»   » ಕನ್ನಡ ಸಂಸ್ಕೃತಿಯನ್ನು ಡಬ್ಬಿಂಗ್ ಹಾಳು ಮಾಡುತ್ತದೆ ಎಂದ ನಿರ್ದೇಶಕ ಗಿರೀಶ್ ಕಾಸರವಳ್ಳಿ

ಕನ್ನಡ ಸಂಸ್ಕೃತಿಯನ್ನು ಡಬ್ಬಿಂಗ್ ಹಾಳು ಮಾಡುತ್ತದೆ ಎಂದ ನಿರ್ದೇಶಕ ಗಿರೀಶ್ ಕಾಸರವಳ್ಳಿ

Posted By:
Subscribe to Filmibeat Kannada

''ಡಬ್ಬಿಂಗ್ ನಿಂದ ಬರೀ ಕನ್ನಡ ಚಿತ್ರರಂಗದಲ್ಲಿ ಉದ್ಯೋಗಾವಕಾಶಗಳು ಮಾತ್ರ ಕಡಿಮೆ ಆಗುವುದಿಲ್ಲ. ಅದು ಇಡೀ ಕನ್ನಡ ಚಿತ್ರರಂಗದ ಸಂಸ್ಕೃತಿಯ ಮೂಲ ತತ್ವವನ್ನು ಹಾಳು ಮಾಡುತ್ತದೆ'' ಎಂದು ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ.

ಕನ್ನಡದಲ್ಲಿ ರಿಲೀಸ್ ಆಗ್ತಿದೆ 'ಫಾಸ್ಟ್ ಅಂಡ್ ಫ್ಯೂರಿಯಸ್-8'

ಇತ್ತೀಚಿಗಷ್ಟೆ ನಡೆದ ಕಾರ್ಯಕ್ರಮವೊಂದರಲ್ಲಿ ಡಬ್ಬಿಂಗ್ ಬಗ್ಗೆ ತಮ್ಮ ನಿಲುವನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಸ್ಪಷ್ಟ ಪಡಿಸಿದ್ದಾರೆ. ಜೊತೆಗೆ ''ಡಬ್ಬಿಂಗ್ ನಿಂದ ಕೆಲವು ಚಿತ್ರ ನಿರ್ಮಾಪಕರಿಗೆ ಮತ್ತು ಡಬ್ಬಿಂಗ್ ಕಲಾವಿದರಿಗೆ ಸಹಾಯ ಆಗಬಹುದು. ಆದರೆ ಅದರಿಂದ ಚಿತ್ರೋದ್ಯಮಕ್ಕೆ ತೊಂದರೆಯಾಗುತ್ತದೆ'' ಎಂದು ತಿಳಿಸಿದ್ದಾರೆ.

Girish Kasaravalli speaks against Dubbing

ಅಂದಹಾಗೆ, ಕನ್ನಡದಲ್ಲಿ ಡಬ್ಬಿಂಗ್ ಪರ ಮತ್ತು ವಿರೋಧ ಮಾತುಗಳು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಬಗ್ಗೆ ಅನೇಕ ಹೋರಾಟಗಳು ಕೂಡ ನಡೆದರೂ, ಡಬ್ಬಿಂಗ್ ಸಿನಿಮಾಗಳಿಗೆ ಈಗ ಕಾನೂನಿನಿಂದ ಬೆಂಬಲ ಸಿಕ್ಕಿದೆ. ಈಗಾಗಲೇ ತಮಿಳಿನ 'ಎನ್ನೈ ಅರಿಂದಾಲ್' ಮತ್ತು ಹಾಲಿವುಡ್ ನ 'ಫಾಸ್ಟ್ ಅಂಡ್ ಫ್ಯೂರಿಯಸ್' ಚಿತ್ರಗಳು ಡಬ್ಬಿಂಗ್ ಆಗಿ ಕನ್ನಡದಲ್ಲಿ ಬಿಡುಗಡೆಯಾಗಿದೆ.

English summary
Director Girish Kasaravalli raises his voice against Dubbing in Kannada Film Industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada