಎಷ್ಟೊಂದು ಕಷ್ಟ ಇರುತ್ತದೆ. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಹಾಗೆ 'ಒಂದು ಸಿನಿಮಾ ಮಾಡಿ ನೋಡು..' ಎನ್ನುವ ಮಾತು ಕೂಡ ಚಿತ್ರರಂಗದಲ್ಲಿ ಇದೆ. ಹೀಗಿರುವಾಗ, ನೂರು ವರ್ಷದ ಹಿಂದೆ ಒಂದು ಸಿನಿಮಾ ಮಾಡಬೇಕು ಅಂದರೆ ಅದರ ಹಿಂದೆ ಎಷ್ಟು ಶ್ರಮ, ಎಷ್ಟು ಕಷ್ಟ, ಸಿನಿಮಾದ ಮೇಲಿನ ಪ್ರೀತಿ ಯಾವ ಮಟ್ಟಿಗೆ ಇರಬೇಕು ಅಂತ ಊಹಿಸಿ.

  ಅಂದಹಾಗೆ, ಭಾರತದ ದೇಶದ ಎಲ್ಲ ಭಾಷೆಯ ನಿರ್ದೇಶಕರ ರಿಯಲ್ ಗುರು ಆಗಿರುವ 'ದಾದಾಸಾಹೇಬ್ ಫಾಲ್ಕೆ' ಅವರ ಜನ್ಮದಿನದ ವಿಶೇಷವಾಗಿ ಅವರ ಬಗ್ಗೆ ಕೆಲ ಕುತೂಹಲಕಾರಿ ವಿಷಯಗಳು ಮುಂದಿದೆ ಓದಿ..

  ಮೂಲ ಹೆಸರು ದುಂಡಿರಾಜ್ ಗೋವಿಂದ ಫಾಲ್ಕೆ

  ಮೂಲ ಹೆಸರು ದುಂಡಿರಾಜ್ ಗೋವಿಂದ ಫಾಲ್ಕೆ

  ದಾದಾಸಾಹೇಬ್ ಫಾಲ್ಕೆ ಅವರ ಮೂಲ ಹೆಸರು ದುಂಡಿರಾಜ್ ಗೋವಿಂದ ಫಾಲ್ಕೆ. ಆದರೆ ಇವರು ಚಿತ್ರರಂಗದಲ್ಲಿ ದಾದಾಸಾಹೇಬ್ ಫಾಲ್ಕೆ ಎಂದೇ ಪ್ರಸಿದ್ಧರಾಗಿದ್ದಾರೆ. 1870 ಏಪ್ರಿಲ್ 30 ರಂದು ಮಹಾರಾಷ್ಟ್ರದಲ್ಲಿ ಇವರು ಜನಿಸಿದರು. ಚಿಕ್ಕಂದಿನಿಂದಲೂ ದಾದಾಸಾಹೇಬ್ ಫಾಲ್ಕೆ ತಮ್ಮ ತಂದೆ ಹೇಳಿಕೊಡುತ್ತಿದ್ದ ಕಾವ್ಯ, ಪುರಾಣ, ಕಥೆಗಳಲ್ಲಿ ಬಹಳ ಆಸಕ್ತಿ ತೋರುತ್ತಿದ್ದರು.

  ಚಿತ್ರಾಸಕ್ತಿ ಶುರು ಆಗಿದ್ದು

  ಚಿತ್ರಾಸಕ್ತಿ ಶುರು ಆಗಿದ್ದು

  1885 ರಲ್ಲಿ ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಕೆಲಸ ಸಿಕ್ಕಿತು. ನಂತರ ಅವರ ಕುಟುಂಬ ಮುಂಬಯಿಗೆ ಬಂದರು. ಮುಂಬಯಿನಲ್ಲಿರುವ ಪ್ರಸಿದ್ಧ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಚಿತ್ರಕಲಾ ತರಗತಿಗೆ ಪ್ರವೇಶ ಪಡೆದ ಮೇಲೆ ಅವರ ಚಿತ್ರಾಸಕ್ತಿ ಶುರು ಆಯಿತು.

  ಬಳಿಕ ಬರೋಡದ ಕಲಾಭವನದಲ್ಲಿ ದಾದಾಸಾಹೇಬ್ ಫಾಲ್ಕೆ ಅವರ ಪ್ರತಿಭೆ ನೋಡಿ ಪ್ರೊ.ಗುಜ್ಜರ್ ಎಂಬುವರು ಛಾಯಾಚಿತ್ರ ವಿಭಾಗದ ಮೇಲ್ವಿಚಾರಕನಾಗಿ ನೇಮಿಸಿದರು. ಸ್ವಾತಂತ್ರ್ಯ ಸಂಗ್ರಾಮದ ಸ್ವದೇಶಿ ಚಳವಳಿ ಸಾಗಿದ್ದಾಗ ಬ್ರಿಟಿಷ್ ಸರಕಾರ ಆಯೋಜಿಸುತ್ತಿದ್ದ, ಪ್ರಾಚ್ಯವಸ್ತು ಇಲಾಖೆಯ ವೃತ್ತಿಗೆ ರಾಜೀನಾಮೆ ಕೊಟ್ಟು, ಗೆಳೆಯರ ಜೊತೆಗೆ ಸೇರಿ ಕೆತ್ತನೆ ಹಾಗೂ ಮುದ್ರಣದ ವ್ಯಾಪಾರವನ್ನು ಪ್ರಾರಂಭಿಸಿದರು.

  ಮೊದಲು ಮನೆ ಗೋಡೆ ಮೇಲೆ ಚಿತ್ರ ಪ್ರದರ್ಶಿಸಿದರು

  ಮೊದಲು ಮನೆ ಗೋಡೆ ಮೇಲೆ ಚಿತ್ರ ಪ್ರದರ್ಶಿಸಿದರು

  ಸುಮ್ಮನೆ ಬೇಸರ ಕಳೆಯಲೆಂದು ಒಂದು ದಿನ 'ಲೈಫ್ ಆಫ್ ಕ್ರೈಸ್ಟ್' ಎಂಬ ಇಂಗ್ಲೀಷ್ ಚಿತ್ರ ವೀಕ್ಷಿಸಲು

  ದಾದಾಸಾಹೇಬ್ ಒಂದು ಚಿತ್ರಮಂದಿರಕ್ಕೆ ಹೋಗಿದ್ದರು. ಸಿನಿಮಾ ನೋಡಿ ಹೊರ ಬರುವಾಗ ಚಿತ್ರಮಂದಿರದ ಆಚೆ ಎಸೆದಿದ್ದ ರೀಲಿನ ಸಣ್ಣ ಸಣ್ಣ ತುಣುಕುಗಳನ್ನು ಸಂಗ್ರಹಿಸಿ ಅದನ್ನು ಮಸೂರದ ಸಹಾಯದಿಂದ ನೋಡಿದರು. ಸಣ್ಣ ಪ್ರಮಾಣದ ರೀಲನ್ನು ತಂದು ಮನೆ ಗೋಡೆ ಮೇಲೆ ಚಿತ್ರ ಪ್ರದರ್ಶಿಸಿದರು. ಇದು ಅವರ ಮೊದಲ ಚಿತ್ರವಾಗಿತ್ತು. ಕುಟುಂಬದ ಸದಸ್ಯರು ಮೊದಲ ಪ್ರೇಕ್ಷಕರಾಗಿದ್ದರು.

  ಕಣ್ಣಿನ ದೃಷ್ಟಿ ಕಾಣದಂತೆ ಆಗಿತ್ತು

  ಕಣ್ಣಿನ ದೃಷ್ಟಿ ಕಾಣದಂತೆ ಆಗಿತ್ತು

  ದಾದಾಸಾಹೇಬ್ ಅವರಿಗೆ 40 ನೇಯ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಕಣ್ಣು ಸರಿಯಾಗಿ ಕಾಣದಾಯಿತು. ಸಿನಿಮಾ ಮಾಡುವ ಅವರ ಆಸೆಗೆ ಕೊಡಲಿ ಪೆಟ್ಟು ಬಿತ್ತು. ಆದರೆ ಅವರ ಸ್ನೇಹಿತ ವೈದ್ಯ ಡಾ.ಪ್ರಭಾಕರ್ ಚಿಕಿತ್ಸೆ ಮೂಲಕ ಮತ್ತೆ ಪಾಲ್ಕೆ ಅವರ ಕಣ್ಣುಗಳು ಕಾಣುವಂತಾಯಿತು.

  ಅಪ್ಪಟ ಭಾರತೀಯ ಚಿತ್ರ ಮಾಡಬೇಕೆಂಬ ಕನಸಿನಿಂದ ತಮ್ಮ ಎಲ್ಲ ವಸ್ತುಗಳನ್ನು ಅಡವಿಟ್ಟು, ಚಿತ್ರ ನಿರ್ಮಾಣಕ್ಕೆ ಬೇಕಾಗುವ ಯಂತ್ರೋಪಕರಣಗಳನ್ನು ಖರೀದಿಸಲು ಲಂಡನ್ನಿಗೆ ಹೋದರು. ಅಲ್ಲಿಯೇ ಚಿತ್ರ ನಿರ್ಮಾಪಕ ಸಿಸಿಲ್ ಅವರ ಜೊತೆಗೆ ಚಲನಚಿತ್ರ ನಿರ್ಮಾಣದ ಎಲ್ಲಾ ಭಾಗಗಳನ್ನು ಅಧ್ಯಯನ ಮಾಡಿ ಮರಳಿದರು.

  ಪತ್ನಿಯ ಒಡವೆಗಳನ್ನು ಅಡವಿಟ್ಟು ಸಿನಿಮಾ ಮಾಡಿದರು

  ಪತ್ನಿಯ ಒಡವೆಗಳನ್ನು ಅಡವಿಟ್ಟು ಸಿನಿಮಾ ಮಾಡಿದರು

  ಆ ವೇಳೆ ಸಿನಿಮಾ ಮೇಕಿಂಗ್ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಪಾಲ್ಕೆ ಅವರು ತಾವೇ ಒಂದು ಸಿನಿಮಾ ಮಾಡಬೇಕು ಎಂದಾಗ ಹಣದ ಕೊರತೆ ಎದುರಾಯಿತು. ಆ ವೇಳೆ ಪತ್ನಿ ಸರಸ್ವತೀಬಾಯಿ ಅವರ ಒಡವೆಗಳನ್ನು ಅಡವಿಟ್ಟು ಮರಾಠಿ ಚಿತ್ರ 'ರಾಜಾ ಹರಿಶ್ಚಂದ್ರ' (1913) ಸಿನಿಮಾ ಮಾಡಿದರು. ನಟನೆ, ಕಥೆ, ನಿರ್ಮಾಣ, ನಿರ್ದೇಶನ ಮತ್ತು ಛಾಯಾಗ್ರಹಣ ಎಲ್ಲ ವಿಭಾಗವನನ್ನು ಕಟ್ಟುನಿಟ್ಟಾಗಿ ನಿರ್ವಹಿಸಿದರು. ಅವರ ಮನೆಯೇ ಫಾಲ್ಕೆ ಫಿಲ್ಮ್ ಸಂಸ್ಥೆ ಆಗಿತ್ತು. ಇಡೀ ಚಿತ್ರತಂಡದವರಿಗೆ ಪಾಲ್ಕೆ ಪತ್ನಿ ಸರಸ್ವತೀಬಾಯಿಯವರೇ ಊಟ, ಉಪಚಾರದ ವ್ಯವಸ್ಥೆ ಮಾಡಿದ್ದರು.

  ಸಿನಿಮಾ ನೋಡಿ ಎಲ್ಲರೂ ಬೆರಗಾಗಿದರು

  ಸಿನಿಮಾ ನೋಡಿ ಎಲ್ಲರೂ ಬೆರಗಾಗಿದರು

  ಏಪ್ರಿಲ್ 21, 1913 ರಂದು ಮುಂಬಯಿಯ ಒಲಂಪಿಯಾ ಚಿತ್ರಮಂದಿರದಲ್ಲಿ ಅಲ್ಲಿನ ಶ್ರಿಮಂತರು, ಪತ್ರಿಕಾ ರಂಗದವರು, ಕೆಲವು ಮಹನೀಯರ ಮುಂದೆ ಬಿಡುಗಡೆಗೆ ಮೊದಲು ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಚಿತ್ರವನ್ನು ನೋಡಿದ ಎಲ್ಲರೂ ಬೆರಗಾಗಿ ಹೋದರು. 1913, ಮೇ 13 ರಂದು 'ರಾಜಾ ಹರಿಶ್ಚಂದ್ರ' ಸಿನಿಮಾ ಬಿಡುಗಡೆಯಾಯಿತು. ಇಡೀ ಭಾರತ ಚಿತ್ರರಂಗದಲ್ಲಿ ತೆರೆಗೆ ಬಂದ ಮೊದಲ ಸಿನಿಮಾ ಇದಾಯಿತು. ಹಣ ಹೊಂದಿದವರು ಮುಂಬೈನ ಕಾರೋನೇಷನ್ ಚಿತ್ರಮಂದಿರದ ಒಳಗೆ ಸಿನಿಮಾ ನೋಡುತ್ತಿದ್ದರೆ ಹಣವಿಲ್ಲದವರು ಥಿಯೇಟರ್ ಹೊರಗೆ ಕುತೂಹಲದಿಂದ ಗುಂಪು ಕಟ್ಟಿದ್ದರು. ತೆರೆ ಮೇಲೆ ಭಾರತೀಯ ಕಲಾವಿದರನ್ನು ನೋಡಿ ಎಲ್ಲರೂ ಬೆರಗಾದರು. ಆದರೆ ಸಿನಿಮಾಗೆ ದೊಡ್ಡ ಗೆಲುವು ಸಿಗಲಿಲ್ಲ.

  ಫಾದರ್ ಆಫ್ ಇಂಡಿಯನ್ ಸಿನಿಮಾ

  ಫಾದರ್ ಆಫ್ ಇಂಡಿಯನ್ ಸಿನಿಮಾ

  ಈ ಸಿನಿಮಾದ ಮೂಲಕ ದಾದಾಸಾಹೇಬ್ ಪಾಲ್ಕೆ ಭಾರತದ ಮೊದಲ ಸಿನಿಮಾ ನಿರ್ದೇಶಕ ಎನ್ನುವ ಖ್ಯಾತಿ ಪಡೆದರು. ಬಳಿಕ 95 ಸಿನಿಮಾ ನಿರ್ದೇಶನ, 27 ಕಿರುಚಿತ್ರ ನಿರ್ದೇಶನವನ್ನು ಮಾಡಿದರು.

  'ಮೋಹಿನಿ ಬಸ್ಮಾಸುರ್', 'ಸತ್ಯವಾನ್ ಸಾವಿತ್ರಿ', 'ಲಂಕಾ ದಹನ್' ಮತ್ತು 'ಶ್ರೀ ಕೃಷ್ಣ ಜನ್ಮ' ಇವರ ಪ್ರಮುಖ ಸಿನಿಮಾಗಳಾಗಿವೆ. ಇನ್ನು ಭಾರತ ಸರ್ಕಾರ ಇವರ ಹೆಸರಿನಲ್ಲಿ ನೀಡುವ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾಗಿದೆ.

  English summary
  Father of indian cinema Dadasaheb Phalke's 148 birth anniversary. Dadasaheb Phalke is a Indian producer, director, screenwriter his 'Raja Harishchandra' is first Indian cinema released in 1913.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X