For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಫಿಲಂ ನಿರ್ಮಾಪಕನಿಗೆ ಕೊಲೆ ಕೇಸಲ್ಲಿ ಜೀವಾವಧಿ ಶಿಕ್ಷೆ

  By ಜೇಮ್ಸ್ ಮಾರ್ಟಿನ್
  |

  ಯುವ ನಟ ವಿನೋದ್ ಕುಮಾರ್ ನನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಚಲನಚಿತ್ರ ನಿರ್ಮಾಪಕ ಗೋವರ್ಧನ್ ಮೂರ್ತಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕೊಲೆ ಕೇಸಿನಲ್ಲಿ ಗೋವರ್ಧನ್ ಮೂರ್ತಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ. ಹೈಕೋರ್ಟ್ ವಿಭಾಗೀಯ ಪೀಠವು ಮಾರ್ಚ್ 20ರಂದು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

  ಅತ್ಯಾಚಾರ, ಕೊಲೆ ಆರೋಪ ಹೊತ್ತು ಜೈಲು ಪಾಲಾಗಿದ್ದ ನಿರ್ಮಾಪಕ ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮಿ ಗೋವರ್ಧನ್ ಮೂರ್ತಿ ಈಗ ತಮ್ಮ ಬದುಕಿನ ಕಹಿನೆನಪು ಮರೆತು ಹೊಸ ಬದುಕಿನತ್ತ ಹೆಜ್ಜೆ ಇಟ್ಟಿದ್ದರು.ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಮಂಜುಳಾ ಹಾಗೂ ಚಿತ್ರ ನಿರ್ಮಾಪಕ ಗೋವರ್ಧನ ಮೂರ್ತಿ ಅವರ ವಿವಾಹ ಸರಳವಾಗಿ ವಿವಾಹವಾಗಿದ್ದರು. ಚಿತ್ರರಂಗದ ಸಹವಾಸವೇ ಬೇಡ ಎಂದು ದೂರಾಗಿದ್ದರು.

  ಆದರೆ, ಖುಲಾಸೆಗೊಂಡಿದ್ದ ಪ್ರಕರಣ ಮತ್ತೆ ವಿಚಾರಣೆಗೆ ಬಂದಿದ್ದು, ಗೋವರ್ಧನ್ ವಿರುದ್ಧ ಆದೇಶ ಬಂದಿದೆ. ಶಿವರಾಜ್ ಕುಮಾರ್ ನಟನೆಯ 'ಮಾದೇಶ' ಚಿತ್ರದ ನಿರ್ಮಾಪಕ ಗೋವರ್ಧನ್ ಮೂರ್ತಿ ಹಾಗೂ ಆತನ ಅಂಗರಕ್ಷಕರು ಅಕ್ಟೋಬರ್ 9, 2008ರ ಮಧ್ಯರಾತ್ರಿ ಬೆಂಗಳೂರಿನ ಹೊರವಲಯದ ಬಾಗಲೂರಿನ ಫಾರಂಹೌಸೊಂದರಲ್ಲಿ ವಿನೋದ್ ಕುಮಾರ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದರು. ಘಟನೆ ತಪ್ಪಿಸಿಕೊಂಡಿದ್ದ ಗೋವರ್ಧನ್ ರನ್ನು ಕೊಚ್ಚಿಯಲ್ಲಿ ಬಂಧಿಸಲಾಗಿತ್ತು. 2012ರಲ್ಲಿ ಈ ಕೇಸಿನಿಂದ ಖುಲಾಸೆಗೊಂಡಿದ್ದರು.

  ಹೈಕೋರ್ಟ್ ವಿಭಾಗೀಯ ಪೀಠದಿಂದ ಶಿಕ್ಷೆ

  ಹೈಕೋರ್ಟ್ ವಿಭಾಗೀಯ ಪೀಠದಿಂದ ಶಿಕ್ಷೆ

  ಸೆಷನ್ಸ್ ಕೋರ್ಟ್ ಪ್ರಕರಣದಿಂದ ಖುಲಾಸೆಗೊಂಡಿದ್ದ ಗೋವರ್ಧನ್ ಮದುವೆಯಾಗಿ ಕೇಸ್ ಬಗ್ಗೆ ಮರೆತ್ತಿದ್ದರು. ಸೆಷನ್ಸ್ ಕೋರ್ಟ್ ಖುಲಾಸೆ ಪ್ರಶ್ನಿಸಿ ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು ಸ್ ಪಿ. ಪಿ. ವಿ.ಎಂ. ಶೀಲವಂತರ್ ವಾದಿಸಿದ್ದರು. ನ್ಯಾ.ಎಸ್.ಎನ್.ಸತ್ಯನಾರಾಯಣ, ಎಚ್.ಪಿ.ಸಂದೇಶ್ ರವರಿದ್ದಹೈಕೋರ್ಟ್ ವಿಭಾಗೀಯ ಪೀಠವು ಅಪರಾಧಿ ಗೋವರ್ದನ ಮೂರ್ತಿಗೆ 5 ಲಕ್ಷ ದಂಡ ವಿಧಿಸಿದ್ದು, ದಂಡದ ಮೊತ್ತದಲ್ಲಿ4.50 ಲಕ್ಷ ರು ವಿನೋದ್ ತಾಯಿಗೆ ಸಂದಾಯ ಮಾಡುವಂತೆ ಸೂಚಿಸಿದೆ.

