»   » ಅಣ್ಣಾವ್ರ ಲುಕ್ ನಲ್ಲಿ 'ದೊಡ್ಮನೆ ಹುಡುಗ' ಪುನೀತ್

ಅಣ್ಣಾವ್ರ ಲುಕ್ ನಲ್ಲಿ 'ದೊಡ್ಮನೆ ಹುಡುಗ' ಪುನೀತ್

Posted By:
Subscribe to Filmibeat Kannada

ಹೋಳಿ ಹಬ್ಬದ ದಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಸಿನಿಮಾ ಸೆಟ್ಟೇರ್ತು. ಅಪ್ಪು ಮನೆಯಲ್ಲಿ ಚಿತ್ರದ ಮುಹೂರ್ತ ಶಾಟ್ ಕೂಡ ಸೆರೆಹಿಡಿಯಲಾಯ್ತು.

ಪಾರ್ವತಮ್ಮ ರಾಜ್ ಕುಮಾರ್ ಹಣೆಗೆ ಮುತ್ತು ಕೊಟ್ಟು ''ಅಭಿಮಾನಿಗಳು ನಮ್ಮನೆ ದೇವ್ರು'' ಅಂತ ಅಪ್ಪು ಡೈಲಾಗ್ ಹೊಡೆದರು. ಇದನ್ನ ಕೇಳಿದ ಕನ್ನಡ ಸಿನಿ ಪ್ರಿಯರು ತಕ್ಷಣ ನೆನಪಿಸಿಕೊಂಡಿದ್ದು ಅಣ್ಣಾವ್ರನ್ನ. ['ದೊಡ್ಮನೆ ಹುಡುಗ' ಪುನೀತ್ ಡೈಲಾಗ್ ಏನು ಗೊತ್ತಾ?]


First look poster of Puneeth Rajkumar's Dodmane Huduga out

ಎಲ್ಲೇ ಹೋದರೂ ''ಅಭಿಮಾನಿಗಳೇ ದೇವರು'' ಅಂತ ಅಪ್ಪಾಜಿ ಹೇಳ್ತಾಯಿದ್ರು. ಅಪ್ಪನಂತೆ ಮಗ ಕೂಡ 'ದೊಡ್ಡತನ' ಮೆರೆಯುತ್ತಿರುವ ಈ ಚಿತ್ರದಲ್ಲಿ ಅಪ್ಪು ಹೇಗೆ ಕಾಣಬಹುದು. 'ದೊಡ್ಮನೆ ಹುಡುಗ'ನ ಲುಕ್ ಹೇಗಿರಬಹುದು ಅನ್ನುವ ಕುತೂಹಲ ಎಲ್ಲರನ್ನ ಕಾಡುತ್ತಿತ್ತು. ಅದಕ್ಕೀಗ ಬ್ರೇಕ್ ಬಿದ್ದಿದೆ. [ಪುನೀತ್ 'ದೊಡ್ಮನೆ ಹುಡುಗ' ಭರ್ಜರಿ ಆರಂಭ]


'ದೊಡ್ಮನೆ ಹುಡುಗ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಔಟ್ ಆಗಿದೆ. ಅದರ ಝಲಕ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಸಿಕ್ಕಿದೆ ನೋಡಿ.....


First look poster of Puneeth Rajkumar's Dodmane Huduga out

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ 'ದೊಡ್ಮನೆ ಹುಡುಗ' ಪೋಸ್ಟರ್ ಗಳಲ್ಲಿ ಅಪ್ಪು ಮಿಂಚಿರುವುದು ಹೀಗೆ.


ಬಿಳಿ ಪಂಜೆ, ಶರ್ಟು ತೊಟ್ಟು ಅಪ್ಪಟ ಹಳ್ಳಿ ಸೊಗಡಿನ ಹುಡುಗನಂತೆ ಕಾಣುತ್ತಿರುವ ಅಪ್ಪುನ ನೋಡ್ತಿದ್ರೆ, ಎಲ್ಲರ ಕಣ್ಮುಂದೆಯೂ ಒಂದು ಕ್ಷಣ ಅಪ್ಪಾಜಿ ಬಂದು ಹೋಗೋದು ಸಹಜ. ಯಾಕಂದ್ರೆ, ಡಾ.ರಾಜ್ ಸದಾ ಧರಿಸ್ತಾಯಿದ್ದದ್ದು ಇಂತಹ ಶುಭ್ರ ಬಿಳಿ ಪಂಜೆ ಮತ್ತು ಶರ್ಟನ್ನೇ.


First look poster of Puneeth Rajkumar's Dodmane Huduga out

ಪುನೀತ್ ಬಾಯಿಂದ ಬಂದಿರುವ ಡೈಲಾಗು ಮತ್ತು ಇದೀಗ ಹೊರಬಿದ್ದಿರುವ ಫಸ್ಟ್ ಲುಕ್ ಪೋಸ್ಟರ್. ಇದನ್ನೆಲ್ಲಾ ನೋಡ್ತಿದ್ರೆ, ಸಿನಿಮಾಗೂ-ಅಪ್ಪು ನಿಜ ಜೀವನಕ್ಕೂ ಲಿಂಕ್ ಇದ್ದಹಾಗಿದೆ. ಆದ್ರೆ, ಇದೆಲ್ಲವನ್ನೂ ಸಸ್ಪೆನ್ಸ್ ನಲ್ಲಿಟ್ಟಿದ್ದಾರೆ ನಿರ್ದೇಶಕ ದುನಿಯಾ ಸೂರಿ.


ಅಪ್ಪು ಜೊತೆ 'ದೊಡ್ಮನೆ ಹುಡುಗ' ಚಿತ್ರದಲ್ಲಿ ನಾಯಕಿಯಾಗಿದ್ದಾರೆ ನಟಿ ರಾಧಿಕಾ ಪಂಡಿತ್. ಸದ್ಯಕ್ಕೆ 'ದೊಡ್ಮನೆ ಹುಡುಗ' ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ. (ಫಿಲ್ಮಿಬೀಟ್ ಕನ್ನಡ)

English summary
Power Star Puneeth Rajkumar starrer 'Dodmane Huduga' First look poster is out. Appu's look in poster resembles his father, Kannada Actor Dr.Rajkumar. The film also features Bharathi Vishnuvardhan, Ambarish and Radhika Pandit. 'Dodmane Huduga' is directed by Duniya Soori.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada