For Quick Alerts
  ALLOW NOTIFICATIONS  
  For Daily Alerts

  ಹೊಸ ಸಿನಿಮಾಕ್ಕಾಗಿ ಭರ್ಜರಿ ತಯಾರಿ ನಡೆಸಿರುವ ಮಾಜಿ ಸಚಿವ ಚೆಲುವರಾಯಸ್ವಾಮಿ ಪುತ್ರ

  |

  ಸಿನಿಮಾ ತಾರೆಯರಾಗುವುದು ಹೊಸದೇನಲ್ಲ, ರಾಜಕಾರಣಿಗಳ ಮಕ್ಕಳು ಸಿನಿಮಾ ನಟರಾಗುವುದು ಸಹ ಹೊಸದಲ್ಲ. ಕೆಲವರು ಗೆದ್ದಿದ್ದಾರೆ, ಕೆಲವರು ಸೋತಿದ್ದಾರೆ. ಕೆಲವರು ಆರಕ್ಕೇರಿಲ್ಲ-ಮೂರಕ್ಕಿಳಿದಿಲ್ಲ, ಒಟ್ಟಿನಲ್ಲಿ ರಾಜಕಾರಣ-ಸಿನಿಮಾ ಮಾತ್ರ ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು ಸಾಗುತ್ತಲೇ ಇವೆ.

  ಇದೀಗ ಮಾಜಿ ಸಚಿವ ಚೆಲುವರಾಯಸ್ವಾಮಿ ಪುತ್ರನ ಹೊಸ ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ಚೆಲುವರಾಯಸ್ವಾಮಿ ಪುತ್ರ ಸಚಿನ್ ಚೆಲುವರಾಯಸ್ವಾಮಿ, 'ಬೆಂಗಳೂರು ಬಾಯ್' ಆಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

  ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾದ ಹೆಸರು ಘೋಷಣೆ

  ಸಚಿನ್ ಚೆಲುವರಾಯಸ್ವಾಮಿ ಅವರಿಗೆ 'ಬೆಂಗಳೂರು ಬಾಯ್' ಮೊದಲ ಸಿನಿಮಾ ಏನಲ್ಲ. ಇದಕ್ಕೂ ಮುನ್ನಾ ಒಂದು ಸಿನಿಮಾದಲ್ಲಿ ನಟಿಸಿದ್ದರು. ಈಗ ಮತ್ತೆ ಪ್ರೇಕ್ಷಕರ ಮುಂದೆ ಅದೇಷ್ಟ ಪರೀಕ್ಷೆಗೆ ಇಳಿದಿದ್ದಾರೆ ಸಚಿನ್ ಚೆಲುವರಾಯಸ್ವಾಮಿ.

  ರೊಮ್ಯಾಂಟಿಕ್ ಕಾಮಿಡಿ ಸಿನಿಮಾ

  ರೊಮ್ಯಾಂಟಿಕ್ ಕಾಮಿಡಿ ಸಿನಿಮಾ

  'ಬೆಂಗಳೂರು ಬಾಯ್ಸ್' ಹೆಸರಿನಿಂದಲೇ ಗುರುತಿಸಬಹುದು, ಸಿನಿಮಾ, ಬೆಂಗಳೂರಿನ ಯುವಕರ ತರಲೆ, ಪ್ರೀತಿ-ಪ್ರೇಮ, ಜಗಳ-ಹೊಡೆದಾಟಗಳ ಕೊಲ್ಯಾಜ್ ಆಗಿರುತ್ತದೆ ಎಂದು. ಜೊತೆಗೊಂದಿಷ್ಟು ಹಾಡುಗಳನ್ನೂ ಸಹ ನಿರೀಕ್ಷಿಸಬಹುದು.

  ಡಿ-ಬಾಸ್ ಸ್ಟೈಲ್‌ನಲ್ಲಿ ಸ್ಟಾರ್ ನಿರ್ದೇಶಕ: ಫಟ್ ಅಂತ ನೋಡಿದ್ರೆ ಗೊತ್ತೇ ಆಗಲ್ಲ

  ರ್ಯಾಪರ್ ಆಲ್ ಓಕೆ ಸಂಗೀತ

  ರ್ಯಾಪರ್ ಆಲ್ ಓಕೆ ಸಂಗೀತ

  'ಲಂಡನ್‌ನಲ್ಲಿ ಲಂಭೋದರ' ಎಂಬ ಸಿನಿಮಾ ನಿರ್ದೇಶಿಸಿದ್ದ ರಾಜ್ ಸೂರ್ಯ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ರ್ಯಾಪರ್ ಆಗಿ ಗುರುತಿಸಿಕೊಂಡಿರುವ ಅಲೋಕ್ ಈ ಸಿನಿಮಾ ಮೂಲಕ ಪೂರ್ಣಪ್ರಮಾಣದ ಸಂಗೀತ ನಿರ್ದೇಶಕ ಆಗಲಿದ್ದಾರೆ.

  ಹ್ಯಾಪಿ ಬರ್ತ್‌ಡೇ ಸಿನಿಮಾದಲ್ಲಿ ನಟಿಸಿದ್ದರು

  ಹ್ಯಾಪಿ ಬರ್ತ್‌ಡೇ ಸಿನಿಮಾದಲ್ಲಿ ನಟಿಸಿದ್ದರು

  ಸಚಿನ್ ಚೆಲುವರಾಯಸ್ವಾಮಿ ನಾಲ್ಕು ವರ್ಷಗಳ ಹಿಂದೆ 'ಹ್ಯಾಪಿ ಬರ್ತ್‌ಡೇ' ಎಂಬ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾದ ಬಳಿಕ ದೊಡ್ಡ ವಿರಾಮ ತೆಗೆದುಕೊಂಡಿರುವ ಸಚಿನ್, ಈ ಸಿನಿಮಾಕ್ಕಾಗಿ ಪೂರ್ಣ ತಯಾರಾಗಿದ್ದಾರಂತೆ. ಬಾಡಿ ಬಿಲ್ಡಿಂಗ್, ನೃತ್ಯ, ಪೈಟ್ಸ್‌ ಗಳಿಗೆ ವಿಶೇಷ ತರಬೇತಿ ಸಹ ಪಡೆದುಕೊಂಡಿದ್ದಾರಂತೆ ಸಚಿನ್.

  ಸ್ಯಾಂಡಲ್ ವುಡ್ ಗೆ ನಶೆಯ ನಂಟು: ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?

  ಪತ್ನಿ Revathi ಕಾಲೆಳೆದ Nikhil Kumaraswamy | Oneindia Kannada
  ಸಚಿನ್ ಹೊರತಾಗಿ ಮೂರು ಮುಖ್ಯ ಪಾತ್ರಗಳು

  ಸಚಿನ್ ಹೊರತಾಗಿ ಮೂರು ಮುಖ್ಯ ಪಾತ್ರಗಳು

  ಬಹುತಾರಾಗಣದ ಈ ಸಿನಿಮಾವನ್ನು ವಿಕ್ರಮ್ ಕೆ ಯಲ್ಲಯ್ಯ ಎಂಬುವರು ನಿರ್ಮಿಸುತ್ತಿದ್ದಾರೆ. ಸಿನಿಮಾದಲ್ಲಿ ಸಚಿನ್ ಚೆಲುವರಾಯಸ್ವಾಮಿ ಹೊರತಾಗಿ, ಚಂದನ್ ಆಚಾರ್, ಶ್ರೀ ಮಹದೇವ ಸಹ ಇದ್ದಾರೆ. ನಾಯಕಿ ಪಾತ್ರದಲ್ಲಿ ವೈನಿಧಿ ಜಗ್ಗೇಶ್ ಇದ್ದಾರೆ.

  English summary
  Former minister Cheluvarayaswamy son Sachin Cheluvaraswamy's second movie 'Bengaluru Boys' will soon hit theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X