  ಬಾಗಲೂರಿನ ಗೆಸ್ಟ್ ಹೌಸ್ ನಲ್ಲಿ ನಡೆದಿದ್ದ ಘಟನೆ

  ಬಾಗಲೂರಿನ ಗೆಸ್ಟ್ ಹೌಸ್ ನಲ್ಲಿ ನಡೆದಿದ್ದ ಘಟನೆ

  ಬಾಗಲೂರಿನ ಎಲ್ ಜಿ ರೋಸ್ ಗೆಸ್ಟ್ ಹೌಸ್ ಬಳಿ ಶೂಟೌಟ್ ನಡೆದಿತ್ತು. ಅಕ್ಟೋಬರ್ 6-7 ರ ರಾತ್ರಿ 2008 ರಲ್ಲಿ ಗುಂಡಿನ ಪಾರ್ಟಿ ವೇಳೆ ಗುಂಡಿನ ಸದ್ದು ಜೋರಾಗಿ ಕೇಳಿಸಿತ್ತು. 7.7 ಪಿಸ್ತೂಲಿನಿಂದ ಹಾರಿದ್ದ ಎರಡು ಗುಂಡು ವಿನೋದ್ ಹೊಟ್ಟೆ ಸೇರಿತ್ತು. ಚಿಕಿತ್ಸೆ ಫಲಕಾರಿಯಾಗದೆ ವಿನೋದ್ ಮೃತಪಟ್ಟಿದ್ದ. ನಿರ್ಮಾಪಕ ಗೋವರ್ಧನ್ ನಾಪತ್ತೆಯಾಗಿ ನಂತರ ಪೊಲೀಸ್ ವಶಕ್ಕೆ ಸಿಕ್ಕಿಬಿದ್ದಿದ್ದರು.

  ಕೇಸ್ ಖುಲಾಸೆ ಬೆನ್ನಲ್ಲೇ ಮದುವೆ

  ಕೇಸ್ ಖುಲಾಸೆ ಬೆನ್ನಲ್ಲೇ ಮದುವೆ

  2017ರಲ್ಲಿ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಮಂಜುಳಾ ಹಾಗೂ ಚಿತ್ರ ನಿರ್ಮಾಪಕ ಗೋವರ್ಧನ ಮೂರ್ತಿ ಅವರ ವಿವಾಹ ಸರಳವಾಗಿ ದೇವಸ್ಥಾನವೊಂದರಲ್ಲಿ ನಂತರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಲಾಯಿತು. ಎಚ್. ಎಂ. ರೇವಣ್ಣ ಅವರ ಆಪ್ತ ಸಂಬಂಧಿಯಾದ ಮಂಜುಳಾ ಅವರು ಕಾಂಗ್ರೆಸ್ಸಿನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಬಲ ನಾಯಕಿ ಎಂದೇ ಗುರುತಿಸಿಕೊಂಡಿದ್ದಾರೆ.

  ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದರು

  ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದರು

  ಮಹಾರಾಷ್ಟ್ರ ಮೂಲದ ಯುವತಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವರ್ಧನ ಮೂರ್ತಿ ಅವರನ್ನು ಬೆಂಗಳೂರಿನ ಅಶೋಕನಗರ ಪೊಲೀಸರು ಬಂಧಿಸಿದ್ದರು. 'ಗೋವರ್ಧನ ಮೂರ್ತಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ, ಮದುವೆ ಮಾಡಿಕೊಳ್ಳುವಂತೆ ತಿಳಿಸಿದರೂ ಆತ ನಿರಾಕರಿಸುತ್ತಿದ್ದಾನೆ' ಎಂದು ಮಹಾರಾಷ್ಟ್ರದ ರತ್ನಗಿರಿ ಮೂಲದ 20 ವರ್ಷ ವಯಸ್ಸಿನ ಯುವತಿ ಬಳ್ಳಾರಿಯಲ್ಲಿಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದಳು.

  English summary
  Kannada film producer, Govardhan Murthy convicted in murder case gets life term. HC order life term to Govardhan for killing budding actor Vinod Kumar on Tuesday, Oct 7, 2008 by shooting from a 7.7 mm pistol following a drunken brawl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X