For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಸ್ಟಾರ್‌ ಗೆ ಅಗೌರವ: ಗಣೇಶ್ ಅಭಿಮಾನಿಗಳ ತಗಾದೆ

  |

  ಕನ್ನಡ ಸಿನಿಮಾ ನಟರು ಒಬ್ಬರಿಗಿಂತಲೂ ಒಬ್ಬರು ಪ್ರತಿಭಾನ್ವಿತರು. ಇವರನ್ನೆಲ್ಲಾ ಒಟ್ಟಿಗೆ ಸೇರಿಸಿ ಏನಾದರು ಹೊಸದನ್ನು ನೀಡುವ ತುಡಿತ ಹಲವು ನಿರ್ದೇಶಕರಿಗಿದೆ ಆದರೆ ಯಾರೂ ಮುಂದೆ ಬರಲು ಹೆದರುತ್ತಾರೆ. ಕಾರಣ ಅಭಿಮಾನಿಗಳ ಪ್ರಾರಂಭಿಸುವ ಸ್ಟಾರ್-ವಾರ್.

  ಈಗ ಕೊರೊನಾ ದಂತಹಾ ಸಂಕಷ್ಟದ ಸಮಯದಲ್ಲಿ ಹಲವು ಸಿನಿಮಾ ಉದ್ಯಮಗಳಲ್ಲಿ ಎಲ್ಲಾ ತಾರೆಗಳು ಒಟ್ಟಾಗಿ ಜಾಗೃತಿ ಮೂಡಿಸುವ ಕಾರ್ಯ, ಜನರಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ. ನಮ್ಮಲ್ಲೂ ಅಂಥಹಾ ಪ್ರಯತ್ನವೊಂದು ನಡೆದಿದೆ. ಆದರೆ ಇದರಲ್ಲೂ ಸ್ಟಾರ್-ವಾರ್ ಶುರುವಿಟ್ಟಿದ್ದಾರೆ ಅಭಿಮಾನಿಗಳು.

  ಶಿವಣ್ಣ, ಪುನೀತ್, ದರ್ಶನ್, ಕನ್ನಡದ ಸ್ಟಾರ್ ನಟರೆಲ್ಲರೂ ಒಂದೇ ಹಾಡಿನಲ್ಲಿ!ಶಿವಣ್ಣ, ಪುನೀತ್, ದರ್ಶನ್, ಕನ್ನಡದ ಸ್ಟಾರ್ ನಟರೆಲ್ಲರೂ ಒಂದೇ ಹಾಡಿನಲ್ಲಿ!

  'ಬದಲಾಗು ನೀನು, ಬದಲಾಯಿಸು ನೀನು' ಎಂಬ ಕೊರೊನಾ ಜಾಗೃತಿ ಹಾಡನ್ನು ಕನ್ನಡದ ಸಿನಿ ತಾರೆಯರೆಲ್ಲಾ ಸೇರಿ ಮಾಡಿದ್ದಾರೆ. ಇದನ್ನು ಪವನ್ ಒಡೆಯರ್ ನಿರ್ದೇಶಿಸಿದ್ದಾರೆ. ಸದುದ್ದೇಶದ ಪ್ರಯತ್ನದ ಭಾಗವಾಗಿ ಮೂಡಿಬರುತ್ತಿರುವ ಈ ಹಾಡಿನಲ್ಲೂ ಅಭಿಮಾನಿಗಳು ಸ್ಟಾರ್-ವಾರ್ ಪ್ರಾಂಭಿಸಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ

  ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ

  ಗಣೇಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ತೆಗೆದಿದ್ದು, ಹಾಡಿನ ಪೋಸ್ಟರ್‌ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ. ಗಣೇಶ್ ಅವರ ಚಿತ್ರವನ್ನು ಕೆಳಗೆ ಹಾಕಿದ್ದಾರೆ ಎಂದು ಬೇಸರ ವ್ಯಕ್ತಪಪಡಿಸಿದ್ದಾರೆ ಗಣೇಶ್ ಅಭಿಮಾನಿಗಳು.

  'ಗಣೇಶ್ ಫೋಟೊ ಮೂಲೆಗುಂಪು ಮಾಡಿದ್ದೀರಿ'

  'ಗಣೇಶ್ ಫೋಟೊ ಮೂಲೆಗುಂಪು ಮಾಡಿದ್ದೀರಿ'

  ಈ ಬಗ್ಗೆ ಕೆಲವು ಫ್ಯಾನ್ಸ್‌ ಪೇಜ್‌ಗಳು ಟ್ವೀಟ್ ಮಾಡಿದ್ದು, 'ಬದಲಾಗು ನೀನು, ಬದಲಾಯಿಸು ನೀನು' ಹಾಡಿಗೆ ಗಣೇಶ್ ಅಭಿಮಾನಿಗಳ ಬೆಂಬಲ ಇದೆ. ಆದರೆ ಚಿತ್ರರಂಗದ ಇತಿಹಾಸ ಬದಲಿಸಿದ ಗಣೇಶ್ ಅವರ ಫೋಟೋವನ್ನು ಮೂಲೆಗುಂಪು ಮಾಡಿರುವ ತಂಡಕ್ಕೆ ನಾವು ವಿರೋದಿಸುತ್ತೇವೆ.ಪೋಸ್ಟರ್ ಅನ್ನು ಸರಿ ಪಡಿಸಿ' ಎಂದು ಒತ್ತಾಯಿಸಿದ್ದಾರೆ.

  ನನಗೆ ಎಲ್ಲರೂ 'ಬಾಸ್‌'ಗಳೇ: ವಿವಾದಕ್ಕೆ ತೆರೆ ಎಳೆದ ಪವನ್ ಒಡೆಯರ್ನನಗೆ ಎಲ್ಲರೂ 'ಬಾಸ್‌'ಗಳೇ: ವಿವಾದಕ್ಕೆ ತೆರೆ ಎಳೆದ ಪವನ್ ಒಡೆಯರ್

  ಹಾಡಿನ ಬಿಡುಗಡೆಯ ಪೋಸ್ಟರ್ ಬಿಡುಗಡೆ

  ಹಾಡಿನ ಬಿಡುಗಡೆಯ ಪೋಸ್ಟರ್ ಬಿಡುಗಡೆ

  ಹಾಡಿನ ಬಿಡುಗಡೆಯ ಪೋಸ್ಟರ್‌ ಅನ್ನು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ಒಟ್ಟು ಮೂರು ಪೋಸ್ಟರ್‌ ಅನ್ನು ಈವರೆಗೆ ಬಿಡುಗಡೆ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಶಿವರಾಜ್‌ಕುಮಾರ್, ದರ್ಶನ್, ಯಶ್, ಪುನೀತ್ ಸೇರಿ ಹಲವರ ಚಿತ್ರಗಳಿವೆ. ಗಣೇಶ್ ಚಿತ್ರ ಯುವನಟ ಧೃವ ಸರ್ಜಾ ಪಕ್ಕ ಹಾಕಲಾಗಿದೆ. ಧೃವ ಸರ್ಜಾ ಗಿಂತಲೂ ಗಣೇಶ್ ಚಿತ್ರ ಚಿಕ್ಕದಾಗಿ ಹಾಕಿರುವುದು ಗಣೇಶ್ ಅಭಿಮಾನಿಗಳಿಗೆ ಹಿಡಿಸಿಲ್ಲ ಎನಿಸುತ್ತದೆ.

  ಜೂನ್ 5 ರಂದು ಸಂಜೆ ಹಾಡು ಬಿಡುಗಡೆ

  ಜೂನ್ 5 ರಂದು ಸಂಜೆ ಹಾಡು ಬಿಡುಗಡೆ

  'ಬದಲಾಗು ನೀನು, ಬದಲಾಯಿಸು ನೀನು' ಹಾಡು ಜೂನ್ 5 ರಂದು ಬಿಡುಗಡೆ ಆಗಲಿದೆ. ಹಾಡನ್ನು ಸಿಎಂ ಯಡಿಯೂರಪ್ಪ ಅವರು ಬಿಡುಗಡೆ ಮಾಡಲಿದ್ದಾರೆ. ಹಾಡಿಗೆ ಸಂಗೀತವನ್ನು ವಿ.ಹರಿಕೃಷ್ಣ ನೀಡಿದ್ದಾರೆ. ಪವನ್ ಒಡೆಯರ್ ನಿರ್ದೇಶಿಸಿದ್ದಾರೆ. ಇರ್ಮಾನ್ ಸರ್ದಾರಿಯ ನೃತ್ಯ ನಿರ್ದೇಶನ ಮಾಡಿದ್ದಾರೆ.

  English summary
  Corona awareness song is going to release on June 5th. But Golden star Ganesh's fans upset that Ganesh's photo has been neglected by the creators in the poster.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X