»   » ಎಲ್ಲಾ ಗಾಸಿಪ್ ಗಳಿಗೆ ಎಚ್.ಡಿ.ಕೆ ಉತ್ತರ

ಎಲ್ಲಾ ಗಾಸಿಪ್ ಗಳಿಗೆ ಎಚ್.ಡಿ.ಕೆ ಉತ್ತರ

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡ್ತಾರೆ ಅಂತ ಜಗಜ್ಜಾಹೀರಾದಾಗಿನಿಂದಲೂ, ಒಂದಲ್ಲಾ ಒಂದು ಗಾಸಿಪ್ ಹರಿದಾಡುತ್ತಲೇ ಇತ್ತು.

ಮಗನ ಚಿತ್ರವನ್ನ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿರುವ ಎಚ್.ಡಿ.ಕೆ ಬರೋಬ್ಬರಿ 60 ಕೋಟಿ ಬಂಡವಾಳ ಹಾಕುತ್ತಿದ್ದಾರೆ ಅಂತ ಬ್ರೇಕಿಂಗ್ ನ್ಯೂಸ್ ಆಗಿತ್ತು. ಆದ್ರೆ, ಸತ್ಯ ಸಂಗತಿನೇ ಬೇರೆ.

ನಿಖಿಲ್ ಗೌಡ ನಟಿಸಲಿರುವ 'ಜಾಗ್ವಾರ್' ಚಿತ್ರ 10-15 ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿದೆ. ''ಜಾಗ್ವಾರ್'ಗೆ 60 ಕೋಟಿ ರೂಪಾಯಿ ಬಜೆಟ್ ಇಲ್ಲ. ನನಗೆ ನಿರ್ಮಾಪಕನಾಗಿ, ಹಂಚಿಕೆದಾರನಾಗಿ ಅನುಭವ ಇದೆ. ದೊಡ್ಡ ಮಟ್ಟದಲ್ಲಿ ಹಣ ಖರ್ಚು ಮಾಡಬೇಕು ಅನ್ನೋದು ಇಲ್ಲ. ಸಿನಿಮಾಗೆ ನ್ಯಾಯ ಒದಗಿಸಬೇಕು. ಚಿತ್ರಕ್ಕೆ ಎಷ್ಟು ಅವಶ್ಯಕತೆ ಇದೆ ಅಷ್ಟೇ ಖರ್ಚು ಮಾಡ್ತೀನಿ'' ಅಂತಾರೆ ಎಚ್.ಡಿ.ಕುಮಾರಸ್ವಾಮಿ. [ಗೌಡರ ಕುಟುಂಬ ರಾಜಕಾರಣ ಎಚ್.ಡಿ.ಕೆಗೆ ಮುಕ್ತಾಯ?]

h-d-kumaraswamy-clears-all-the-speculations-on-jaguar

ಇನ್ನೂ ಸ್ಯಾಂಡಲ್ ವುಡ್ ಅಂಗಳದಲ್ಲಿ ಭಾರಿ ಭಾರಿ ಸದ್ದು ಮಾಡಿದ್ದ 'ಬಾಹುಬಲಿ' ಚಿತ್ರದ ವಿತರಣಾ ಹಕ್ಕುಗಳು ವಿಚಾರವಾಗಿಯೂ ಎಚ್.ಡಿ.ಕೆ ಸ್ಪಷ್ಟನೆ ನೀಡಿದ್ದಾರೆ. ''ಬಾಹುಬಲಿ' ಚಿತ್ರದ ಕರ್ನಾಟಕ ವಿತರಣಾ ಹಕ್ಕುಗಳು ನಾನು 150 ಕೋಟಿ ರೂಪಾಯಿ ಕೊಟ್ಟು ಕೊಂಡುಕೊಂಡಿದ್ದೇನೆ ಅಂತ ಸುದ್ದಿ ಆಗಿತ್ತು. 150 ಕೋಟಿ ರೂಪಾಯಿ ಅಂದ್ರೆ ತಮಾಷೆನಾ. ಇಲ್ಲಾ, ಖಂಡಿತ ಇಲ್ಲ. ನಾನು ಡಿಸ್ಟ್ರಿಬ್ಯೂಟ್ ಮಾಡುತ್ತಿಲ್ಲ.'' ಅಂತ ಕ್ಲಿಯರ್ ಮಾಡಿದ್ದಾರೆ. [ಡಾ.ರಾಜ್ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಏನಂದ್ರು ಗೊತ್ತಾ?]

ಫ್ಯಾಮಿಲಿ ಸ್ಟೋರಿಗಳಿಗೆ ಹೆಚ್ಚು ಒತ್ತು ನೀಡುವ ಎಚ್.ಡಿ.ಕೆ, 'ಜಾಗ್ವಾರ್' ಚಿತ್ರದಲ್ಲಿ ತಾಯಿ-ಮಗನ ಸೆಂಟಿಮೆಂಟ್ ಇದೆ ಅನ್ನುವ ಗುಟ್ಟನ್ನ ಬಿಟ್ಟುಕೊಟ್ಟಿದ್ದಾರೆ. ವಿಶೇಷ ಅಂದ್ರೆ, ನಿಖಿಲ್ ಗೆ ತಾಯಿಯಾಗಿ ನಟಿ ಸುಮಲತಾ ನಟಿಸುವ ಸಾಧ್ಯತೆ ಇದ್ಯಂತೆ. ಈ ಬಗ್ಗೆ ಸುಮಲತಾ ಜೊತೆ ಮಾತುಕತೆ ಕೂಡ ನಡೆದಿದೆ. ['ಫಿಲ್ಮಿಬೀಟ್ ಕನ್ನಡ' ವಿಶೇಷ; ಎಚ್.ಡಿ.ಕೆ ಪುತ್ರ ನಿಖಿಲ್ ಸಂದರ್ಶನ]

ಟಾಲಿವುಡ್ ಅಂಗಳದಲ್ಲಿ ಜನಪ್ರಿಯರಾಗಿರುವ ಎಸ್.ಎಸ್.ಥಮನ್, 'ಜಾಗ್ವಾರ್' ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಅಲ್ಲಿಗೆ, ಚಿತ್ರದಲ್ಲಿ ಮಸ್ತ್ ಮ್ಯೂಸಿಕ್ ಇರುವುದು ಗ್ಯಾರೆಂಟಿ. ಹಲವು ವಿಶೇಷತೆಗಳನ್ನೊಳಗೊಂಡಿರುವ 'ಜಾಗ್ವಾರ್' ಆಗಸ್ಟ್ 2 ರಂದು ಸೆಟ್ಟೇರಲಿದೆ.

English summary
Ex CM H.D.Kumaraswamy's son Nikhil Gowda is all set to make his Sandalwood debut with the movie 'Jaguar'. During the press meet, HDK has cleared all the speculations about the movie 'Jaguar'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada