»   » ನಟಿ ಅಮಲಾ ಪೌಲ್ ಗೆ ವಿಚ್ಛೇದನ: ಪತಿ ವಿಜಯ್ ಬಾಯ್ಬಿಟ್ಟ ಸತ್ಯ ಏನು.?

ನಟಿ ಅಮಲಾ ಪೌಲ್ ಗೆ ವಿಚ್ಛೇದನ: ಪತಿ ವಿಜಯ್ ಬಾಯ್ಬಿಟ್ಟ ಸತ್ಯ ಏನು.?

Posted By:
Subscribe to Filmibeat Kannada

ಅಂತೂ ಎಲ್ಲಾ ಅಂತೆ-ಕಂತೆಗಳಿಗೆ ತೆರೆ ಬಿದ್ದಿದೆ. ನಟಿ ಅಮಲಾ ಪೌಲ್ ಹಾಗೂ ನಿರ್ದೇಶಕ ಎ.ಎಲ್.ವಿಜಯ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿರುವ ಕುರಿತು ಸ್ವತಃ ಎ.ಎಲ್.ವಿಜಯ್ ಬಾಯ್ಬಿಟ್ಟಿದ್ದಾರೆ.

''ಈ ವಿಚಾರದ ಬಗ್ಗೆ ನಾನು ಏನನ್ನೂ ಹೇಳಲು ಇಷ್ಟ ಪಡುವುದಿಲ್ಲ. ನನ್ನ ತಂದೆ-ತಾಯಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ'' ಅಂತ ಈ ಹಿಂದೆ ತಮಿಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ವಿಜಯ್ ಇದೀಗ ತಮ್ಮ ಮನದಾಳದಲ್ಲಿ ಅಡಗಿದ್ದ ಕೆಲ ಸಂಗತಿಗಳನ್ನ ಪತ್ರಿಕಾ ಪ್ರಕಟನೆಯ ಮೂಲಕ ಹಂಚಿಕೊಂಡಿದ್ದಾರೆ. [ನಟಿ ಅಮಲಾ ಪೌಲ್ - ವಿಜಯ್ ಗಲಾಟೆ ಸಂಸಾರದ ಗುಟ್ಟು ರಟ್ಟು.!]

ಕೇವಲ ಎರಡು ವರ್ಷಗಳಲ್ಲಿ ತಮ್ಮ ಸಂಸಾರದ ದೋಣಿ ಮುಳುಗಲು ಕಾರಣವಾದ ಅಂಶಗಳೇನು ಎಂಬುದರ ಕುರಿತು ನಟಿ ಅಮಲಾ ಪೌಲ್ ಪತಿ ಎ.ಎಲ್.ವಿಜಯ್ ಹೊರಡಿಸಿರುವ ಸುದೀರ್ಘ ಪತ್ರಿಕಾ ಪ್ರಕಟನೆಯ ಅನುವಾದ ರೂಪ ಇಲ್ಲಿದೆ, ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ.....

ಯಾವುದು ಸತ್ಯ.? ಯಾವುದು ಸುಳ್ಳು.?

''ನಾನು ಮತ್ತು ಅಮಲಾ ಪೌಲ್ ಬೇರೆ ಆಗುತ್ತಿರುವ ಕುರಿತು ಊಹಾಪೋಹ ಸುದ್ದಿಗಳನ್ನು ಸಾಕಷ್ಟು ನೋಡಿದ್ದೇನೆ, ಓದಿದ್ದೇನೆ. ನಾನು ಮತ್ತು ಅಮಲಾ ದೂರ ಆಗಲು ನಿರ್ಧರಿಸಿರುವುದು ಮಾತ್ರ ಸತ್ಯ. ಬಾಕಿ ಎಲ್ಲಾ ಸುಳ್ಳು ಅಂತ ನಾನು ಮೊದಲು ಸ್ಪಷ್ಟಪಡಿಸುತ್ತೇನೆ'' - ಎ.ಎಲ್.ವಿಜಯ್, ಅಮಲಾ ಪೌಲ್ ಪತಿ [ಸೊಸೆ ಅಮಲಾ ಪೌಲ್ ವಿರುದ್ಧ ವಿಜಯ್ ತಂದೆ ಕಿಡಿ.! ಯಾಕೆ.?]

ವಿಚ್ಛೇದನಕ್ಕೆ ಕಾರಣ.?

''ನಾವಿಬ್ಬರು ಬೇರೆ ಆಗಲು ಕಾರಣ ಏನು ಎಂಬುದು ನನಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ'' - ಎ.ಎಲ್.ವಿಜಯ್, ಅಮಲಾ ಪೌಲ್ ಪತಿ [ನಟಿ ಅಮಲಾ ಪೌಲ್ ಸಂಸಾರದಲ್ಲಿ ಬಿರುಗಾಳಿ..! ಕಾರಣ ಯಾರು.?]

ಖಾಸಗಿ ವಿಚಾರ

''ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು ಬಾಯ್ಬಿಟ್ಟು ಹೇಳುವಂತೆ ನನ್ನ ಸ್ನೇಹಿತರು, ಚಿತ್ರರಂಗದ ಹಿತೈಷಿಗಳು ಹಾಗೂ ಮಾಧ್ಯಮ ಗೆಳೆಯರು ಸಲಹೆ ನೀಡಿದ್ರು. ಆದ್ರೆ, ನನ್ನ ಖಾಸಗಿ ವಿಚಾರವನ್ನ ಪಬ್ಲಿಕ್ ಮಾಡುವುದು ನನಗೆ ಇಷ್ಟವಿಲ್ಲ'' - ಎ.ಎಲ್.ವಿಜಯ್, ಅಮಲಾ ಪೌಲ್ ಪತಿ [ಗಂಡನೊಂದಿಗೆ ಮುನಿಸಿಕೊಂಡ ತಾರೆ ಅಮಲಾ ಪೌಲ್]

ನನ್ನ ತಂದೆಗೂ ನೋವಾಗಿದೆ!

''ಕುಟುಂಬದಲ್ಲಿ ಆಗಿರುವ ಕೆಲ ಮನಸ್ತಾಪಗಳಿಂದ ನನ್ನ ತಂದೆಗೂ ನೋವಾಗಿದೆ. ಅದನ್ನೇ ಅವರು ತಮಿಳು ವಾಹಿನಿಯೊಂದರಲ್ಲಿ ಹೇಳಿಕೊಂಡಿದ್ದಾರೆ (ಹೇಳಿಕೆ ನೀಡಿ ಅಂತ ಬಲವಂತ ಮಾಡಿದಾಗ). ದುರಾದೃಷ್ಟವಶಾತ್, ಎಲ್ಲಾ ಅಂತೆ-ಕಂತೆಗಳಿಗೆ ಅದೇ ಹೇಳಿಕೆ ಪುಷ್ಟಿ ನೀಡುವಂತೆ ಆಗಿದೆ'' - ಎ.ಎಲ್.ವಿಜಯ್, ಅಮಲಾ ಪೌಲ್ ಪತಿ

ಹೆಣ್ಣಿಗೆ ನಾನು ಗೌರವ ನೀಡುತ್ತೇನೆ

''ನನಗಿರುವ ಸಾಮಾಜಿಕ ಜವಾಬ್ದಾರಿ ಬಗ್ಗೆ ಅರಿವಿದೆ. ಇಲ್ಲಿಯವರೆಗೂ ನಾನು 9 ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಆ ಎಲ್ಲಾ ಚಿತ್ರಗಳಲ್ಲೂ ನಾನು ಹೆಣ್ಣಿಗೆ ಉತ್ತಮ ಸ್ಥಾನ-ಮಾನ ನೀಡಿರುವುದರಲ್ಲೇ, ನಾನು ಹೆಣ್ಣಿಗೆ ನೀಡುವ ಗೌರವ ಎಂಥದ್ದು ಎಂಬುದು ಸೂಚಿಸುತ್ತೆ'' - ಎ.ಎಲ್.ವಿಜಯ್, ಅಮಲಾ ಪೌಲ್ ಪತಿ

ಅಮಲಾಗೆ ಸಪೋರ್ಟ್ ಮಾಡಿದ್ದೆ

''ಅಮಲಾ ಮತ್ತು ಆಕೆಯ ಆಯ್ಕೆಗೆ ನಾನು ಸ್ವಾತಂತ್ರ್ಯ ನೀಡಿದ್ದೇನೆ. ಚಿತ್ರರಂಗದಲ್ಲಿ ಮುಂದುವರಿಯುವ ಬಗ್ಗೆ ಅಮಲಾ ನಿರ್ಧಾರ ಮಾಡಿದಾಗ, ನಾನು ಸಪೋರ್ಟ್ ಮಾಡಿದ್ದೆ. ಮದುವೆ ನಂತರ ಕೂಡ ಆಕೆ ನಟಿಸುತ್ತಿದ್ದರು'' - ಎ.ಎಲ್.ವಿಜಯ್, ಅಮಲಾ ಪೌಲ್ ಪತಿ

ಶುದ್ಧ ಸುಳ್ಳು!

''ಚಿತ್ರರಂಗದಲ್ಲಿ ಅಮಲಾ ಮುಂದುವರಿಯಲು ನಾನು ಮತ್ತು ನನ್ನ ಕುಟುಂಬ ಬಿಡುತ್ತಿಲ್ಲ ಎಂಬ ಸುದ್ದಿ ಶುದ್ಧ ಸುಳ್ಳು'' - ಎ.ಎಲ್.ವಿಜಯ್, ಅಮಲಾ ಪೌಲ್ ಪತಿ

ನಂಬಿಕೆಗೆ ವಂಚನೆ.!

''ಮದುವೆಯ ಅನುಬಂಧದಲ್ಲಿ ಸತ್ಯ ಹಾಗೂ ನಂಬಿಕೆ ಮುಖ್ಯ. ಅದಕ್ಕೆ ವಂಚನೆ ಆದಾಗ ಸಂಬಂಧಕ್ಕೆ ಬೆಲೆ ಇರುವುದಿಲ್ಲ'' - ಎ.ಎಲ್.ವಿಜಯ್, ಅಮಲಾ ಪೌಲ್ ಪತಿ

ಬೇರೆ ದಾರಿ ಇಲ್ಲ!

''ನನ್ನ ಪ್ರೀತಿ, ಮದುವೆ ಹೀಗೆ ಮುಕ್ತಾಯ ಆಗುತ್ತೆ ಅಂತ ನಾನು ಎಂದೂ ಯೋಚಿಸಿರಲಿಲ್ಲ. ಆದರೂ, ಹೌದು. ಇಂದು ನನಗೆ ಬೇರೆ ದಾರಿ ಇಲ್ಲ'' - ಎ.ಎಲ್.ವಿಜಯ್, ಅಮಲಾ ಪೌಲ್ ಪತಿ

ನೋವಾಗಿದೆ!

''ಮನಸ್ಸಿನಲ್ಲಿ ದುಗುಡ ತುಂಬಿಕೊಂಡು, ಬದುಕಿನಲ್ಲಿ ಮುನ್ನಡೆಯಲು ನಾನು ನಿರ್ಧರಿಸಿದ್ದೇನೆ. ಸತ್ಯ ತಿಳಿಯದೆ 'ಲಿಂಗ ತಾರತಮ್ಯ' ಅಂತ ಕೆಲ ಮಾಧ್ಯಮಗಳು ಮಾಡುತ್ತಿರುವ ಸುದ್ದಿ ವೈಯುಕ್ತಿಕವಾಗಿ ನೋವುಂಟು ಮಾಡಿದೆ'' - ಎ.ಎಲ್.ವಿಜಯ್, ಅಮಲಾ ಪೌಲ್ ಪತಿ

ಊಹಾಪೋಹಗಳಿಗೆ ಮಾನ್ಯತೆ ಬೇಡ

''ಯಾವುದೇ ಊಹಾಪೋಹಗಳಿಗೆ ಮಾನ್ಯತೆ ಕೊಡದೆ, ನನ್ನ ವೈಯುಕ್ತಿಕ ಜೀವನಕ್ಕೆ ಬೆಲೆ ಕೊಟ್ಟರೆ, ನಿಮಗೆಲ್ಲಾ ನಾನು ಕೃತಜ್ಞತೆ ಸಲ್ಲಿಸುತ್ತೇನೆ'' - ಎ.ಎಲ್.ವಿಜಯ್, ಅಮಲಾ ಪೌಲ್ ಪತಿ

ವಿಡಿಯೋ ನೋಡಿ....

ಅಮಲಾ ಪೌಲ್ ಮತ್ತು ಎ.ಎಲ್.ವಿಜಯ್ ವಿಚ್ಛೇದನ ಸುದ್ದಿ ಕುರಿತು ವಿಡಿಯೋ ಇಲ್ಲಿದೆ ನೋಡಿ....

English summary
Director A.L.Vijay has finally come out and issued a Press Statement, clarifying why he and his wife, Actress Amala Paul chose to part ways.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada