»   » ಗೋಲ್ಡನ್ ಸ್ಟಾರ್ ಗಣಿ ನಂಬಿ ಮೋಸ ಹೋಗಬೇಡಿ.! ಹುಷಾರ್..!!

ಗೋಲ್ಡನ್ ಸ್ಟಾರ್ ಗಣಿ ನಂಬಿ ಮೋಸ ಹೋಗಬೇಡಿ.! ಹುಷಾರ್..!!

Posted By: ಹರಾ
Subscribe to Filmibeat Kannada

''ಎಚ್ಚರಿಕೆ : ಸುಮ್ನೆ ತಪ್ಪಿಸಿಕೊಳ್ಳುವವರು, ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುವವರು, ಸುಖಾ ಸುಮ್ಮನೆ ವಾದ ಮಾಡುವವರು ನನ್ನ ಫೇಸ್ ಬುಕ್ ಅಕೌಂಟ್ ನಿಂದ ಹೊರ ನಡೆಯಬಹುದು''.

- ಹೀಗಂತ ಎಚ್ಚರಿಕೆಯ ಸಂದೇಶದೊಂದಿಗೆ ಗೋಲ್ಡನ್ ಸ್ಟಾರ್ ಗಣೇಶ್ ಸಕಲ ಕರುನಾಡ ಪ್ರಜೆಗಳ ಮುಂದೆ 'ಫೇಸ್ ಬುಕ್'ನಲ್ಲಿ ಒಂದು ಬೇಡಿಕೆ ಇಟ್ಟಿದ್ದಾರೆ. ಅದೇನೆಂದರೆ -

'' ಈ ಪೋಸ್ಟ್ ನ ಹಾಕುವುದಕ್ಕೆ ನಾನು ಮೊದಲು ಅಂಜಿಕೆ ವ್ಯಕ್ತಪಡಿಸಿದ್ದೆ. ಆದ್ರೆ, ನಾನು ಸೆಲೆಬ್ರಿಟಿ ಆದ ಕಾರಣದಿಂದ, ನನ್ನ ಮಾತಿಗೆ ಜನ ಓಗೊಟ್ಟು ಸಹಾಯ ಮಾಡುವುದಕ್ಕೆ ಮುಂದೆ ಬರುತ್ತಾರೆ ಅಂತ ನನ್ನ ಸ್ನೇಹಿತ ವಕೀಲ ಕಿರಣ್ ನೀಡಿದ ಸಲಹೆಯ ಮೇರೆಗೆ ಈ ಕೋರಿಕೆಯನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ.''

Golden Star Ganesh files complaint against fake Facebook ID

''ಆರ್ಥಿಕ ಸಹಾಯ ಅಗತ್ಯವಿರುವ ಬಡಪಾಯಿ ಒಬ್ಬರಿಗೆ ನಿಮ್ಮೆಲ್ಲರ ಸಹಾಯ ಅಗತ್ಯ. ದಯಾಮಾಡಿ, ಪ್ರತಿಯೊಬ್ಬರು 1000 ರೂಪಾಯಿಯನ್ನ ದೇಣಿಗೆ ನೀಡಿ'', ಅಂತ ಚಂದ್ರಶೇಖರ್.ಜಿ.ಆರ್ ಅನ್ನುವವರ ಹೆಸರು, ಬ್ಯಾಂಕ್ ಅಕೌಂಟ್ ನಂಬರ್ ಸೇರಿದಂತೆ ಮುಂತಾದ ವಿವರಗಳನ್ನ ನೀಡಿ, ಫೆಬ್ರವರಿ 23ನೇ ತಾರೀಖಿನಿಂದ ಹಲವಾರು ಬಾರಿ ಗೋಲ್ಡನ್ ಸ್ಟಾರ್ ಗಣೇಶ್ 'ಫೇಸ್ ಬುಕ್'ನಲ್ಲಿ ಸ್ಟೇಟಸ್ ಪೋಸ್ಟ್ ಮಾಡ್ತಿದ್ದಾರೆ. [ಗೋಲ್ಡನ್ ಸ್ಟಾರ್ ಗಣೇಶ್ ಸಂಭಾವನೆ ಅಷ್ಟೊಂದಾ?]

ಗೋಲ್ಡನ್ ಸ್ಟಾರ್ ಗಣೇಶ್ ಕೇಳ್ತಿದ್ದಾರೆ ಅಂದ್ಮೇಲೆ ಸಹಾಯ ಮಾಡೋಣ ಅಂತ ನೀವೇನಾದರೂ ಅಪ್ಪಿ-ತಪ್ಪಿ ದುಡ್ಡು ನೀಡೋಕೆ ಹೋದಿರಿ...ಜೋಕೆ! ಯಾಕಂದ್ರೆ, ಇದು ಗಣೇಶ್ ಅಕೌಂಟ್ ಅಲ್ಲವೇ ಅಲ್ಲ!

ಯಾರೋ ಕಿಡಿಗೇಡಿಗಳು ಗಣೇಶ್ ಹೆಸರಲ್ಲಿ ಸಾಮಾಜಿಕ ಜಾಲತಾಣವಾಗಿರುವ ಫೇಸ್ ಬುಕ್ ನಲ್ಲಿ ಖಾತೆ ತೆರೆದು, ಗಣೇಶ್ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಿರುವ ಪೋಸ್ಟ್ ಗಳನ್ನ ಹಾಕ್ತಿದ್ದಾರೆ.

Golden Star Ganesh files complaint against fake Facebook ID

ಇದನ್ನ ತಿಳಿದ ತಕ್ಷಣ ಎಚ್ಚೆತ್ತುಕೊಂಡಿರುವ ಗಣೇಶ್, ಎಲ್ಲಾ ಮಾಧ್ಯಮಗಳಲ್ಲೂ ''ಇದು ನಾನ್ನಲ್ಲ. ಚಂದ್ರಶೇಖರ್ ಯಾರು ಅಂತ ನನಗೆ ಗೊತ್ತೇ ಇಲ್ಲ. ಕಿರಣ್ ಅಂತ ಯಾರೂ ನನಗೆ ಸ್ನೇಹಿತರಿಲ್ಲ. ಇದು ಫೇಕ್ ಅಕೌಂಟ್. ಗಣೇಶ್ ಗಣೇಶ್ ಅನ್ನುವ ಅಕೌಂಟ್ ನನ್ನದಲ್ಲ.'' ಅಂತ ಹೇಳಿಕೆ ನೀಡಿದ್ದಾರೆ.

ಜೊತೆಗೆ ನಗರ ಪೊಲೀಸ್ ಆಯುಕ್ತರನ್ನ ಭೇಟಿ ಮಾಡುವುದಕ್ಕೆ ನಿರ್ಧರಿಸಿರುವ ಗಣೇಶ್ ಮತ್ತು ಪತ್ನಿ ಶಿಲ್ಪಾ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಅಲ್ಲದೇ, ಇಂತಹ ಯಾವುದೇ ಸಂದೇಶಗಳಿಗೆ ಕಿವಿಗೊಡದಂತೆ ಜನಸಾಮನ್ಯರಲ್ಲಿ ಮನವಿ ಮಾಡಿದ್ದಾರೆ. [ಟ್ವಿಟ್ಟರ್ ನಲ್ಲಿ 'ನಮಸ್ಕಾರ ನಮಸ್ಕಾರ ನಮಸ್ಕಾರ' ಗಣೇಶ್]

ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೆಲೆಬ್ರಿಟಿಗಳ ಹೆಸರಲ್ಲಿ ಬೇನಾಮಿಗಳು ಎಲ್ಲರಿಗೂ ಪಂಗನಾಮ ಹಾಕೋದು ಇದೇ ಮೊದಲಲ್ಲ. ಇಂತಹ ಹಲವಾರು ಪ್ರಕರಣಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಇದನ್ನ ತಿಳಿದು ಅಭಿಮಾನಿಗಳು ಹುಷಾರಾದರೆ, ಒಳಿತು. ಇಲ್ಲಾಂದ್ರೆ, ಎರಡು ವೈಟ್, ಒಂದು ರೆಡ್ ಗ್ಯಾರೆಂಟಿ..!

English summary
Golden Star Ganesh has lodged a complaint against a fake Facebook ID created in his name.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada