For Quick Alerts
  ALLOW NOTIFICATIONS  
  For Daily Alerts

  'ಗಂಧದ ಗುಡಿ'ಯ ಮತ್ತೊಂದು ಮಗ್ಗುಲು: ನವೆಂಬರ್ 14 ರಂದು ನೋಡಿ ಎಂದ ಅಶ್ವಿನಿ ಪುನೀತ್

  |

  ಪುನೀತ್ ರಾಜ್‌ಕುಮಾರ್ ಅವರ ಕನಸಿನ ಪ್ರಾಜೆಕ್ಟ್ 'ಗಂಧದ ಗುಡಿ' ತೆರೆ ಕಂಡು ಎರಡು ವಾರ ಕಳೆದಿದ್ದು, ರಾಜ್ಯದಾದ್ಯಂತ ಈ ಡಾಕ್ಯು ಡ್ರಾಮಾ ಲಕ್ಷಾಂತರ ಮಂದಿಯನ್ನು ಸೆಳೆದಿದೆ. ಸಿನಿರಸಿಕರು, ಪ್ರಕೃತಿ ಪ್ರೇಮಿಗಳು, ಅಪ್ಪು ಅಭಿಮಾನಿಗಳಿಂದ, ವಿಶೇಷವಾಗಿ ರಾಜ್ಯದ ಸಾವಿರಾರು ಮಂದಿ ವಿದ್ಯಾರ್ಥಿಗಳನ್ನು ಚಿತ್ರಮಂದಿರಕ್ಕೆ ಸೆಳೆದಿದೆ ಅಪ್ಪುವಿನ ಈ ಹೊಸ ಮಾದರಿಯ ಸಾಹಸ.

  'ಗಂಧದ ಗುಡಿ' ಡಾಕ್ಯು ಡ್ರಾಮಾದಲ್ಲಿ ಅಮೋಘ ವರ್ಷರ ಜೊತೆಗೆ ಸೇರಿ ಪುನೀತ್ ರಾಜ್‌ಕುಮಾರ್, ರಾಜ್ಯದ ಹಲವು ನಿಸರ್ಗ ತಾಣಗಳಿಗೆ ಭೇಟಿ ನೀಡಿ ಅಲ್ಲಿನ ಅದ್ಭುತಗಳನ್ನು ಪ್ರೇಕ್ಷಕನೆದುರು ತೆರೆದಿಟ್ಟಿದ್ದರು. ರಾಜ್ಯದ ಸುಂದರ ತಾಣಗಳ ಜೊತೆಗೆ ಅಪ್ಪುವಿನ ಸರಳತೆ, ಅವರಿಗಿದ್ದ ಕುತೂಹಲ, ಅರಣ್ಯ, ಪ್ರಕೃತಿ ಸಂಪತ್ತಿನ ಬಗ್ಗೆ ಅವರಿಗಿದ್ದ ಗೌರವಗಳೆಲ್ಲವೂ ನೋಡುಗನನ್ನು ಅತಿಯಾಗಿ ಕಾಡಿತ್ತು.

  'ಗಂಧದ ಗುಡಿ' ನೋಡುಗನ ಸ್ಮೃತಿ ಪಟಲದಲ್ಲಿ ಇನ್ನೂ ಹಚ್ಚ ಹಸುರಾಗಿರುವಾಗಲೇ ಈ ಪ್ರಾಜೆಕ್ಟ್‌ನ ನಿರ್ಮಾಪಕಿ, ಪುನೀತ್‌ ರಾಜ್‌ಕುಮಾರ್‌ರ ಪತ್ನಿಯೂ ಆಗಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಹೊಸದೊಂದು ಘೋಷಣೆಯನ್ನು ಮಾಡಿದ್ದಾರೆ.

  'ಗಂಧದ ಗುಡಿ' ಡಾಕ್ಯು ಡ್ರಾಮಾ ಅಷ್ಟು ಅದ್ಭುತವಾಗಿ ಮೂಡಿ ಬರುವ ಹಿಂದೆ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವು ಜನರ ಶ್ರಮ ಇದೆ. ಆ ಶ್ರಮದ ದರ್ಶನವನ್ನು ಅಭಿಮಾನಿಗಳಿಗೆ ತೋರಿಸುವ ಪ್ರಯತ್ನದ ಭಾಗವಾಗಿ, ನವೆಂಬರ್ 14 ರಂದು 'ಗಂಧದ ಗುಡಿ' ಡಾಕ್ಯು ಡ್ರಾಮಾ ಮೇಕಿಂಗ್‌ನ ಬಿಹೈಂಡ್‌ ದಿ ಶೂಟ್‌ ದೃಶ್ಯಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

  ಈ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ವಿಡಿಯೋ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ''ಅಪ್ಪುವಿನ ಕನಸು ಈ ನಮ್ಮ 'ಗಂಧದ ಗುಡಿ'. ಈ ಪಯಣದ ಬಿಹೈಂಡ್ ದಿ ಸೀನ್ಸ್‌ ಅನ್ನು ಎಕ್ಸ್‌ಕ್ಲೂಸಿವ್ ಆಗಿ ನೋಡಿ ಆನಂದಿಸಿ'' ಎಂದಿದ್ದಾರೆ. ನವೆಂಬರ್ 14 ರಿಂದ 'ಗಂಧದ ಗುಡಿ'ಯ ಬಿಹೈಂಡ್‌ ದಿ ಸೀನ್ಸ್ ದೃಶ್ಯಗಳು ಪಿಆರ್‌ಕೆ ಆಡಿಯೋದ ಯೂಟ್ಯೂಬ್‌ನಲ್ಲಿ ಪ್ರಸಾರವಾಗಲಿವೆ. ಹಲವು ಎಪಿಸೋಡ್‌ಗಳಲ್ಲಿ ಇದು ಪ್ರಸಾರವಾಗಲಿದೆ.

  'ಗಂಧದ ಗುಡಿ' ಡಾಕ್ಯು ಡ್ರಾಮಾ ಸಿನಿಮಾವು ಅಕ್ಟೋಬರ್ 28 ರಂದು ರಾಜ್ಯದಾದ್ಯಂತ ತೆರೆ ಕಂಡಿತು. ಒಂದುವರೆ ಗಂಟೆಯ ಈ ಸಿನಿಮಾ ಬಿಡುಗಡೆ ಆದಲ್ಲೆಲ್ಲ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಕ್ಕೆ ರಾಜ್ಯ ಸರ್ಕಾರವು ತೆರಿಗೆ ವಿನಾಯಿತಿ ನೀಡಿದೆ. ರಾಜ್ಯದ ವಿದ್ಯಾರ್ಥಿಗಳೆಲ್ಲರೂ ಸಿನಿಮಾ ನೋಡಲೆಂಬ ಉದ್ದೇಶದಿಂದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹ ಕಳೆದೊಂದು ವಾರದಿಂದ ಟಿಕೆಟ್ ಬೆಲೆಯನ್ನು ಅರ್ಧಕ್ಕಿಂತಲೂ ಕಡಿಮೆಗೊಳಿಸಿದ್ದಾರೆ.

  English summary
  Puneeth Rajkumar's Gandhada Gudi docu-drama behind the scenes episode will releasing on PRK audio YouTube from November 14.
  Saturday, November 12, 2022, 20:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X