»   » ಗಜಪ್ರಸವವಾದ ಗುರುಪ್ರಸಾದ್ ಡೈರೆಕ್ಟರ್ಸ್ ಸ್ಪೆಷಲ್

ಗಜಪ್ರಸವವಾದ ಗುರುಪ್ರಸಾದ್ ಡೈರೆಕ್ಟರ್ಸ್ ಸ್ಪೆಷಲ್

Posted By:
Subscribe to Filmibeat Kannada
Director Guruprasad
ಭರವಸೆಯ ನಿರ್ದೇಶಕ ಗುರುಪ್ರಸಾದ್ ಅವರ ಚಿತ್ರ ಎಂದರೆ ಅಕ್ಷರಶಃ ಗಜಪ್ರಸವ ಇದ್ದಂತೆ. ಏಕೆಂದರೆ ಆನೆಯ ಗರ್ಭಾವಧಿ 20ರಿಂದ 22 ತಿಂಗಳು. ಗುರುಪ್ರಸಾದ್ ಅವರ ಚಿತ್ರ ಬಿಡುಗಡೆಯಾಗಬೇಕಾದರೆ ಹೆಚ್ಚುಕಡಿಮೆ ಇಷ್ಟೇ ಸಮಯ ಹಿಡಿಸುತ್ತದೆ.

ಅವರ 'ಮಠ' ಮತ್ತು 'ಎದ್ದೇಳು ಮಂಜುನಾಥ' (ವಿಮರ್ಶೆ) ಚಿತ್ರಗಳು ಕಾಡಿಸಿ ಬೇಡಿಸಿ ಪ್ರೇಕ್ಷಕರ ಮುಂದೆ ಬಂದಿದ್ದವು. ಲೇಟ್ ಆದರೂ ಲೇಟೆಸ್ಟ್ ಆಗಿರುತ್ತದೆ ಎಂಬ ಮಾತಿಗೆ ಅವರ ಚಿತ್ರಗಳು ಬದ್ಧವಾಗಿವೆ. ಈ ಬಾರಿ ಅವರು ಮತ್ತೊಂದು ವಿಭಿನ್ನ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಇದೂ ಅಷ್ಟೇ ಸ್ಪೆಷಲ್ ಆಗಿರುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಚಿತ್ರ ಸೆನ್ಸಾರ್ ನಲ್ಲಿ ಯು/ಎ ಸರ್ಟಿಫಿಕೇಟ್ ನೊಂದಿಗೆ ಪಾಸಾಗಿದೆ. ಇನ್ನೇನಿದ್ದರೂ ಬಿಡುಗಡೆಯೊಂದೇ ಬಾಕಿ ಉಳಿದಿರುವುದು. ಮಠದ್ದು ಹಳೆಯ ಕಥೆ, ಕುಡುಕರದ್ದು ನೆನ್ನೆಯ ಕಥೆ, ಗುರುಪ್ರಸಾದ್‌ರ ಇವತ್ತಿನ ಕಥೆಗೆ ಗಾಂಧಿನಗರವೇ ವಸ್ತು.

ಸತತ ಮೂರು ವರ್ಷಗಳ ಕಾಲ ಸುದೀರ್ಘ ಸಮಯ ಈ ಚಿತ್ರಕ್ಕಾಗಿ ವೆಚ್ಚಿಸಿದ್ದಾರೆ. ಅವರು ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಕೊಂಡಿದ್ದೇ ಚಿತ್ರ ವಿಳಂಬವಾಗಲು ಕಾರಣ. ಸಂಭಾಷಣೆ ರಚನೆ, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಗಳಲ್ಲಿ ಗುರು ತೊಡಗಿಕೊಂಡಿದ್ದರು. ಆಗಾಗ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು.

ಈಗ ಸೆನ್ಸಾರ್ ಮುಗಿದಿದ್ದು ಇನ್ನೊಂದು ತಿಂಗಳಲ್ಲಿ ತಮ್ಮ ಚಿತ್ರವನ್ನು ಪ್ರೇಕ್ಷಕರ ಮುಂದಿಡಲಿದ್ದಾರೆ. ಚಿತ್ರದ ಟ್ರೇಲರ್ ಇನ್ನೊಂದು ವಾರದಲ್ಲಿ ಬಿಡುಗಡೆಯಾಗಲಿದ್ದು ಇದಕ್ಕಾಗಿ ಈಗಾಗಲೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ತಮ್ಮದೇ ಆದಂತಹ ಪ್ರೇಕ್ಷಕ ಬಳಗವನ್ನು ಹೊಂದಿರುವ ಗುರು ಅವರಿಗೆ ಪ್ರತಿಸ್ಪರ್ಧೆ ಒಡ್ಡುವ ಚಿತ್ರಗಳು ತೀರಾ ವಿರಳ. (ಒನ್ಇಂಡಿಯಾ ಕನ್ನಡ)

English summary
Matha and Eddelu Manjunatha fame Guruprasad's Director's Special clears censor and was given a U/A certificate. The film has has a story of a filmy background.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada