»   » 'ಸ್ಟೈಲ್ ಕಿಂಗ್' ಬರುವ ಮುನ್ನ 'Zooಮ್' ಮಾಡಿ ನೋಡಿ..!

'ಸ್ಟೈಲ್ ಕಿಂಗ್' ಬರುವ ಮುನ್ನ 'Zooಮ್' ಮಾಡಿ ನೋಡಿ..!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸ್ಟೈಲ್ ಕಿಂಗ್' ಚಿತ್ರಕ್ಕೆ U/A ಸರ್ಟಿಫಿಕೇಟ್ ಸಿಕ್ಕಿರುವುದರಿಂದ ಸದ್ಯದಲ್ಲೇ ಚಿತ್ರ ಬಿಡುಗಡೆ ಆಗಲಿದೆ ಅಂತ ನಾವೇ ನಿಮಗೆ ಹೇಳಿದ್ವಿ.

ಆದ್ರೀಗ, 'ಸ್ಟೈಲ್ ಕಿಂಗ್' ಚಿತ್ರ ಬಿಡುಗಡೆಗೂ ಮುನ್ನವೇ, 'ಮಳೆ ಹುಡುಗ' ಗಣೇಶ್ ಅಭಿನಯದ 'Zooಮ್' ಸಿನಿಮಾ ನಿಮ್ಮೆಲ್ಲರ ಎದುರಿಗೆ ಬರಲಿದೆ. [ವಾದ-ವಿವಾದಕ್ಕೆ ಫುಲ್ ಸ್ಟಾಪ್! 'ಸ್ಟೈಲ್ ಕಿಂಗ್' ಗೆ ಸಿಕ್ತು ಬಿಡುಗಡೆ ಭಾಗ್ಯ!]


ganesh-starrer-zoom-to-release-on-may-20th

ಪಿ.ಸಿ.ಶೇಖರ್ ನಿರ್ದೇಶನದ 'ಸ್ಟೈಲ್ ಕಿಂಗ್' ಚಿತ್ರದ ಬಿಡುಗಡೆ ದಿನಾಂಕ ಪದೇ ಪದೇ ಮುಂದಕ್ಕೆ ಹೋಗುತ್ತಿರುವುದು ಯಾಕೋ? ದೇವರೇ ಬಲ್ಲ..! 'ಸ್ಟೈಲ್ ಕಿಂಗ್' ಈಗ ಬರ್ತಾನೆ, ಆಗ ಬರ್ತಾನೆ ಅಂತ ಗಣಿ ಅಭಿಮಾನಿಗಳೂ ಕೂಡ ಕಾತರದಿಂದ ಕಾಯ್ತಿದ್ದಾರೆ. [ಫುಲ್ 'ZOOಮ್' ನಲ್ಲಿ ಕಾಶೀನಾಥ್ ಮತ್ತೆ ಎಂಟ್ರಿ]


ಅಭಿಮಾನಿಗಳನ್ನ ವಿನಾಕಾರಣ ಕಾಯಿಸಿದ್ದಕ್ಕೆ ಗಣೇಶ್ ಕೂಡ ಕ್ಷಮೆ ಕೇಳಿದ್ದರು. ಈಗ 'ಸ್ಟೈಲ್ ಕಿಂಗ್'ನ ಸೈಡಿಗಿಟ್ಟು 'Zooಮ್' ಚಿತ್ರದ ಬಿಡುಗಡೆಗೆ ಗಣೇಶ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.


ಮೇ 20 ರಂದು 'Zooಮ್' ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಲಂಡನ್ ನಲ್ಲಿ 'Zooಮ್' ಚಿತ್ರದ ಪ್ರೀಮಿಯರ್ ಶೋ ಹಮ್ಮಿಕೊಂಡಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್. ['ಇಟಲಿ' ದಿನಪತ್ರಿಕೆಯಲ್ಲಿ ಗಣೇಶ್-ರಾಧಿಕಾ ಪಂಡಿತ್ ಸುದ್ದಿ!]


ಟಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ಥಮನ್ ಸಂಗೀತ ನೀಡಿರುವ 'Zooಮ್' ಚಿತ್ರದ ಹಾಡುಗಳು ಈಗಾಗಲೇ ಸಖತ್ ಸೌಂಡ್ ಮಾಡುತ್ತಿವೆ. ಅದ್ರಲ್ಲೂ ರಾಧಿಕಾ ಪಂಡಿತ್ ಹಾಗೂ ಶ್ರೀಮುರಳಿ ಹಾಡಿರುವ ಹಾಡು ಜನರಿಗೆ ಇಷ್ಟವಾಗಿದೆ. ['ZOOಮ್' ಚಿತ್ರಕ್ಕೆ 'ಗಾನ ಕೋಗಿಲೆ' ಆದರು ನಟಿ ರಾಧಿಕಾ ಪಂಡಿತ್!]


ಮೊದಲ ಬಾರಿಗೆ ಗಣೇಶ್ ಜೊತೆ ಜೋಡಿಯಾಗಿರುವ ಲಕ್ಕಿ ಗರ್ಲ್ ರಾಧಿಕಾ ಪಂಡಿತ್ 'Zooಮ್' ನಲ್ಲಿ ಮೋಡಿ ಮಾಡುವುದರಲ್ಲಿ ಡೌಟೇ ಬೇಡ. ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೇನರ್ ಆಗಿರುವ ಈ ಚಿತ್ರ ಮೇ 20 ರಂದು ನಿಮ್ಮ ಮುಂದೆ. 'Zooಮ್' ಮಾಡಿ ನೋಡಲು ನೀವು ರೆಡಿನಾ..??


-
-
-
-
-
-
-
-
-
-
-
-
-
-
-
-
-
English summary
Golden Star Ganesh and Radhika Pandit starrer Kannada Movie 'Zoom' is all set to release on May 20th. The movie is directed by Prashant Raj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada