»   » ಮತ್ತೊಮ್ಮೆ ಹನುಮಂತನ ಮೊರೆಹೋದ ಭಜರಂಗಿ ಹರ್ಷ

ಮತ್ತೊಮ್ಮೆ ಹನುಮಂತನ ಮೊರೆಹೋದ ಭಜರಂಗಿ ಹರ್ಷ

Posted By: ಜೀವನರಸಿಕ
Subscribe to Filmibeat Kannada

ನೃತ್ಯ ನಿರ್ದೇಶಕ ಹರ್ಷ ಮತ್ತೊಂದು ಬಿಗ್ ಧಮಾಕಾ, ಶಿವರಾಜ್ ಕುಮಾರ್ ನಟನೆಯ ವಜ್ರಕಾಯ ತೆರೆಗೆ ಬರೋಕೆ ಕೆಲವೇ ದಿನಗಳು ಬಾಕಿ ಇದೆ. ವಜ್ರಕಾಯ ಅಂದ್ರೆ ಹನುಮಂತ. ವಜ್ರದಂತಹಾ ದೇಹ ಹೊಂದಿದ ಶಕ್ತಿಶಾಲಿ ಅಂಜನೇಯ. ಈಗ ಹರ್ಷ ಮತ್ತೊಮ್ಮೆ ಆಂಜನೇಯ ಭಜನೆ ಶುರು ಮಾಡಿದ್ದಾರೆ.

ವಜ್ರಕಾಯ ಸಿನಿಮಾದ ಗೆಲುವಿಗಾಗಿ ಹರ್ಷ ಹನುಮಂತನಿಗೆ ಹೋಮ ಹವನ ಮಾಡ್ತಿದ್ದಾರೆ ಅನ್ಕೋಬೇಡಿ. ಆದರೆ, ಅವರ ಸಿನೆಮಾ ಹೆಸರುಗಳನ್ನು ನೋಡಿದರೆ ಹನುಮಂತನ ಹಿಂದೆ ಬಿದ್ದಿರುವುದಂತೂ ನಿಜ. ವಜ್ರಕಾಯ ಸಿನಿಮಾದಲ್ಲಿ ತೆಲುಗು ತಮಿಳು ಮಲೆಯಾಳಂನ ಸ್ಟಾರ್ ನಟರು ಶಿವಣ್ಣನಿಗೆ ಸಾಥ್ ಕೊಟ್ಟಿದ್ದಾರೆ. ಅಷ್ಟೇ ಯಾಕೆ ಕನ್ನಡದ ಕ್ರೇಜಿಸ್ಟಾರ್ ರವಿಮಾಮ ಕೂಡ ಟೈಟಲ್ಸಾಂಗ್ನಲ್ಲಿ ಹೆಜ್ಜೆ ಹಾಕಿದ್ದಾರೆ.

ಈಗ ಹರ್ಷ ಮತ್ತೊಂದು ಹನುಮಾನ್ ಸಿನಿಮಾ ಮಾಡೋಕೆ ಹೊರಟಿದ್ದಾರೆ. ಸಿನಿಮಾದ ಹೆಸ್ರು 'ಜೈ ಮಾರುತಿ 800'. ಇಲ್ಲಿ ಕೂಡ ಹರ್ಷ ಬ್ರಹ್ಮಚಾರಿ, ರಾಮಭಕ್ತ ಹನುಮನ ಭಕ್ತರಾಗಿದ್ದಾರೆ. ಅಂದಹಾಗೆ ಈ ಸಿನಿಮಾಗೆ ಕಾಮಿಡಿ ನಟ ಶರಣ್ ನಾಯಕ. ಹರ್ಷ ಹನುಮಾನ್ ಭಕ್ತರಾಗಿರೋ ಉಳಿದ ಸಿನಿಮಾಗಳನ್ನ ಮತ್ತೆ ನೆನಪಿಸ್ತೀವಿ ಸ್ಲೈಡ್ನಲ್ಲಿ ನೋಡ್ತಾ ಹೋಗಿ..' [ಶಿವಣ್ಣನ ಬಗ್ಗೆ ನನಗೆ ಅಪಾರ ಗೌರವವಿದೆ : ಕಿಚ್ಚ ಸುದೀಪ್]

ಶಿವಣ್ಣನ ನಾಯಕನನ್ನಾಗಿಸಿ ಭರ್ಜರಿ ಸಕ್ಸಸ್

ಹರ್ಷ ಮೊದಲು ಹನುಮಾನ್ ಭಕ್ತರಾಗಿದ್ದು ಶಿವಣ್ಣ ಅಭಿನಯದ ಭಜರಂಗಿ ಸಿನಿಮಾದಲ್ಲಿ. ಶಿವಣ್ಣನ ನಾಯಕನನ್ನಾಗಿಸಿ ಭರ್ಜರಿ ಸಕ್ಸಸ್ ಪಡ್ಕೊಂಡ ಹರ್ಷ ಸಿನಿಮಾದ ಹೆಚ್ಚಿನ ಭಾಗವನ್ನ ಹನುಮಂತನ ಮೂರ್ತಿಯೆದುರೇ ಶೂಟ್ ಮಾಡಿದ್ದಾರೆ...

ಭಜರಂಗಿಯಲ್ಲೇ ವಜ್ರದೇಹಿ ವಜ್ರಕಾಯ

ಭಜರಂಗಿ ಸಿನಿಮಾದ ಟೈಟಲ್ಸಾಂಗ್ನಲ್ಲೇ ವಜ್ರದೇಹಿ ವಜ್ರಕಾಯ ಎಲ್ಲವನ್ನೂ ಹಾಡಿಸಿದ್ದ ಹರ್ಷ ಮತ್ತೆ ಇಟ್ಟುಕೊಂಡಿದ್ದು ವಜ್ರಕಾಯ ಟೈಟಲ್ನ. ಈಗ ವಜ್ರಕಾಯ ಭಜರಂಗಿಗಿಂತ ಭರ್ಜರಿಯಾಗಿ ಮೂಡಿ ಬಂದಿದೆಯಂತೆ.

ವಜ್ರಕಾಯ ಭಜರಂಗಿ ಬೇರೆ ಬೇರೆ

ಎರಡೂ ಹೆಸರಿನ ಅರ್ಥ ಒಂದೇ ಹನುಮಂತ. ಆದ್ರೆ ಎರಡೂ ಸಿನಿಮಾಗಳಿಗೆ ಎಲ್ಲಿಯೂ ಸಂಬಂಧವಿಲ್ಲವಂತೆ. ಅದು ಸ್ವಲ್ಪ ಕಾಡು ಮೇಡಿನ ಕಥೆಯಾದ್ರೆ ಇದು ಶ್ರೀಮಂತ ಫ್ಯಾಮಿಲಿಯೊಂದರ ಶ್ರೀಮಂತ ವ್ಯಕ್ತಿತ್ವದ ಕಥೆಯಂತೆ.

ವಜ್ರಕಾಯದಲ್ಲಿ ಇಲ್ಲಿ ಗ್ಲಾಮರ್ ಹಬ್ಬ

ಭಜರಂಗಿಯಲ್ಲಿ ಗ್ಲಾಮರ್ಗೆ ಅವಕಾಶ ಕಡಿಮೆಯಿತ್ತು. ಅಲ್ಲಿ ಐಂದ್ರಿತಾ ರೇ ಮಾತ್ರ ಇದ್ರು. ಅವರಿಗೂ ಗ್ಲಾಮರಸ್ ಪಾತ್ರ ಇರಲಿಲ್ಲ. ಆದ್ರೆ ಇಲ್ಲಿ ಮೂರು ನಾಯಕಿಯರಿದ್ದಾರೆ. ಶುಭ್ರಾ ಅಯ್ಯಪ್ಪ, ನಭಾ ನಟೇಶ್, ಕರುಣ್ಯಾ ರಾಮ್ ಮೂವರೂ ಹೊಸ ಮುಖಗಳ ಗ್ಲಾಮರ್ ಹಬ್ಬ ಪ್ರೇಕ್ಷಕರಿಗೆ ಪಕ್ಕಾ.

ಜೈ ಮಾರುತಿ 800 ಕಾಮಿಡಿ ಕಿಕ್

ಶರಣ್ ಅಭಿನಯದ ಈ ಚಿತ್ರವನ್ನ ಹರ್ಷ ಜುಲೈ ತಿಂಗಳಲ್ಲಿ ಆರಂಭಿಸಲಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ವರ್ಕ್ ಮುಗಿಸಿರೋ ಟೀಂ ಶರಣ್ರ ಬುಲೆಟ್ ಬಸ್ಯಾ ಸಿನಿಮಾ ಕೂಡ ಮುಗಿದಿರೋದ್ರಿಂದ ಆಷಾಢಕ್ಕೂ ಮೊದ್ಲೇ ಸಿನಿಮಾ ಆರಂಭಿಸಲಿದೆ.

ಮೂರನೇ ಚಿತ್ರವೂ ಆಂಜನೇಯನ ಹೆಸ್ರಲ್ಲಿ

ಇತ್ತೀಚೆಗೆ ಚಿತ್ರದ ಟೈಟಲ್ ಮಾರುತಿ 800 ಅಂತ ಸುದ್ದಿಯಾಗಿತ್ತು. ಆದ್ರೆ ಈಗ ಪಕ್ಕಾ ಆಗಿರೋ ಪ್ರಕಾರ ಟೈಟಲ್ ಜೈ ಮಾರುತಿ 800. ಸತತ ಮೂರನೇ ಸಿನಿಮಾವನ್ನೂ ಆಂಜನೇಯನ ಹೆಸ್ರಲ್ಲೇ ಮಾಡ್ತಿರೋದು ವಿಶೇಷ.

English summary
Vajrakaya director Harsha fascinated with titles on lord Hanuman. First he directed Bhajaranti, now his Vajrakaya, another name for Hanuman, is ready for release. Now, Harsha has taken up another project Jai Maruti 800, again on Hanuman. Comedy actor Sharan is the hero of the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada