For Quick Alerts
  ALLOW NOTIFICATIONS  
  For Daily Alerts

  'ಗೋಲ್ಡನ್ ಕ್ವೀನ್' ಅಮ್ಮುಗೆ ಹ್ಯಾಪಿ ಬರ್ತ್ ಡೇ ಹೇಳಿ

  By Suneetha
  |

  ಸ್ಯಾಂಡಲ್ ವುಡ್ ನಲ್ಲಿ ಗೋಲ್ಡನ್ ಕ್ವೀನ್' ಅಂತ ಫೇಮಸ್ ಆಗಿರೋ ನಾಯಕಿ, ನಟಿ ಅಮೂಲ್ಯಾ ಅವರಿಗೆ ಇಂದು (ಸೆಪ್ಟೆಂಬರ್ 14) ಹುಟ್ಟು ಹಬ್ಬದ ಸಂಭ್ರಮ.

  ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ 'ಚೆಲುವಿನ ಚಿತ್ತಾರ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡು ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದು ಇದೀಗ ಸಹಸ್ರಾರು ಅಭಿಮಾನಿಗಳ ಮನೆ-ಮನದಲ್ಲಿ ಜಾಗ ಗಿಟ್ಟಿಸಿಕೊಂಡ ಹೆಗ್ಗಳಿಕೆ ಅಮೂಲ್ಯ ಅವರದು.


  ಅಂದಹಾಗೆ ಬಾಲ ನಟಿಯಾಗಿ ಚಿತ್ರರಂಗ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಅಮೂಲ್ಯ ಅವರು ಇಂದು (ಸೆಪ್ಟೆಂಬರ್ 14) ತಮ್ಮ 22 ನೇ ವರ್ಷದ ಜನುಮದಿನವನ್ನು ಅಭಿಮಾನಿ ಬಳಗದವರೊಂದಿಗೆ ಆಚರಿಸಿಕೊಂಡಿದ್ದಾರೆ. [ಬೇಬಿ ಡಾಲ್ ಅಮೂಲ್ಯಗೆ ಮದುವೆ ಆಯ್ತು.!]

  ಅತ್ಯಂತ ಸಣ್ಣ ವಯಸ್ಸಿನಲ್ಲಿ ಅಂದರೆ 6 ವರ್ಷದವರಾಗಿರುವಾಗಲೇ ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟು 'ಸುಪ್ತ ಮನಸ್ಸಿನ ಸಪ್ತ ಸ್ವರಗಳು' ಎನ್ನುವ ಕಾರ್ಯಕ್ರಮದ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿಕೊಂಡರು.

  ಜೊತೆಗೆ ಆಟೋಟ ಸ್ಪರ್ಧೆಗಳು ಸೇರಿದಂತೆ ಭರತನಾಟ್ಯ, ಕರಾಟೆ ಮುಂತಾದವುಗಳ ಮೂಲಕ ತನ್ನ ಪ್ರತಿಭೆಯ ಅನಾವರಣ ಮಾಡಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಿ.ಯು.ಸಿ ಶಿಕ್ಷಣ ಹಾಗೂ ಬಿ.ಕಾಂ ಪದವಿಯನ್ನು ಪೂರೈಸಿದ್ದಾರೆ.['ಕೃಷ್ಣ' ಅಜೇಯ್ ರಾವ್ ಗೆ ಬೇಬಿ ಡಾಲ್ ಅಮೂಲ್ಯ 'ರುಕ್ಕು']

  'ಪರ್ವ', 'ಚಂದ್ರು', 'ಲಾಲಿಹಾಡು', 'ಮಹಾರಾಜ', 'ಮಂಡ್ಯ', 'ಕಲ್ಲರಳಿ ಹೂವಾಗಿ', 'ತನನಂ ತನನಂ', 'ಸಜನಿ' ಮುಂತಾದ ಚಿತ್ರಗಳಲ್ಲಿ ಬಾಲಾ ನಟಿಯಾಗಿ ಕಾಣಿಸಿಕೊಂಡು, 2007 ರಲ್ಲಿ 'ಚೆಲುವಿನ ಚಿತ್ತಾರ' ಚಿತ್ರದ ಮೂಲಕ ನಾಯಕಿ ನಟಿಯಾಗಿ ಕಾಣಿಸಿಕೊಂಡು ಇಡೀ ಚಂದನವನದಲ್ಲಿ 'ಐಸೂ' ಅಂತಾನೇ ಫೇಮಸ್ ಆದರು.[ಸ್ಕೂಟಿಯಿಂದ ಬಿದ್ದ ಬ್ಯೂಟಿ ಅಮೂಲ್ಯ ಕಾಲಿಗೆ ಪೆಟ್ಟು]

  ಇನ್ನು ಹಲವಾರು ಗಾಸಿಪ್ ಗಳು ಹರಿದಾಡಿದರೂ ಯಾವುದಕ್ಕೂ ಕ್ಯಾರೆ ಅನ್ನದೇ ತನ್ನ ಉತ್ತಮ ಅಭಿನಯದ ಮೂಲಕ ಎಲ್ಲಾ ಗಾಸಿಪ್ ಗಳಿಗೂ ಫುಲ್ ಸ್ಟಾಪ್ ಇಟ್ಟಿದ್ದಾರೆ. 'ನಾನೂ ನನ್ನ ಕನಸು', 'ಶ್ರಾವಣಿ ಸುಬ್ರಮಣ್ಯ', 'ಗಜಕೇಸರಿ', 'ಮಳೆ' ಮುಂತಾದ ಚಿತ್ರದ ಮೂಲಕ ತನ್ನ ನಟನಾ ಸಾಮರ್ಥ್ಯವನ್ನು ತೋರಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.

  ಒಟ್ನಲ್ಲಿ ಸದ್ಯಕ್ಕೆ ಬ್ಯುಸಿ ನಟಿಯರ ಸಾಲಿಗೆ ಸೇರುವ ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಅಭಿಮಾನಿಗಳ ಜೊತೆ ಸಂಭ್ರಮದಿಂದ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನೇನು ಅಭಿಮಾನಿಗಳು ಸಾಮಾಜಿಕ ಜಾಲಾತಾಣಗಳಲ್ಲಿ 'ಗೋಲ್ಡನ್ ಕ್ವೀನ್ ಅಮೂಲ್ಯಾ ಫ್ಯಾನ್ಸ್ ಕ್ಲಬ್' ಅಂತ ಟ್ರೆಂಡ್ ಹುಟ್ಟು ಹಾಕುತ್ತಿದ್ದಾರೆ. [ಗಣೇಶ್ ಅಮೂಲ್ಯರನ್ನ ಮತ್ತೆ ಒಂದು ಮಾಡೋದು ಕಷ್ಟ]

  ಸದ್ಯಕ್ಕೆ ಚಿರು ಜೊತೆ 'ರಾಮ್ ಲೀಲಾ', ಕವಿರಾಜ್ ಅವರ ಚೊಚ್ಚಲ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ', ಅಜಯ್ ರಾವ್ ಜೊತೆ 'ಕೃಷ್ಣ ರುಕ್ಕು' ಮುಂತಾದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿರುವ ಅಮೂಲ್ಯಾ ಅವರಿಗಿಂದು ನಮ್ಮ ಕಡೆಯಿಂದಲೂ ವಿಶ್ ಯೂ ಹ್ಯಾಪಿ ಬರ್ತ್ ಡೇ.

  English summary
  Golden Queen Amoolya is celebrating her 22nd Birthday today (September 14) and her fans association is all set to celebrate her birthday in style.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X