India
  For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗೆ ಮನವಿ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್

  |

  ನಟ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಹಾಗೂ ಕಿರುತೆರೆ ಎರಡಲ್ಲೂ ಬಹಳ ಬ್ಯುಸಿಯಾಗಿದ್ದಾರೆ. ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗ ಹೊಂದಿರುವ ನಟ ಗಣೇಶ್ ಇದೀಗ ಅಭಿಮಾನಿಗಳಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

  ನಟ ಗಣೇಶ್ ತಮ್ಮ 42ನೇ ವರ್ಷದ ಹುಟ್ಟುಹಬ್ಬವನ್ನು ಕೆಲವೇ ದಿನಗಳಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಹುಟ್ಟಹಬ್ಬಕ್ಕೆ ಮುನ್ನ ತಮ್ಮ ಅಭಿಮಾನಿಗಳಿಗೆ ಪ್ರೀತಿಯ ಬಹಿರಂಗ ಪತ್ರವೊಂದನ್ನು ಗಣೇಶ್ ಬರೆದಿದ್ದಾರೆ.

  ಪ್ರತಿ ಬಾರಿ ನಟ ಗಣೇಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಅವರ ಮನೆಯ ಬಳಿ ನೆರೆದು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಕೋವಿಡ್ ಹಾಗೂ ಇನ್ನಿತರೆ ಕಾರಣಗಳಿಂದ ಅಭಿಮಾನಿಗಳೊಟ್ಟಿಗೆ ಗಣೇಶ್ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಈಗ ಮತ್ತೊಮ್ಮೆ ಗಣೇಶ್ ಹುಟ್ಟುಹಬ್ಬ ಹೊಸಿಲಿನಲ್ಲಿದ್ದು, ಇದೇ ಕಾರಣವಾಗಿ ನಟ ಗಣೇಶ್ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.

  ಪ್ರೀತಿ ಅಭಿಮಾನಕ್ಕೆ ನಾನು ಋಣಿ: ಗಣೇಶ್

  ಪ್ರೀತಿ ಅಭಿಮಾನಕ್ಕೆ ನಾನು ಋಣಿ: ಗಣೇಶ್

  ''ನನ್ನ ಕಲಾ ಬದುಕಿನ ಆರಂಭದ ದಿನಗಳಿಂದ ಶುರುವಾಗಿ ಇಲ್ಲಿಯ ತನಕವೂ ನನ್ನ ಈ ಬಣ್ಣದ ಹಾದಿಯ ಪ್ರತಿ ಹೆಜ್ಜೆಯಲ್ಲಿಯೂ ನನ್ನೊಂದಿಗೆ ಹೆಜ್ಜೆ ಹಾಕಿ ನನ್ನ ಯಶಸ್ಸು ನಿಮ್ಮದೆ ಯಶಸ್ಸು ಎಂಬ ರೀತಿಯಲ್ಲಿ ಸಂಭ್ರಮಿಸಿ ನೀವೆಲ್ಲರೂ ಖುಷಿಪಟ್ಟಿದ್ದೀರಿ. ಪ್ರತಿ ವರ್ಷವೂ ನನ್ನ ಹುಟ್ಟುಹಬ್ಬದ ದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತಿ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಸಿದ್ದೀರಿ. ನನ್ನೆಡಿಗಿನ ನಿಮ್ಮ ಈ ನಿಷ್ಕಲ್ಮಶ ಪ್ರೀತಿ ಅಭಿಮಾನಕ್ಕೆ ನಾನು ಋಣಿ'' ಎಂದಿದ್ದಾರೆ ಗಣೇಶ್.

  ಹುಟ್ಟುಹಬ್ಬದಂದು ಮನೆಯಲ್ಲಿರುವುದಿಲ್ಲ: ಗಣೇಶ್

  ಹುಟ್ಟುಹಬ್ಬದಂದು ಮನೆಯಲ್ಲಿರುವುದಿಲ್ಲ: ಗಣೇಶ್

  ಮುಂದುವರೆದು, ''ನನ್ನ ಹುಟ್ಟುಹಬ್ಬದ ನೆಪದಲ್ಲಾದರೂ ನಾನು ನಿಮ್ಮನ್ನೆಲ್ಲ ವೈಯಕ್ತಿಕವಾಗಿ ಭೇಟಿಯಾಗಿ ನಿಮ್ಮೆಲ್ಲರ ಪ್ರೀತಿಯನ್ನು ಆಸ್ವಾಧಿಸುತ್ತಾ ನಿಮ್ಮೊಡನೆಯೇ ಸಂಭ್ರಮಿಸಿ ನಿಮ್ಮ ಅಭಿಮಾನದ ಸವಿಯನ್ನು ಇಡೀ ದಿನ ಖುಷಿಯಿಂದ ಸವಿಯುವ ಹಂಬಲ ನನಗೂ ಇದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಸಹ ಸಮಯ ಈ ಸಂಭ್ರಮಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ'' ಎಂದಿದ್ದಾರೆ ಗಣೇಶ್.

  ಕೈಲಾದ ಸಹಾಯ ಮಾಡಿ, ನನಗೆ ಹಾರೈಕೆ ತಲುಪಿಸಿಬಿಡಿ: ಗಣೇಶ್

  ಕೈಲಾದ ಸಹಾಯ ಮಾಡಿ, ನನಗೆ ಹಾರೈಕೆ ತಲುಪಿಸಿಬಿಡಿ: ಗಣೇಶ್

  ''ಕೆಲ ಅನಿವಾರ್ಯ ಕಾರಣಗಳಿಂದ ಈ ವರ್ಷ ನನ್ನ ಹುಟ್ಟುಹಬ್ಬದಂದು ಅಂದರೆ ಜುಲೈ 02ರಂದು ನಾನು ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ. ನೀವೆಲ್ಲರೂ ಪ್ರತಿಬಾರಿ ಅಭಿಮಾನದಿಂದ ನನಗಾಗಿ ತರುವ ಹಾರ-ತುರಾಯಿ, ಕೇಕ್‌ ಇತ್ಯಾದಿಗಳ ಬದಲಿಗೆ ಅದೇ ಹಣದಲ್ಲಿ ಅಗತ್ಯವಿರುವ ಕಡೆಗೆ ಬಳಸಿ ನಿಮ್ಮ ಕೈಲಾಗುವ ಸೇವೆ ಮಾಡಿ, ನಿಮ್ಮೆಲ್ಲರ ಅಕ್ಕರೆಯ ಹಾರೈಕೆಗಳನ್ನು ನಮಗೆ ತಲುಪಿಸಿಬಿಡಿ'' ಎಂದಿದ್ದಾರೆ ಗಣೇಶ್. ಆ ಮೂಲಕ ಈ ವರ್ಷವೂ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ.

  ಸಿನಿಮಾ, ಕಿರುತೆರೆ ಶೋಗಳಲ್ಲಿ ಗಣೇಶ್ ಬ್ಯುಸಿ

  ಸಿನಿಮಾ, ಕಿರುತೆರೆ ಶೋಗಳಲ್ಲಿ ಗಣೇಶ್ ಬ್ಯುಸಿ

  ಈ ಜುಲೈ 02 ಕ್ಕೆ ಗಣೇಶ್ ತಮ್ಮ 42ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಹಲವು ಸಿನಿಮಾ ಹಾಗೂ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಗಣೇಶ್ ಬ್ಯುಸಿಯಾಗಿದ್ದಾರೆ. ಕರುತೆರೆಯ ಸಣ್ಣ ಕಾರ್ಯಕ್ರಮದ ಮೂಲಕ ಮನೊರಂಜನಾ ಲೋಕಕ್ಕೆ ಕಾಲಿಟ್ಟ ಗಣೇಶ್ ಆ ನಂತರ ನಾಯಕ ನಟನಾಗಿ ಬೆಳೆದ ರೀತಿ ಅದ್ಭುತ. ಇದೀಗ ಗಣೇಶ್ ನಟನೆಯ 'ಗಾಳಿಪಟ 2', 'ತ್ರಿಬಲ್ ರೈಡಿಂಗ್' ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಇದರ ಜೊತೆಗೆ 'ಬಾನ ದಾರಿಯಲ್ಲಿ' ಹಾಗೂ 'ಸ್ಟೋರಿ ಆಫ್ ರಾಯಘಡ' ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ.

  English summary
  Golden star Ganesh wrote open letter on social media to his fans about his Birthday. He is turning 42 this July 02.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X