»   » ಅನಾರೋಗ್ಯದಿಂದ ಬಳಲುತ್ತಿರೋ ಗಣೇಶ್ ಫ್ಯಾನ್ ಗೆ ಬೇಕಿದೆ ಸಹಾಯ ಹಸ್ತ

ಅನಾರೋಗ್ಯದಿಂದ ಬಳಲುತ್ತಿರೋ ಗಣೇಶ್ ಫ್ಯಾನ್ ಗೆ ಬೇಕಿದೆ ಸಹಾಯ ಹಸ್ತ

Posted By:
Subscribe to Filmibeat Kannada

ಸ್ಟಾರ್ ಗಳಿಗೆ ಸಾಕಷ್ಟು ಅಭಿಮಾನಿಗಳು ಇರುತ್ತಾರೆ. ಅದರಲ್ಲಿ ಕೆಲವರು ಮಾತ್ರ ತಮ್ಮ ನೆಚ್ಚಿನ ಕಲಾವಿದರ ಗಮನ ಸೆಳೆಯೋದರ ಜೊತೆಯಲ್ಲಿ ಅವರ ಹೆಸರನ್ನು ಜನರ ಮಧ್ಯೆ ಸದಾ ಹಸಿರಾಗಿ ಉಳಿಯುವಂತೆ ಮಾಡುತ್ತಲೇ ಇರುತ್ತಾರೆ.

ಅಭಿಮಾನಿಗಳ ಅಭಿಮಾನ ನಿಸ್ವಾರ್ಥವಾದದ್ದು, ಅವರ ನಿರೀಕ್ಷೆ ಇಷ್ಟ ಪಟ್ಟ ಕಲಾವಿದನಿಂದ ಒಳ್ಳೆ ಸಿನಿಮಾ ಹಾಗೂ ಅವರನ್ನ ಕಂಡಾಗ ಪ್ರೀತಿಯಿಂದ ಮಾತನಾಡಿಸುವುದು. ಇದೇ ನಿರೀಕ್ಷೆಯಲ್ಲಿ ಸ್ಟಾರ್ ಗಳಿಗಾಗಿ ಏನೆಲ್ಲಾ ಮಾಡಬಹುದು ಎನ್ನುವುದೇ ಅವರ ತಲೆಯಲ್ಲಿ ಪ್ರತಿನಿತ್ಯ ಓಡಾಡುತ್ತಿರುತ್ತದೆ. ನಾವೀಗ ಅಭಿಮಾನಿಗಳ ಬಗ್ಗೆ ಇಷ್ಟೇಲ್ಲಾ ವಿಚಾರ ಹೇಳುತ್ತಿರುವುದಕ್ಕೆ ಕಾರಣ ಇದೆ. ಸಾಕಷ್ಟು ವರ್ಷಗಳಿಂದ ಗೋಲ್ಡನ್ ಸ್ಟಾರ್ ಅಭಿಮಾನಿ ಆಗಿರುವ ನಟೇಶ್ ಅವರಿಗೆ ಸಹಾಯ ಹಸ್ತ ಬೇಕಾಗಿದೆ.

ಈ ಬಾರಿಯಾದ್ರೂ ಸೃಜನ್ ಮನೆ ಹೊಸಿಲು ತುಳಿಯುತ್ತಾರಾ 3 ಬಿಗ್ ಸ್ಟಾರ್ ಗಳು ?

ಯಾರು ಈ ನಟೇಶ್ ? ಇವರಿಗೇಕೆ ಸಹಾಯ ಮಾಡಬೇಕು? ಗಣೇಶ್ ಅಪ್ಪಟ ಅಭಿಮಾನಿ ಆಗಿರುವ ನಟೇಶ್ ಗೋಲ್ಡನ್ ಸ್ಟಾರ್ ಗಾಗಿ ಏನೆಲ್ಲಾ ಮಾಡಿದ್ದಾರೆ? ಇಂತಹ ಪ್ರಶ್ನೆ ನಮ್ಮಲ್ಲಿಯೂ ಮೂಡಿತ್ತು. ಇದನ್ನೆಲ್ಲಾ ಹುಡುಕುತ್ತಾ ಹೊರಟಾಗ ಸಾಕಷ್ಟು ವಿಚಾರಗಳು ತಿಳಿದು ಬಂದಿದೆ. ನಟೇಶ್ ಯಾರು ಎನ್ನುವುದ ಬಗ್ಗೆ ಸಂಪೂರ್ಣ ಮಾಹಿತಿ ನಿಮಗಾಗಿ. ಮುಂದೆ ಓದಿ....

ಗಣೇಶ್ ಅಭಿಮಾನಿಗೆ ಬೇಕಿದೆ ಸಹಾಯ

ಕನ್ನಡ ಸಿನಿಮಾರಂಗದ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಅಪರೂಪದ ಅಭಿಮಾನಿಯೊಬ್ಬ ಇದ್ದಾನೆ. ಆತನ ಹೆಸರು ನಟೇಶ್ ಮೂಲತಃ ಹಾಸನದವರು. 35 ವರ್ಷದ ನಟೇಶ್ ಬ್ಯಾನರ್ (ಫ್ಲೆಕ್ಸ್ ) ಪೋಸ್ಟರ್ ಗೆ ರಿಪ್ಪರ್ ಹೊಡೆಯುವ ಕೆಲಸ ಮಾಡುತ್ತಾರೆ. ಸಾಕಷ್ಟು ವರ್ಷಗಳಿಂದ ಗಣೇಶ್ ಅಭಿಮಾನಿ ಆಗಿರುವ ನಟೇಶ್ ಈಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಗಣೇಶ್ ಹೆಸರಿನಲ್ಲಿ ಒಳ್ಳೆ ಕೆಲಸ

ನಟೇಶ್ ಸಾಮಾನ್ಯ ಅಭಿಮಾನಿ ಅಲ್ಲ. ಗಣೇಶ್ ಅವರ ಹೆಸರಿನಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನ ಮಾಡುತ್ತಾ ಬಂದಿದ್ದಾರೆ. ಗಣಿ ಅಭಿನಯದ ಪ್ರತಿ ಸಿನಿಮಾ ಬಿಡುಗಡೆ ಆದಾಗ ಸರ್ಕಾರಿ ಶಾಲೆಗಳಲ್ಲಿ ಉಚಿತ ಪುಸ್ತಕ ಹಂಚುವುದು. ರಕ್ತದಾನ ಶಿಬಿರ ಮಾಡುವುದು. ಅಂಧ ಮಕ್ಕಳಿಗೆ ಸಮವಸ್ತ್ರ ನೀಡುವುದು ಹೀಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ.

ಪಾರ್ಶ್ವವಾಯುವಿನಿಂದ ಬಳಲುತ್ತಿರುವ ನಟೇಶ್

2 ವರ್ಷದ ಹಿಂದೆ ನಟೇಶ್ ಅವರಿಗೆ ಪಾರ್ಶ್ವವಾಯು ಆಗಿದೆ. ಬಲಗೈ ಹಾಗೂ ಬಲಗಾಲು ಸ್ವಾದಿನ ಇಲ್ಲದೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ನಟೇಶ್ ಅವರಿಗೆ ಮದುವೆ ಆಗಿ 10 ವರ್ಷ ಕಳೆದಿದ್ದು ಇಬ್ಬರು ಮಕ್ಕಳು ಇದ್ದಾರೆ. ಸದ್ಯ ಮನೆ ನಿರ್ವಹಣೆ ಮಾಡಲು ಸಾಧ್ಯವಾಗದೆ, ಮನೆ ಬಾಡಿಗೆಯೂ ಕಟ್ಟಲಾಗಲೇ ಪರದಾಡುತ್ತಿದ್ದಾರೆ.

ಸಹಾಯಕ್ಕಾಗಿ ನಿರೀಕ್ಷೆ

ನಟೇಶ್ ಎರಡು ವರ್ಷದಿಂದ ಪಡುತ್ತಿರುವ ಕಷ್ಟವನ್ನ ನೋಡಿರುವ ಸ್ಥಳಿಯರು ಕೈಲಾಗುವ ಸಹಾಯ ಮಾಡಲು ಮುಂದಾಗಿದ್ದಾರೆ. ಆದರೆ ನಟೇಶ್ ಕುಟುಂಬಸ್ಥರು ಗಣೇಶ್ ಅವರನ್ನ ಭೇಟಿ ಮಾಡಿ ಏನಾದರೂ ಸಹಾಯ ಕೇಳುವ ನಿರೀಕ್ಷೆಯಲ್ಲಿದ್ದಾರೆ.

ಸಂತೋಷ್ ಆನಂದ್ ರಾಮ್ ಮನೆಗೆ ದಿಢೀರ್ ಭೇಟಿ ಕೊಟ್ಟ ಗಣೇಶ್

English summary
Kannada actor Ganesh's fan Natesh is suffering from paralysis since past two years. Natesh is a genuine fan of Ganesh. Natesh, a native of Hassan, is now expecting help from Golden Star Ganesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X