»   » ಡಬ್ಬಲ್ ರೋಡ್‌ ಫ್ಲೈ ಓವರ್ ಕಾಮಗಾರಿ ಮಾಡಿದ 'ಯು-ಟರ್ನ್' ಚಿತ್ರತಂಡ

ಡಬ್ಬಲ್ ರೋಡ್‌ ಫ್ಲೈ ಓವರ್ ಕಾಮಗಾರಿ ಮಾಡಿದ 'ಯು-ಟರ್ನ್' ಚಿತ್ರತಂಡ

Posted By:
Subscribe to Filmibeat Kannada

ವಾರದ ರಜಾ ದಿನ ಭಾನುವಾರ (ಜೂನ್ 5) 'ಯು-ಟರ್ನ್' ಚಿತ್ರದ ನಿರ್ದೇಶಕ ಪವನ್ ಕುಮಾರ್, ನಟಿ ರಾಧಿಕಾ ಚೇತನ್, ನಟಿ ಶ್ರದ್ಧಾ ಶ್ರೀನಾಥ್, ನಟ ದಿಲೀಪ್ ರಾಜ್ ಮತ್ತು ನಟ ರೋಜರ್ ನಾರಾಯಣ್ ಸೇರಿದಂತೆ ಇಡೀ ಚಿತ್ರತಂಡ ಬೆಂಗಳೂರಿನ ಡಬ್ಬಲ್ ರೋಡ್ ಫ್ಲೈ ಓವರ್ ಮೇಲೆ ಬೀಡು ಬಿಟ್ಟಿತ್ತು.

ಹೌದು ಇವರೆಲ್ಲಾ ಡಬ್ಬಲ್ ರೋಡ್ ಫ್ಲೈ ಓವರ್ ಮೇಲೆ ರಸ್ತೆ ರಿಪೇರಿ ಮಾಡುವ ಕಾರ್ಯದಲ್ಲಿ ಬ್ಯುಸಿಯಾಗಿದ್ದರು. ಅಂದಹಾಗೆ ಈ ಫ್ಲೈ ಓವರ್ ಮೇಲೆ ಯು-ಟರ್ನ್ ತೆಗೆದುಕೊಂಡವರಿಗೆ ಅಪಘಾತದ ಜೊತೆಗೆ ಅವರಿಗೆ ಏನೋ ಗ್ರಹಚಾರ ಕಾದಿದೆ ಅನ್ನೋದು ಇಡೀ 'ಯು-ಟರ್ನ್' ಚಿತ್ರದ ಕಥಾಹಂದರ.[ಯು ಟರ್ನ್: ಸಂದೇಶ ಸಾರುವ ತಿರುವಿನಲ್ಲಿ ಥ್ರಿಲ್ಲಿಂಗ್ ಪ್ರಯಾಣ]


ಆದ್ದರಿಂದ ನಿಜ ಜೀವನದಲ್ಲೂ ಅದೂ ಮಳೆಗಾಲದಲ್ಲಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೂ ಅಂತಹ ಪಾಡು ಬರೋದು ಬೇಡ ಅಂತ ಇಡೀ 'ಯು-ಟರ್ನ್' ಚಿತ್ರತಂಡದವರು ತಾವೇ ಖುದ್ದಾಗಿ ನಿಂತು ರಸ್ತೆ ರಿಪೇರಿ ಮಾಡಿದ್ದಾರೆ.['ಯು-ಟರ್ನ್' ತಗೊಂಡು 25 ಸಾವಿರ ರೂಪಾಯಿ ಬಹುಮಾನ ಗೆಲ್ಲಿ]


Fixing of Double Road Flyover divider with 'U turn' movie team

ಭಾನುವಾರ ಬೇರೆ ರಜಾ ದಿನ ಆಗಿರುವುದರಿಂದ ಟ್ರಾಫಿಕ್ ಕೂಡ ಕೊಂಚ ಕಡಿಮೆ ಇರುತ್ತೆ ಅನ್ನೋ ಹಿನ್ನಲೆಯಲ್ಲಿ ನಿರ್ದೇಶಕ ಪವನ್ ಕುಮಾರ್ ಸೇರಿದಂತೆ ಇಡೀ ಚಿತ್ರತಂಡ ಫ್ಲೈ ಓವರ್ ನಲ್ಲಿ ರಸ್ತೆ ರಿಪೇರಿ ಮಾಡಿದ್ದಾರೆ.


ಒಟ್ಟಾರೆ ರಿಯಲ್ ಆಗಿ ಯಾರಿಗಾದ್ರೂ ಅಪಘಾತ ಆಗಿ ಪ್ರಾಣಹಾನಿ ಸಂಭವವಿಸದೇ ಇರಲಿ ಅನ್ನೋ ಕಾಳಜಿ ವ್ಯಕ್ತಪಡಿಸಿರುವ ಪವನ್ ಕುಮಾರ್ ನಿರ್ದೇಶನದ 'ಯು-ಟರ್ನ್' ಚಿತ್ರತಂಡ ಚಿತ್ರದಲ್ಲಿ ಸಮಾಜಕ್ಕೆ ಸಂದೇಶ ನೀಡುವ ಜೊತೆಗೆ ರಿಯಲ್ ಆಗಿ ರಸ್ತೆ ಕಾಮಗಾರಿ ಮಾಡುವ ಮೂಲಕ ಇದೀಗ ಜನರ ಮೆಚ್ಚುಗೆ ಗಳಿಸಿದ್ದಾರೆ.[ಪವನ್ ರ 'ಯು-ಟರ್ನ್' ಚಿತ್ರವನ್ನು ವಿಮರ್ಶಕರು ಮೆಚ್ಚಿಕೊಂಡ್ರಾ?]


ಬೆಳ್ಳಂಬೆಳಗ್ಗೆ ಚಿತ್ರತಂಡದವರು ಸಮಾಜ ಸೇವೆ ಮಾಡುತ್ತಿರುವುದನ್ನು ನೋಡಿದ ಸಾರ್ವಜನಿಕರು ಹಾಗೂ ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ. (ಚಿತ್ರತಂಡದವರು ರಸ್ತೆ ಕಾಮಗಾರಿ ಮಾಡುತ್ತಿರುವ ಚಿತ್ರಗಳನ್ನು ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ..)


-
-
-
-
-
-
-
-
-
-
-
-
-
-
-
-
-
English summary
Kannada movie 'U Turn' team with professionals to fixing of Double Road Flyover divider.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada