»   » ಶಿವ ಭಕ್ತ 'ಚಿನ್ನದ ತಾರೆ' ಗಣೇಶನ ಹಚ್ಚೆ ಪುರಾಣ

ಶಿವ ಭಕ್ತ 'ಚಿನ್ನದ ತಾರೆ' ಗಣೇಶನ ಹಚ್ಚೆ ಪುರಾಣ

Posted By:
Subscribe to Filmibeat Kannada

ಟಾಟ್ಯೂಗಳೆಂದ್ರೆ ಸೆಲೆಬ್ರಿಟಿಗಳಿಗೆ ಒಂಥರಾ ಗೀಳು. ಬಾಲಿವುಡ್ ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಇಂದ ಹಿಡಿದು ಕನ್ನಡದ ಲವ್ಲಿ ಸ್ಟಾರ್ ಪ್ರೇಮ್, ಸಂಜನಾ ಗಲ್ರಾನಿ, ಜಗ್ಗೇಶ್ ವರೆಗೂ ಎಲ್ಲರೂ ಟಾಟ್ಯೂ ಪ್ರಿಯರೇ.

ಸೆಲೆಬ್ರಿಟಿಗಳ ಟಾಟ್ಯೂ ಪ್ರೇಮದ ಬಗ್ಗೆ ನಾವಿಷ್ಟೆಲ್ಲಾ ಹೇಳುತ್ತಿರುವುದಕ್ಕೆ ಕಾರಣ ಗೋಲ್ಡನ್ ಸ್ಟಾರ್ ಗಣೇಶ್. ಹೌದು, ಗಣೇಶ್ ಟಾಟ್ಯೂ ಹಾಕಿಸಿಕೊಂಡಿದ್ದಾರೆ. ಯಾವುದೋ ಸಿನಿಮಾಗಾಗಿ ಟೆಂಪೊರರಿ ಟಾಟ್ಯೂ ಇರಬೇಕು ಅಂದುಕೊಳ್ಳಬೇಡಿ.

Golden Star Ganesh gets Shiva Tattoo done

ಇದು ಅಕ್ಷರಶಃ ಪರ್ಮನೆಂಟ್ ಟಾಟ್ಯೂ. ತಮ್ಮ ಬಲಗೈ ಮೇಲೆ, ತ್ರಿಶೂಲ ಹಿಡಿದಿರುವ ಶಿವನ ಟಾಟ್ಯೂ ಹಾಕಿಸಿಕೊಂಡಿದ್ದಾರೆ ಗಣೇಶ್. ಚಿಕ್ಕಂದಿನಿಂದಲೂ ಗಣೇಶ್ ಶಿವ ಭಕ್ತ. ಟಾಟ್ಯೂ ಕ್ರೇಜ್ ಶುರುವಾದಾಗಿನಿಂದಲೂ ಶಿವನ ಟಾಟ್ಯೂ ಹಾಕಿಸಿಕೊಳ್ಳಬೇಕು ಅಂತ ಆಸೆ ಪಡುತ್ತಿದ್ದರಂತೆ. ಆ ಆಸೆ ನಿನ್ನೆಯಷ್ಟೇ ಈಡೇರಿದೆ. [ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳ ಹಚ್ಚೆ ಖಯಾಲಿ]

ಶೂಟಿಂಗ್ ನಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದ ಗಣೇಶ್, ನಿನ್ನೆ ಮನೆಯಲ್ಲೇ ಟಾಟ್ಯೂ ಹಾಕಿಸಿಕೊಂಡಿದ್ದಾರೆ. ಟಾಟ್ಯೂ ಹಾಕಿಸಿಕೊಳ್ಳುವಾಗ ಕೂಲ್ ಆಗಿದ್ದ ಗಣಿಗೆ ಇಂದು ಕೊಂಚ ಕೈ ನೋವು ಶುರುವಾಗಿದೆ. ಅಷ್ಟುಬಿಟ್ಟರೆ ಹೊಸ ಟಾಟ್ಯೂ ಪರಿಣಾಮ ಖುಷಿಯಾಗಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Kannada Actor Ganesh has got himself a Shiva tattoo done on his right hand. Check out the brand new tattoo of Ganesh here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada