For Quick Alerts
  ALLOW NOTIFICATIONS  
  For Daily Alerts

  ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಗೆ ವಿಶ್ ಮಾಡಿ

  By Rajendra
  |

  ಲವ್ಲಿ ಪಾತ್ರಗಳ ಮೂಲಕ ಅಭಿಮಾನಿಗಳ ಹೃದಯ ಕದ್ದ ನಟ ಲವ್ಲಿ ಸ್ಟಾರ್ ಪ್ರೇಮ್. ಅವರ ಇತ್ತೀಚೆಗಿನ 'ಚಾರ್ ಮಿನಾರ್' ಸೆಂಚುರಿ ಬಾರಿಸಲು ಸಿದ್ಧವಾಗಿದೆ. ನವಿರಾದ ಪ್ರೇಮ ಚಿತ್ರಗಳ ಮೂಲಕ ಅವರು ಸ್ಯಾಂಡಲ್ ವುಡ್ ನಲ್ಲಿ ಹುಣ್ಣಿಮೆ ಚಂದ್ರನಂತೆ ಬೆಳಗುತ್ತಲೇ ಇದ್ದಾರೆ. ಈ ವರ್ಷ ಅವರು 'ಚಂದ್ರ' ಚಿತ್ರದ ಮೂಲಕ ಮತ್ತೊಂದು ಹಿಟ್ ಕೊಡಲು ಸಿದ್ಧವಾಗಿದ್ದಾರೆ.

  2004ರಲ್ಲಿ ಪ್ರೇಮ್ ಅವರು 'ಪ್ರಾಣ' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟರೂ ಗುರುತಿಸಿಕೊಂಡಿದ್ದು ಮಾತ್ರ 'ನೆನಪಿರಲಿ' ಚಿತ್ರದ ಮುಖಾಂತರ. ಬಳಿಕ ಜೊತೆ ಜೊತೆಯಲಿ, ಪಲ್ಲಕ್ಕಿ, ಗುಣವಂತ, ಸವಿ ಸವಿ ನೆನಪು, ಜೊತೆಗಾರ, ಐಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ ಚಿತ್ರಗಳ ಮೂಲಕ ಚಿರಪರಿಚಿತರಾದರು.

  ಲವ್ಲಿ ಸ್ಟಾರ್ ಪ್ರೇಮ್ ಅವರು ಏಪ್ರಿಲ್ 18ರಂದು 37ನೇ ವಸಂತಕ್ಕೆ ಅಡಿಯಿಡುತ್ತಿದ್ದಾರೆ. ಒನ್ಇಂಡಿಯಾ ಕನ್ನಡ ಪರವಾಗಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಆರೋಗ್ಯ ಭಾಗ್ಯ ಸದಾ ಅವರಿಗೆ ಸಿದ್ಧಿಸಲಿ. ಮತ್ತಷ್ಟು ಲವ್ಲಿ ಪಾತ್ರಗಳನ್ನು ಮಾಡಲಿ ಎಂದು ಹಾರೈಸೋಣ.

  ನಟ ಪ್ರೇಮ್ ಅವರಿಗೆ ನೀವೂ ಸಹ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಬಹುದು. ಅವರಿಗೆ ವಿಶ್ ಮಾಡಬೇಕೆ? ತುಂಬಾ ಸರಳ. ಅದು ಹೇಗೆಂದರೆ ಈ ಕೊಂಡಿಯನ್ನು ಬಳಸಿ. ನಿಮ್ಮ ನೆಚ್ಚಿನ ನಟನಿಗೆ ಶುಭಹಾರೈಕೆಗಳನ್ನು ತಿಳಿಸಿ. (ಒನ್ಇಂಡಿಯಾ ಕನ್ನಡ)

  English summary
  Happy birthday to Lovely star Prem Kumar. The actor is celebrating his 37th birthday on 18th April. Wish him on birthday. Send wishes and roses to favourite actor. Once again Many Many Happy Returns of the day in Advance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X