»   » 'ಸಿಲ್ವರ್ ಜ್ಯುಬಿಲಿ' ಚಿತ್ರದ ಪ್ರಚಾರಕ್ಕೆ ಗಣೇಶ್ ಗೆ ಪುರುಸೊತ್ತಿಲ್ವ!

'ಸಿಲ್ವರ್ ಜ್ಯುಬಿಲಿ' ಚಿತ್ರದ ಪ್ರಚಾರಕ್ಕೆ ಗಣೇಶ್ ಗೆ ಪುರುಸೊತ್ತಿಲ್ವ!

By: ಸೋನು ಗೌಡ
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ತಮ್ಮ 25ನೇ ಚಿತ್ರದ ಮೇಲೆ ಅಷ್ಟಾಗಿ ನಿರೀಕ್ಷೆ ಅಥವಾ ಆಸಕ್ತಿ ಇಲ್ಲವೇ ಅಂತ ಇದೀಗ ಗಾಂಧಿನಗರದಲ್ಲಿ ಗುಸು ಗುಸು ಪ್ರಾರಂಭವಾಗಿದೆ.

ಅಂದಹಾಗೆ ಅಭಿಮಾನಿಗಳಿಗೆ ಈ ಡೌಟ್ ಬರಲು ಮುಖ್ಯ ಕಾರಣ ಏನಪ್ಪಾ ಅಂದ್ರೆ, ಇನ್ನೇನು ಆಗಸ್ಟ್ 14ರಂದು ಗಣೇಶ್ ಅಭಿನಯದ 25ನೇ ಚಿತ್ರ 'ಬುಗುರಿ' ತೆರೆ ಕಾಣುತ್ತಿದ್ದು, ಆದರೆ ಚಿತ್ರದ ಪೂರ್ವ ಪ್ರಚಾರ ಕಾರ್ಯಕ್ಕೆ ಗೋಲ್ಡನ್ ಸ್ಟಾರ್ ಪತ್ತೇನೇ ಇಲ್ಲ ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.[ಉಪ್ಪಿ2 ಎದುರು ಬುಗುರಿ ಆಡಲಿದ್ದಾರೆ ಗಣೇಶ್]

Ganesh

ಸಾಮಾನ್ಯವಾಗಿ ಯಾವುದೇ ಒಬ್ಬ ಹೀರೋಗೆ ತಮ್ಮ 25ನೇ ಚಿತ್ರ ತೆರೆ ಕಾಣುತ್ತಿದೆ ಅಂದ್ರೆ ಉತ್ಸಾಹ ಹಾಗೂ ನಿರೀಕ್ಷೆಗಳು ಸಾಕಷ್ಟು ಇದ್ದೆ ಇರುತ್ತೆ ಆದರೆ ಗೋಲ್ಡನ್ ಸ್ಟಾರ್ ವಿಚಾರದಲ್ಲಿ ಅಂತಹ ವಿಶೇಷ ಏನೂ ಕಂಡು ಬರದೆ ಇರುವುದು ಅಭಿಮಾನಿಗಳಲ್ಲಿ ಸ್ವಲ್ಪ ಮಟ್ಟಿಗೆ ಬೇಸರ ತಂದಿದೆಯಂತೆ.

'ಬುಗುರಿ' ಚಿತ್ರದ ಆಡಿಯೋ ಸಮಾರಂಭದಲ್ಲಿ ಬಿಟ್ಟರೆ ತದನಂತರ ಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಸಮಾರಂಭದಲ್ಲಿ ಗಣೇಶ್ ಕಾಣಿಸಿಕೊಳ್ಳದೇ ಇರುವುದು ನೋಡ್ತಾ ಇದ್ರೆ ಏನೋ ಇರಬಹುದು ಅಂತ ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

ಇನ್ನೇನು ಎರಡು ದಿನಗಳಲ್ಲಿ ತೆರೆ ಮೇಲೆ ಬರಲಿರುವ ಗಣೇಶ್ ಅವರ 25ನೇ ಸ್ಪೆಷಲ್ ಚಿತ್ರ 'ಬುಗುರಿ' ಪ್ರಚಾರ ಕಾರ್ಯದಲ್ಲಿ ಭಾಗವಹಿಸುವ ಬದಲಾಗಿ 'ಮುಂಗಾರು ಮಳೆ 2' ಚಿತ್ರದ ಶೂಟಿಂಗ್ ನಲ್ಲಿ ಸಕಲೇಶಪುರದ ಕಾಡಿನಲ್ಲಿ ಬ್ಯುಸಿಯಾಗಿದ್ದಾರಂತೆ.['ಬುಗುರಿ' ಗೆ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ವಾಯ್ಸ್ ]

Ganesh

ಇನ್ನೂ ನಿರ್ದೇಶಕ ಎಂ.ಡಿ ಶ್ರೀಧರ್ ಹಾಗೂ ಗಣೇಶ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಮೂರನೇ ಚಿತ್ರ 'ಬುಗುರಿ'. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಎರಿಕಾ ಪರ್ನಾಂಡೀಸ್ ಹಾಗೂ ತೆಲುಗು ತಾರೆ ರಿಚಾ ಪನೈ ಅವರೊಂದಿಗೆ ಡ್ಯುಯೆಟ್ ಹಾಡಿದ್ದಾರೆ.[ಮುಂಗಾರು ಮಳೆ 2 ಶೂಟಿಂಗ್ ಗೆ 'ಅರಣ್ಯ' ಕಟಂಕ]

ಅದೇನೇ ಇರಲಿ ಒಟ್ನಲ್ಲಿ ಅಭಿಮಾನಿಗಳ ಹಾಗೂ ಪ್ರೇಕ್ಷಕ ವರ್ಗದವರ ಎಲ್ಲಾ ಅನುಮಾನ ಹಾಗೂ ಪ್ರಶ್ನೆಗಳಿಗೆ ಉತ್ತರಿಸಲು ಗೋಲ್ಡನ್ ಸ್ಟಾರ್ ಗಣೇಶ್ ಯಾರ ಕೈಗೂ ಸಿಗುತ್ತಿಲ್ಲವಂತೆ. ಸದ್ಯಕ್ಕೆ ಗಣೇಶ್ ಅವರ ಈ ಮೌನದಿಂದ ಅಭಿಮಾನಿಗಳೆಲ್ಲರೂ ಕನ್ ಫ್ಯೂಶನ್ ಮಾಡಿಕೊಂಡಿದ್ದಂತೂ ಸತ್ಯ.

English summary
There only two days left for the release of Ganesh's 25th film 'Buguri'. Yet not much publicity is being made for the film. 'Buguri' features Kannada actor Ganesh, Actress Erica Fernandes, Actress Richa Panai in the lead role. The movie is directed by Md Sridhar of 'Chellata' fame.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada