»   » ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಗಣೇಶ್ ಮಗಳು ಕೊಟ್ಟ ಉಡುಗೊರೆ ಇದು

ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಗಣೇಶ್ ಮಗಳು ಕೊಟ್ಟ ಉಡುಗೊರೆ ಇದು

Posted By:
Subscribe to Filmibeat Kannada

ನಟ ಗಣೇಶ್ ಮತ್ತು ಅವರ ಪತ್ನಿ ಶಿಲ್ಪಾ ಗಣೇಶ್ ಈಗ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ. ನಿನ್ನೆ ಅವರ 10ನೇ ವರ್ಷದ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಗೋಲ್ಡನ್ ದಂಪತಿಗೆ ಅನೇಕ ಅಭಿಮಾನಿಗಳು ಮತ್ತು ಚಿತ್ರರಂಗದ ಮಿತ್ರರು ಶುಭ ಕೋರಿದ್ದಾರೆ. ಮಾತ್ರವಲ್ಲದೆ ನಿನ್ನೆಯೇ ಗಣೇಶ್ ನಟನೆಯ ಹೊಸ ಸಿನಿಮಾ 'ಆರೆಂಜ್' ಚಿತ್ರದ ಮುಹೂರ್ತ ಕೂಡ ನೆರವೇರಿದೆ.

ಆದರೆ ಈ ಎಲ್ಲ ಕಾರ್ಯಕ್ರಮಗಳಿಗಿಂತ ವಿಶೇಷ ಅಂದರೆ ನಟ ಗಣೇಶ್ ಮತ್ತು ಅವರ ಪತ್ನಿ ಶಿಲ್ಪಾ ಗಣೇಶ್ ದಂಪತಿಗೆ ತಮ್ಮ ಮಗಳ ಕಡೆಯಿಂದ ಒಂದು ಸ್ಪೆಷಲ್ ಉಡುಗೊರೆ ಸಿಕ್ಕಿದೆ. ಮುಂದೆ ಓದಿ...

ಗ್ರೀಟಿಂಗ್ ಕಾರ್ಡ್

ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ ಅವರ ಪುಟ್ಟ ಮಗಳು ಚಾರಿತ್ರ್ಯಾ ಅಪ್ಪ ಅಮ್ಮನಿಗಾಗಿ ತಾನೇ ತನ್ನ ಕೈಯಾರ ಗ್ರೀಟಿಂಗ್ ಕಾರ್ಡ್ ಬರೆದು ವಿಶ್ ಮಾಡಿದ್ದಾಳೆ.

ಸಂತಸದಲ್ಲಿ ಗೋಲ್ಡನ್ ಸ್ಟಾರ್

ಮಗಳ ಉಡುಗೊರೆ ನೋಡಿ ಖುಷಿ ಆಗಿರುವ ಗಣೇಶ್ ಅವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'ಚಮಕ್' ಕೊಟ್ಟಿದ್ದ ಚಾರಿತ್ರ್ಯಾ

ಗಣೇಶ್ ಅವರ ಇತ್ತೀಚಿಗಿನ ಸಿನಿಮಾ 'ಚಮಕ್' ಚಿತ್ರದ ಒಂದು ಸಣ್ಣ ಪಾತ್ರದಲ್ಲಿ ಚಾರಿತ್ರ್ಯಾ ನಟಿಸಿದ್ದರು. ಆ ಚಿತ್ರದ ಮೂಲಕ ಮೊದಲ ಬಾರಿಗೆ ತೆರೆ ಮೇಲೆ ಗೋಲ್ಡನ್ ಸ್ಟಾರ್ ಪುತ್ರಿ ಮಿಂಚಿದ್ದರು.

ಗಣೇಶ್-ಶಿಲ್ಪಾ ವಿವಾಹ ವಾರ್ಷಿಕೋತ್ಸವದಂದು ನಡೆಯಿತು 'ಆರೆಂಜ್' ಮುಹೂರ್ತ

'ಆರೆಂಜ್' ಮುಹೂರ್ತ

10ನೇ ವರ್ಷದ ವಿವಾಹ ವಾರ್ಷಿಕೋತ್ಸವದ ವಿಶೇಷವಾಗಿ ನಿನ್ನೆ ಗಣೇಶ್ ಅವರ 'ಆರೆಂಜ್' ಚಿತ್ರದ ಮುಹೂರ್ತ ನಡೆದಿದೆ. 'ಜೂಮ್' ಸಿನಿಮಾದ ನಂತರ ಮತ್ತೆ ಪ್ರಶಾಂತ್ ರಾಜ್ ಈ ಚಿತ್ರವನ್ನು ಗಣೇಶ್ ಗೆ ನಿರ್ದೇಶನ ಮಾಡುತ್ತಿದ್ದಾರೆ.

English summary
Golden Star Ganesh and his wife Shilpa Ganesh got a special gift from their daughter Charitra for 10th wedding anniversary.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada