»   » ಗೋಲ್ಡನ್ ಸ್ಟಾರ್ ಗಣೇಶ್ ಗೆ ಮತ್ತೆ ಶುಕ್ರದೆಸೆ ಆರಂಭ

ಗೋಲ್ಡನ್ ಸ್ಟಾರ್ ಗಣೇಶ್ ಗೆ ಮತ್ತೆ ಶುಕ್ರದೆಸೆ ಆರಂಭ

By: ಜೀವನರಸಿಕ
Subscribe to Filmibeat Kannada

'ಶ್ರಾವಣಿ ಸುಬ್ರಹ್ಮಣ್ಯ' ಸಿನಿಮಾ ಹಾಡೊಂದನ್ನ ಗೋಲ್ಡನ್ ಸ್ಟಾರ್ ಗಣೇಶ್ ಅವರು ಪುನಃ ಪುನಃ ಗುನುಗುತ್ತಿದ್ದಾರೆ. "ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿವೆಯೋ..." ಅನ್ನೋ ಫೀಪ್ ಫುಲ್ ಸಾಂಗ್ ಅದು. ಯಾಕಂದ್ರೆ ಈ ಸಿನಿಮಾದಲ್ಲಿ ಬರೋ ಒಂದು ಸಾಲಿನಂತೆ ಯಾರಿಗಿಲ್ಲಿ ನಾನಿಂದು ಧನ್ಯವಾದ ಹೇಳೋದು ಕಣ್ಣ ಮುಂದೆ ನಿನ್ನನ್ನು ತಂದ ಪುಣ್ಯಕೆ ಅಂತಿದ್ದಾರೆ.

ಗಣೇಶ್ ಕಣ್ಣಮುಂದೆ 'ಶ್ರಾವಣಿ ಸುಬ್ರಹ್ಮಣ್ಯ' ಸಿನಿಮಾ ಬಂದಾಗ ಸ್ವತಃ ಗಣೇಶ್ ರಿಗೂ ಭಯವಿತ್ತು. ಚೆಲುವಿನ ಚಿತ್ತಾರದ ಜೋಡಿ ನಿರೀಕ್ಷೆ ಇರುತ್ತೆ, ಆದರೆ ಸೋತುಬಿಟ್ರೆ ಏನ್ಮಾಡೋದು ಅಂತ. ಈಗ ಗಣೇಶ್-ಅಮೂಲ್ಯಾ ಕಮಾಲ್ ನ 'ಶ್ರಾವಣಿ ಸುಬ್ರಹ್ಮಣ್ಯ' ಸೂಪರ್ ಡೂಪರ್ ಹಿಟ್ಟಾಗಿದೆ. ಗಣೇಶ್ ಗೆ ಕೋಟಿ ಕೊಟ್ಟು ಕಾಲ್ ಶೀಟ್ ಕೇಳೋಕೆ ರಿವರ್ಸ್ ಗೇರ್ ಹಾಕಿದ್ದ ನಿರ್ಮಾಪಕರು ಮತ್ತೆ ಜೆ ಪಿ ನಗರದ ಗಣೇಶ್ ಮನೆಮುಂದೆ ಕಾರ್ ಪಾರ್ಕ್ ಮಾಡಿದ್ದಾರೆ. [ದಿಲ್ ರಂಗೀಲಾ ಚಿತ್ರ ವಿಮರ್ಶೆ]


'ಆಟೋರಾಜ' ಕೂಡ ಅಷ್ಟಾಗಿ ಇಷ್ಟವಾಗದಿದ್ದಾಗ ಗೋಲ್ಡನ್ ಸ್ಟಾರ್ ಸಿನಿಮಾ ಸಂಭ್ರಮ ಮುಗಿದುಹೋಯ್ತಾ ಅಂತ ಎಲ್ಲರೂ ಅಂದುಕೊಂಡ್ರು. ಆದರೆ ಆ ನಂತರ ಬಂದ 'ಶ್ರಾವಣಿ ಸುಬ್ರಹ್ಮಣ್ಯ' ನೂರನೇ ದಿನದತ್ತ ಮುನ್ನುಗ್ತಾ ಇದೆ. 'ದಿಲ್ ರಂಗೀಲಾ' ಚಿತ್ರ ರಂಗು ರಂಗಾಗಿ ಚಿತ್ರಪ್ರೇಮಿಗಳಿಗೆ ಇಷ್ಟವಾಗ್ತಿದೆ.

ಈಗ 'ದಿಲ್ ರಂಗೀಲಾ' ಸಿನಿಮಾದ ಅಸೋಸಿಯೇಟ್ ಡೈರೆಕ್ಟರ್ ಯೋಗಿ ಅನ್ನೋರು ಗಣೇಶ್ ಗೆ ಹೊಸ ಸಿನಿಮಾ ಮಾಡ್ತಿದ್ದಾರೆ. ಯುಗಾದಿಗೆ ಚಿತ್ರದ ಮುಹೂರ್ತ ನಡೆಯಲಿದ್ದು ಹೊಸ ಸಿನಿಮಾದ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ. ಈಗ ಗಣೇಶ್ ಎರಡೆರೆಡು ಸಕ್ಸಸ್ ಪಡ್ಕೋತಿದ್ದಾರೆ ಯಾರಿಗಿಂದು ಧನ್ಯವಾದ ಹೇಳೋದು ನೀವೇ ಹೇಳಿ.

English summary
After success of his 'Sravavani Subramanya' actor Golden Star Ganesh again jump on the bandwagon. Now he has going great guns. His latest movie 'Dil Rangeela' also getting good response from audience. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada