»   » 'ಬಿಸಿಲು ಕುದುರೆ' ನಿರ್ಮಾಪಕ ಕುಮಾರ್ ಮೇಲೆ ರೇಪ್ ಕೇಸ್

'ಬಿಸಿಲು ಕುದುರೆ' ನಿರ್ಮಾಪಕ ಕುಮಾರ್ ಮೇಲೆ ರೇಪ್ ಕೇಸ್

Posted By:
Subscribe to Filmibeat Kannada

'ಬಿಸಿಲು ಕುದುರೆ' ಚಿತ್ರದ ನಿರ್ಮಾಪಕ ಕುಮಾರ್ ಮೇಲೆ ಅತ್ಯಾಚಾರ ಯತ್ನದ ಆರೋಪ ಕೇಳಿಬಂದಿದೆ. ಶೂಟಿಂಗ್ ಗಾಗಿ ಶಿವಮೊಗ್ಗಕ್ಕೆ ತೆರಳಿದಾಗ ನಿರ್ಮಾಪಕ ಕುಮಾರ್ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಅಂತ ಆರೋಪಿಸಿ ಸಹ ನಟಿಯೊಬ್ಬರು ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೊಸಬರೆಲ್ಲಾ ಸೇರಿ ರೆಡಿಮಾಡುತ್ತಿರುವ 'ಬಿಸಿಲು ಕುದುರೆ' ಚಿತ್ರದ ಚಿತ್ರೀಕರಣ ಶಿವಮೊಗ್ಗದ ಸುಂದರ ತಾಣಗಳಲ್ಲಿ ಫಿಕ್ಸ್ ಆಗಿತ್ತು. ಮೇ 21 ರಂದು ಚಿತ್ರದ ನಾಯಕ-ನಾಯಕಿ ಸೇರಿದಂತೆ ಇಡೀ ಚಿತ್ರತಂಡ ಶಿವಮೊಗ್ಗಗೆ ಪಯಣ ಬೆಳೆಸಿತ್ತು.

Film Actress files complaint on Producer Kumar for attempting rape

ಇದೇ ಸಂದರ್ಭದಲ್ಲಿ ನಾಯಕಿಯ ಸ್ನೇಹಿತೆ ಪಾತ್ರ ನಿರ್ವಹಿಸುತ್ತಿದ್ದ ನಟಿ ಮೇಲೆ ಕುಮಾರ್ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ತನ್ನ ಪತಿಗೆ ವಿಷಯ ತಿಳಿಸಿದ ಸಹನಟಿ, ಶಿವಮೊಗ್ಗ ಮಹಿಳಾ ಠಾಣೆಗೆ ದೂರು ನೀಡಿ ಬೆಂಗಳೂರಿಗೆ ಮರಳಿದ್ದಾರೆ. [ಅತ್ಯಾಚಾರಿಗಳ ಮೂಳೆ ಮುರೀತೀನಿ: ಅರ್ಜುನ್ ಸರ್ಜಾ]

ಅಲ್ಲದೇ, ಪ್ರಕರಣವನ್ನ ರಾಜ್ಯ ಮಹಿಳಾ ಆಯೋಗ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗಮನಕ್ಕೆ ತರಲು ಮುಂದಾಗಿದ್ದಾರೆ. ಹಿಂದಿ ಟಿವಿ ನಟಿಯರ ಮೇಲೆ ಕನ್ನಡ ಮತ್ತು ತೆಲುಗು ನಿರ್ಮಾಪಕರು ಅತ್ಯಾಚಾರ ಎಸಗಿರುವ ಸುದ್ದಿ ಇತ್ತೀಚೆಗಷ್ಟೇ ಬ್ರೇಕ್ ಆಗಿತ್ತು. ಅದರ ಬೆನ್ನಲ್ಲೇ ಕರುನಾಡಲ್ಲಿ ಇಂತಹ ಘಟನೆ ನಡೆದಿರುವುದು ಶೋಚನೀಯ. (ಏಜೆನ್ಸೀಸ್)

English summary
Film Actress (Name undisclosed) has filed a complaint on Producer Kumar for attempting rape on her. This incident happened in Shivamogga, when the team 'Bisilukudure' was on shoot.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada