For Quick Alerts
  ALLOW NOTIFICATIONS  
  For Daily Alerts

  ಪರಭಾಷೆ ಚಿತ್ರಗಳಿಗೆ ಜಗ್ಗಲ್ಲ ಬಗ್ಗಲ್ಲ ಗಜಕೇಸರಿ: ಯಶ್

  By ಸಂದೇಶ್
  |

  ರಾಕಿಂಗ್ ಸ್ಟಾರ್ ಯಶ್ ಅವರ ಬಲು ನಿರೀಕ್ಷಿತ ಚಿತ್ರ 'ಗಜಕೇಸರಿ' ಇದೇ ಮೇ.23ರಂದು ತೆರೆಗೆ ದಾಂಗುಡಿ ಇಡುತ್ತಿದೆ. ಈ ಬಿಗ್ ಬಜೆಟ್ ಚಿತ್ರದ ಜೊತೆಗೆ ಯಾವ ಕನ್ನಡ ಚಿತ್ರವೂ ಬಿಡುಗಡೆಯಾಗುತ್ತಿಲ್ಲ ಎಂಬುದು ವಿಶೇಷ. ಹಾಗಾಗಿ 'ಗಜಕೇಸರಿ'ಗೆ ಪೈಪೋಟಿಯೇ ಇಲ್ಲದಂತಾಗಿದೆ.

  'ಗಜಕೇಸರಿ'ಗೆ ಕನ್ನಡ ಚಿತ್ರಗಳ ಪೈಪೋಟಿ ಇಲ್ಲದಿದ್ದರೂ ಭಾರಿ ಬಜೆಟ್ ನ ಪರಭಾಷಾ ಚಿತ್ರಗಳು ತೆರೆಕಾಣುತ್ತಿರುವುದರಿಂದ ಚಿತ್ರಮಂದಿರ ಸಮಸ್ಯೆ ಉದ್ಭವಿಸುವ ಸಾಧ್ಯತೆಗಳಿವೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕೊಚ್ಚಾಡಿಯಾನ್' ಹಾಗೂ ಟಾಲಿವುಡ್ ನ 'ಮನಂ' ಚಿತ್ರಗಳು ಮೇ.23ರಂದೇ ತೆರೆಕಾಣುತ್ತಿವೆ. ['ಗಜಕೇಸರಿ'ಯ ಗರ್ವದ ಮರ್ಮ ನಿಮಗ್ಗೊತ್ತಾ?]

  ಈ ಬಗ್ಗೆ ಒನ್ಇಂಡಿಯಾ ಜೊತೆ ಪ್ರತಿಕ್ರಿಯಿಸಿರುವ ನಟ ಯಶ್, ಪರಭಾಷಾ ಚಿತ್ರಗಳಿಗೆ ತಮ್ಮ 'ಗಜಕೇಸರಿ' ಚಿತ್ರ ಖಂಡಿತ ಸೆಡ್ಡುಹೊಡೆಯುತ್ತದೆ. ಈಗಾಗಲೆ ಚಿತ್ರಕ್ಕೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿರುವುದೇ ಇದಕ್ಕೆ ಸಾಕ್ಷಿ ಎಂದರು.

  ಪ್ರಸ್ತುತ ಯಶ್ ಅವರು 'ಮಿಸ್ಟರ್ ಅಂಡ ಮಿಸಸ್ ರಾಮಾಚಾರಿ' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಸಿಕ್ಕ ಅವರು ತಮ್ಮ ಗಜಕೇಸರಿ ಚಿತ್ರದ ಅನುಭವಗಳನ್ನು ಒನ್ಇಂಡಿಯಾ ಜೊತೆ ಹಂಚಿಕೊಂಡರು. ಇದೇ ಮೊದಲ ಬಾರಿಗೆ ಯಶ್ ಗೆ ನಟಿ ಅಮೂಲ್ಯ ಜೋಡಿಯಾಗಿರುವ ಚಿತ್ರವಿದು.

  ಈ ಚಿತ್ರದ ಮೂಲಕ ಛಾಯಾಗ್ರಾಹಕ ಕೃಷ್ಣ ಅವರು ನಿರ್ದೇಶಕರಾಗಿ ಬದಲಾಗಿದ್ದಾರೆ. ಈ ಹಿಂದೆ ಅವರು ಯಶ್ ಅವರ ಲಕ್ಕಿ, ಜಾನೂ ಹಾಗೂ ಡ್ರಾಮಾ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದರು. "ಮುಂಬರುವ ದಿನಗಳಲ್ಲಿ ಕೃಷ್ಣ ಉರುಫ್ ಕಿಟ್ಟಣ್ಣ ಅವರು ಸ್ಯಾಂಡಲ್ ವುಡ್ ನ ಅದ್ಭುತ ನಿರ್ದೇಶಕರಾಗಿ ಹೊರಹೊಮ್ಮಲಿದ್ದಾರೆ ಎಂದು ಯಶ್ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಲೈಡ್ ನಲ್ಲಿ ಓದಿ ಯಶ್ ಜೊತೆಗಿನ ಸಂದರ್ಶನದ ಆಯ್ದ ಭಾಗ.

  'ಗಜಕೇಸರಿ' ಚಿತ್ರದ ಕಥೆ ಏನು?

  'ಗಜಕೇಸರಿ' ಚಿತ್ರದ ಕಥೆ ಏನು?

  ಯಶ್: ಚಿತ್ರದ ಕಥೆ ಬಗ್ಗೆ ಈಗಲೇ ಹೇಳಿದರೆ ಚೆನ್ನಾಗಿರಲ್ಲ. ಚಿತ್ರ ಬಿಡುಗಡೆಯಾಗುವವರೆಗೂ ಕಥೆ ಬಗೆಗಿನ ಸಸ್ಪೆನ್ಸ್ ಹಾಗೆಯೇ ಇದ್ದರೆ ಚೆನ್ನಾಗಿರುತ್ತದೆ. ಒಂದಂತೂ ನಿಜ ಖಂಡಿತ ಕಥೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

  ಪರಭಾಷಾ ಚಿತ್ರಗಳಿಂದ 'ಗಜಕೇಸರಿ' ಕಲೆಕ್ಷನ್ ಗೆ ಹೊಡೆತ ಬೀಳಲ್ಲವೆ?

  ಪರಭಾಷಾ ಚಿತ್ರಗಳಿಂದ 'ಗಜಕೇಸರಿ' ಕಲೆಕ್ಷನ್ ಗೆ ಹೊಡೆತ ಬೀಳಲ್ಲವೆ?

  ಯಶ್: ಪರಭಾಷಾ ಚಿತ್ರಗಳಿಂದ ತಮ್ಮ 'ಗಜಕೇಸರಿ' ಚಿತ್ರಕ್ಕೆ ಯಾವುದೇ ಭಯವಿಲ್ಲ. ಏಕೆಂದರೆ ಈಗಾಗಲೆ ಕನ್ನಡ ಚಿತ್ರಗಳಿಗೆಂದೇ ಅತಿದೊಡ್ಡ ಪ್ರೇಕ್ಷಕ ಬಳವಿದೆ. ಗಜಕೇಸರಿ ಚಿತ್ರಕ್ಕಾಗಿ ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದಾರೆ. ಹಾಗಾಗಿ ತಮ್ಮ ಚಿತ್ರಕ್ಕೆ ಪರಭಾಷಾ ಚಿತ್ರಗಳು ಪೈಪೋಟಿ ಅಲ್ಲ.

  ಎಲಕ್ಕಿಂತ ಹೆಚ್ಚಾಗಿ ಕನ್ನಡಿಗರ ಆಶೀರ್ವಾದ ಇದೆ

  ಎಲಕ್ಕಿಂತ ಹೆಚ್ಚಾಗಿ ಕನ್ನಡಿಗರ ಆಶೀರ್ವಾದ ಇದೆ

  ಸ್ಪರ್ಧೆಗಿಂತಲೂ ಹೆಚ್ಚಾಗಿ ನನ್ನ ಚಿತ್ರದ ಬಗ್ಗೆ ನನಗೆ ನಂಬಿಕೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಆರು ಕೋಟಿ ಕನ್ನಡಿಗರ ಆಶೀರ್ವಾದ ಇದೆ. ಇಲ್ಲದಿದ್ದರೆ ಗಜಕೇಸರಿಯಂತಹ ಭಾರಿ ಬಜೆಟ್ ಚಿತ್ರ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

  ನಟಿ ಅಮೂಲ್ಯ ಜೊತೆಗಿನ ಕೆಲಸದ ಅನುಭವ ಹೇಗಿತ್ತು?

  ನಟಿ ಅಮೂಲ್ಯ ಜೊತೆಗಿನ ಕೆಲಸದ ಅನುಭವ ಹೇಗಿತ್ತು?

  ಅಮೂಲ್ಯ ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಂತಹವರು. ಅದು ಪಾತ್ರ ಯಾವುದೇ ಇರಲಿ ಪರಕಾಯ ಪ್ರವೇಶ ಮಾಡುತ್ತಾರೆ. ಅವರೊಂದಿಗೆ ಅಭಿನಯಿಸಿದ್ದು ನಿಜಕ್ಕೂ ಖುಷಿ ಕೊಡ್ತು.

  ಚಿತ್ರದಲ್ಲಿನ ವಿಭಿನ್ನ ಕೇಶ ವಿನ್ಯಾಸದ ಬಗ್ಗೆ ತಿಳಿಸಿ?

  ಚಿತ್ರದಲ್ಲಿನ ವಿಭಿನ್ನ ಕೇಶ ವಿನ್ಯಾಸದ ಬಗ್ಗೆ ತಿಳಿಸಿ?

  ನಿಜ ಹೇಳಬೇಕೆಂದರೆ ಅದೊಂದು ಸವಾಲಿನ ಕೆಲಸವಾಗಿತ್ತು. ಅದನ್ನು ಸಂಭಾಳಿಸಿದ್ದು ನಿಜಕ್ಕೂ ಬಹಳ ಕಷ್ಟದ ಕೆಲಸವಾಗಿತ್ತು. ಹೈದರಾಬಾದಿನ ಅಲೆಕ್ಸ್ ಎಂಬುವವರು ಈ ವಿಭಿನ್ನ ಕೇಶವಿನ್ಯಾಸಕದ ರೂವಾರಿ.

  ಈ ರೀತಿಯ ಕೇಶವಿನ್ಯಾಸ ಸುಲಭದ ಕೆಲಸವಾಗಿರಲಿಲ್ಲ.

  ಈ ರೀತಿಯ ಕೇಶವಿನ್ಯಾಸ ಸುಲಭದ ಕೆಲಸವಾಗಿರಲಿಲ್ಲ.

  ಈ ರೀತಿಯ ಕೇಶವಿನ್ಯಾಸವನ್ನು ನಿಭಾಯಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಈ ಕೇಸವಿನ್ಯಾಸಕ್ಕಾಗಿ ಸಂಪೂರ್ಣ ಒಂದು ದಿನ ವಿನಿಯೋಗಿಸಬೇಕಾಗಿತ್ತು.

  ಇನ್ನು ಚಿತ್ರದಲ್ಲಿನ ಅಂಡರ್ ವಾಟರ್ ಸೀನ್ ಬಗ್ಗೆ ತಿಳಿಸಿ?

  ಇನ್ನು ಚಿತ್ರದಲ್ಲಿನ ಅಂಡರ್ ವಾಟರ್ ಸೀನ್ ಬಗ್ಗೆ ತಿಳಿಸಿ?

  'ಗಜಕೇಸರಿ'ಯ ಇಂಟರೆಸ್ಟಿಂಗ್ ಸಂಗತಿಗಳಲ್ಲಿ ಅಂಡರ್ ವಾಟರ್ ಸೀನ್ ಸಹ ಒಂದು. ಚಿತ್ರ ನೋಡಿದರೆ ಇದು ನಿಮಗೇ ಅರ್ಥವಾಗುತ್ತದೆ. ಸುಖಾಸುಮ್ಮನೆ ಈ ಸನ್ನಿವೇಶವನ್ನು ಇಟ್ಟಿಲ್ಲ. ಕಥೆಗೆ ಪೂರವಾಗಿ ಈ ಸನ್ನಿವೇಶ ಬರುತ್ತದೆ.

  ಗಜಕೇಸರಿಯಲ್ಲಿ ಆನೆ ಅರ್ಜುನ ವಿಶೇಷತೆ ಏನು?

  ಗಜಕೇಸರಿಯಲ್ಲಿ ಆನೆ ಅರ್ಜುನ ವಿಶೇಷತೆ ಏನು?

  ಅದನ್ನು ಈಗಲೇ ಹೇಳಿದರೆ ಅಷ್ಟು ಮಜಾ ಇರಲ್ಲ. ತೆರೆಯ ಮೇಲೆ ನೋಡಿ ಆನಂದಿಸಿದರೇನೇ ಚೆಂದ. ಈಗಲೇ ಹೇಳಿದರೆ ಪ್ರೇಕ್ಷಕರಲ್ಲಿರುವ ಕುತೂಹಲ ಹೋಗುತ್ತದೆ.

  English summary
  Sandalwood's much anticipated film Gajakesari is all set to hit silver screen this week, May 23, 2014 across the state. Amidst his busy shooting schedule with his forthcoming movie Mr And Mrs Ramachari, Rocking Star Yash made himself free and spoke to Oneindia about his upcoming release Gajakesari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X