Don't Miss!
- News
Breaking; ಹಾಲಿ ಶಾಸಕನಿಗೆ ಟಿಕೆಟ್ ನೀಡದಂತೆ ಎಚ್ಡಿಕೆಗೆ ಮನವಿ!
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Sports
ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹರಿಪ್ರಿಯಾಗೆ ವಸಿಷ್ಠ ಪ್ರೀತಿ ಸಂದೇಶ ಕಳುಹಿಸಿದ್ದೇಗೆ? ಇಬ್ಬರ ಪ್ರೀತಿಗೆ ಸೇತುವೆಯಾದ ಕ್ರಿಸ್ಟಲ್ ಯಾರು?
ಸ್ಯಾಂಡಲ್‌ವುಡ್‌ವುಡ್‌ನಲ್ಲಿ ಸಾಲು ಸಾಲು ಶುಭ ಸಮಾರಂಭಗಳು ನಡೀತಿದೆ. ಇತ್ತೀಚೆಗೆ ನಟಿ ಅದಿತಿ ಪ್ರಭುದೇವ ಹಸೆಮಣೆ ಏರಿದ್ದರು. ಅದರ ಬೆನ್ನಲ್ಲೇ ಗುಟ್ಟಾಗಿ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇವರಿಬ್ಬರ ಪ್ರೀತಿ ಯಾವಾಗ? ಹೇಗೆ? ಶುರು ಆಯಿತು ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ವಸಿಷ್ಠ ಸಿಂಹ ಜೊತೆಗಿನ ತಮ್ಮ ಲವ್‌ಸ್ಟೋರಿಯನ್ನು ಸ್ವತಃ ನಟಿ ಹರಿಪ್ರಿಯಾ ಬಿಚ್ಚಿಟ್ಟಿದ್ದಾರೆ. ವಸಿಷ್ಠ ಸಿಂಹ ನೀಡಿದ ಅದೊಂದು ಉಡುಗೊರೆ ತಮ್ಮಿಬ್ಬರ ನಡುವೆ ಸ್ನೇಹ, ಪ್ರೀತಿ ಎಲ್ಲವನ್ನು ಹೊತ್ತು ತಂದು ತಂದಿತ್ತು ಎಂದು ಹೇಳಿದ್ದಾರೆ. ವರ್ಷದ ಹಿಂದೆ ಹರಿಪ್ರಿಯಾ ಅವರಿಗೆ ವಸಿಷ್ಠ ಸಿಂಹ ಕ್ರಿಸ್ಟಲ್ ಹೆಸರಿನ ನಾಯಿ ಮರಿಯನ್ನು ಉಡುಗೊರೆಯಾಗಿ ನೀಡಿದ್ದರಂತೆ. ಆ ನಾಯಿ ಒಂದು ವರ್ಷ ಪೂರೈಸಿದೆ. ಇದೇ ಸಮಯದಲ್ಲಿ ತಮ್ಮ ಲವ್ ಸ್ಟೋರಿಯನ್ನು ಹಂಚಿಕೊಂಡು ಹರಿಪ್ರಿಯಾ ನಾಚಿ ನೀರಾಗಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವಸಿಷ್ಠ
ಸಿಂಹ-
ಹರಿಪ್ರಿಯಾ
ಗುಪ್ತ್
ಗುಪ್ತ್
ಎಂಗೇಜ್‌ಮೆಂಟ್:
ಫನ್ನಿ
ಮೀಮ್ಸ್
ವೈರಲ್
ತೆಲುಗಿನ 'ಎವರು' ಕನ್ನಡ ರೀಮೆಕ್‌ನಲ್ಲಿ ದಿಗಂತ್, ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಒಟ್ಟಿಗೆ ನಟಿಸುತ್ತಿದ್ದಾರೆ. ಇದೇ ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರ ನಡುವೆ ಸ್ನೇಹ ಶುರುವಾಗಿತ್ತು. ಇಬ್ಬರು ಒಬ್ಬರನ್ನೊಬ್ಬರು ಪಾರ್ಟ್ನರ್ ಎಂದು ಕರೆದುಕೊಳ್ಳುತ್ತಿದ್ದರು. ಆದರೆ ಇಬ್ಬರು ಪ್ರೇಮಪಾಶಕ್ಕೆ ಸಿಲುಕಿರುವ ಬಗ್ಗೆ ಯಾರಿಗೂ ಸುಳಿವು ಸಿಕ್ಕಿರಲಿಲ್ಲ.

ಇಬ್ಬರ ಪ್ರೀತಿ ಶುರುವಾಗಿದ್ದು ಯಾವಾಗ?
ನಟಿ ಹರಿಪ್ರಿಯಾ ಲಕ್ಕಿ ಮತ್ತು ಹ್ಯಾಪಿ ಎನ್ನುವ ಎರಡು ನಾಯಿಗಳನ್ನು ಸಾಕಿದ್ದರು. ಆದರೆ ಲಕ್ಕಿ ನಾಯಿ ಸತ್ತುಹೋದ ಬಳಿಕ ಹ್ಯಾಪಿ ನಾಯಿ ಒಂಟಿಯಾಗಿತ್ತು. ಅದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದ ಹರಿಪ್ರಿಯಾ ಮತ್ತೆ ಹಿಂದಿರುಗಿ ಬರುತ್ತದೆ ಎಂದು ಅಂದುಕೊಂಡಿದ್ದರಂತೆ. ಅದೇ ಸಮಯದಲ್ಲಿ ವಸಿಷ್ಠ ಸಿಂಹ ಕ್ರಿಸ್ಟಲ್ ಹೆಸರಿನ ನಾಯಿಮರಿಯನ್ನು ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಲ್ಲಿಂದ ಪ್ರಾರಂಭವಾಯಿತು ಇಬ್ಬರ ಪ್ರೀತಿ.

ಹ್ಯಾಪಿಗೆ ಹತ್ತಿರವಾಗಿದ್ದ ಕ್ರಿಸ್ಟಲ್
"ಹ್ಯಾಪಿ ಮತ್ತು ಕ್ರಿಸ್ಟಲ್ ನಡುವೆ ಸ್ನೇಹ ಬೆಳೆಯಲು ಸ್ವಲ್ಪ ಸಮಯ ಬೇಕಾಯಿತು. ಅಚ್ಚರಿ ಎಂದರೆ ಲಕ್ಕಿ ಹುಟ್ಟಿದ ಅದೇ ಕ್ರಿಸ್ಟಲ್ ಹುಟ್ಟಿದ್ದು. ಲಕ್ಕಿ ಕೂಡ ಅದೇ ದಿನ ಹುಟ್ಟಿದ್ದು ಎನ್ನುವುದು ಗೊತ್ತಾಯಿತು. ಕ್ರಿಸ್ಟಲ್ ಸದಾ ಹ್ಯಾಪಿಯ ವಸ್ತುಗಳ ಜೊತೆ ಆಟ ಆಡ್ತಿದ್ದ. ಇದು ಹ್ಯಾಪಿಗೆ ಸಿಟ್ಟು ತರಿಸುತಿತ್ತು. ನಿಧಾನವಾಗಿ ಕ್ರಿಸ್ಟಲ್ ಮೋಡಿ ಮಾಡಿದ. ಯಾರನ್ನು ಬೇಕಾದರೂ ಅವನು ಬೇಗ ಫ್ರೆಂಡ್ ಮಾಡಿಕೊಳ್ತಾನೆ. ಹ್ಯಾಪಿಗೂ ಲಕ್ಕಿನೇ ಮತ್ತೆ ಬಂದಿದೆ ಎನ್ನಿಸಿರಬೇಕು. ಕ್ರಿಸ್ಟಲ್ ಹ್ಯಾಪಿ ಜೊತೆಗೂ ಫ್ರೆಂಡ್‌ಶಿಪ್ ಬೆಳೆಸಿಕೊಂಡ. ಈಗ ಇಬ್ಬರು ಒಟ್ಟಿಗೆ ಆಟ ಆಡಿಕೊಂಡು ಇರ್ತಾರೆ' ಎಂದು ಹರಿಪ್ರಿಯಾ ವಿಡಿಯೋದಲ್ಲಿ ಹೇಳಿದ್ದಾರೆ.
ಹೊರಬಿದ್ದವು
ವಸಿಷ್ಠ
ಸಿಂಹ
ಹಾಗೂ
ಹರಿಪ್ರಿಯಾ
ನಿಶ್ಚಿತಾರ್ಥದ
ಚಿತ್ರಗಳು

ಕ್ರಿಸ್ಟಲ್ ನಮ್ಮಿಬ್ಬರ ಪ್ರೀತಿಗೆ ಕನ್ನಡಿ
"ನಿಮಗೊಂದು ಸೀಕ್ರೆಟ್ ಹೇಳ್ತೀನಿ. ವಸಿಷ್ಠ ಈ ನಾಯಿಯನ್ನು ಗಿಫ್ಟ್ ಮಾಡಿದಾಗ ಒಂದು ಸಂದೇಶವನ್ನು ಹೊತ್ತು ತಂದಿದ್ದಾನೆ ಎನ್ನುವುದು ಗೊತ್ತಿರಲಿಲ್ಲ. ಅವನ ಎದೆಯ ಭಾಗದಲ್ಲಿ ಹಾರ್ಟ್ ಸಿಂಬಲ್‌ನ ಒಂದು ಬರ್ತ್ ಮಾರ್ಕ್ ಇದೆ. ಅವನು ಬೆಳೆಯುತ್ತಾ ಬೆಳೆಯುತ್ತಾ ಬರ್ತ್ ಮಾರ್ಕ್ ಬೆಳೀತು. ನಮ್ಮ ಸ್ನೇಹವೂ ಬೆಳೆಯಿತು. ಅದೇ ರೀತಿ ನಮ್ಮ ಪ್ರೀತಿ ಕೂಡ ಬೆಳೆಯಿತು. ಕ್ರಿಸ್ಟಲ್ ನಮ್ಮಿಬ್ಬರ ಪ್ರೀತಿಗೆ ಕನ್ನಡಿ ಹಿಡಿದಿದ್ದಾನೆ' ಎಂದು ಹರಿಪ್ರಿಯಾ ಹೇಳಿದ್ದಾರೆ.

ಮುಂದಿನ ವರ್ಷ ಮದುವೆ
ಹರಿಪ್ರಿಯಾ- ವಸಿಷ್ಠ ಸಿಂಹ ಇತ್ತೀಚೆಗೆ ದುಬೈನಲ್ಲಿ ಶಾಪಿಂಗ್ ಮಾಡಿ ಬಂದಿದ್ದರು. ಧನುರ್ಮಾಸ ಆರಂಭಕ್ಕೂ ಮುನ್ನ ನಿಶ್ಚಿತಾರ್ಥ ಮಾಡಿಕೊಳ್ಳಲು ಜೋಡಿ ನಿರ್ಧರಿಸಿತ್ತು. ಹಾಗಾಗಿ ಸರಳವಾಗಿ ಹರಿಪ್ರಿಯಾ ಮನೆಯಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಂಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲೇ ತಾರಾ ಜೋಡಿಯ ಮದುವೆ ಆಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ.