»   » ಇನ್ನೊಂದು 'ಗೂಗ್ಲಿ' ಎಸೆಯಲು ಪವನ್ ತಯಾರಿ

ಇನ್ನೊಂದು 'ಗೂಗ್ಲಿ' ಎಸೆಯಲು ಪವನ್ ತಯಾರಿ

Posted By:
Subscribe to Filmibeat Kannada
ಈಗಾಗಲೆ ಪವನ್ ಒಡೆಯರ್ ಎಸೆದಿರುವ 'ಗೂಗ್ಲಿ'ಗೆ ಪ್ರೇಕ್ಷಕರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಈಗ ಮತ್ತೊಂದು ಗೂಗ್ಲಿ ಎಸೆಯಲು ತಯಾರಿ ನಡೆಸಿದ್ದಾರೆ. ಈ ಬಾರಿ ಇನ್ನಷ್ಟು ಪಕ್ಕಾ ಸಿದ್ಧತೆಗಳನ್ನು ಮಾಡಿಕೊಂಡು ಪೆನ್ನು ಪೇಪರ್ ಹಿಡಿದು ಕೂತಿದ್ದಾರೆ.

'ಗೂಗ್ಲಿ 2' ಚಿತ್ರ ಮಾಡುವುದಾಗಿ ಅವರು ಘೋಷಿಸಿದ್ದಾರೆ. "ಸದ್ಯಕ್ಕೆ ಒನ್ ಲೈನ್ ಸ್ಟೋರಿ ಸಿಕ್ಕಿದೆ. ಆ ಒಂದು ಎಳೆಯನ್ನು ಹಿಡಿದು ಕಥೆ ಹೆಣೆಯುತ್ತಿದ್ದೇನೆ. ಗೂಗ್ಲಿ ಚಿತ್ರದ ಪಾತ್ರಗಳು ಇಲ್ಲೂ ಇಲ್ಲದೆಯೂ ಇರಬಹುದು. ಅದನ್ನು ನಾನೂ ಈಗಲೇ ಹೇಳಲು ಸಾಧ್ಯವಿಲ್ಲ" ಎನ್ನುತ್ತಾರೆ ಪವನ್. [ಗೂಗ್ಲಿ ಚಿತ್ರ ವಿಮರ್ಶೆ]

ಒಂದಂತೂ ಖಂಡಿತವಾಗಿ ಹೇಳಬಲ್ಲ. 'ಗೂಗ್ಲಿ 2' ಚಿತ್ರದಲ್ಲಿ ಇನ್ನಷ್ಟು ತಮಾಷೆಯಂತೂ ಖಂಡಿತ ಇದ್ದೇ ಇರುತ್ತದೆ ಎಂಬ ಭರವಸೆಯನ್ನಂತೂ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಬಂಡವಾಳ ಯಾರು ಹೂಡಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಚಿತ್ರಕಥೆ ಸಿದ್ಧವಾದ ಮೇಲಷ್ಟೇ ಯಾವುದೇ ನಿರ್ಮಾಪಕರನ್ನು ಭೇಟಿಯಾಗಲು ಸಾಧ್ಯ ಎನ್ನುತ್ತಾರೆ ಪವನ್.

ರಾಕಿಂಗ್ ಸ್ಟಾರ್ ಯಶ್ ಹಾಗೂ ಕೃತಿ ಕರಬಂಧ ಅಭಿನಯದ 'ಗೂಗ್ಲಿ' ಚಿತ್ರ ಅರ್ಧ ಸೆಂಚುರಿ ಪೂರೈಸಿ ಮುನ್ನುಗ್ಗುತ್ತಿದೆ. ತೆಲುಗು ಭಾಷೆಗೂ ರೀಮೇಕ್ ಆಗುತ್ತಿದೆ. ಈ ಬಾರಿ ಅವರು ಎಸೆಯಲಿರುವ 'ಗೂಗ್ಲಿ' ಇನ್ಯಾವ ರೀತಿ ಇರುತ್ತದೋ ಎಂಬ ಕುತೂಹಲ ಇದ್ದೇ ಇದೆ. (ಏಜೆನ್ಸೀಸ್)

English summary
Pawan Wodeyar starts work on this years biggest hit movie 'Googly' sequel. Just he got one line of the story and have started developing it. The director assured that 'Googly 2' will be more fun.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada