For Quick Alerts
  ALLOW NOTIFICATIONS  
  For Daily Alerts

  'ನೀರ್ ದೋಸೆ'ಯ 'ಕುಮುದಾ' ಸಿಗರೇಟ್ ಸೇದಿ ಅನುಭವಿಸಿದ ಕಷ್ಟ ಒಂದಲ್ಲ, ಎರಡಲ್ಲ...

  |

  'ನೀರ್ ದೋಸೆ' ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿದ್ದ ಹರಿಪ್ರಿಯಾ ಅಚ್ಚರಿ ಮೂಡಿಸಿದ್ದರು. ಪಾತ್ರ ಬೇಡಿದ್ದನ್ನು ಅಚ್ಚುಕಟ್ಟಾಗಿ ನೀಡಿದ್ದ ಅವರ ಅಭಿನಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರ ನಟನೆ ಅನೇಕರ ನಿದ್ದೆಗೆಡಿಸಿತ್ತು.

  ಉಪೇಂದ್ರ ಜೊತೆ ಮೊದಲ ಬಾರಿಗೆ ನಟಿಸುತ್ತಿದ್ದಾರೆ ಹರಿಪ್ರಿಯ | Haripriya | Upendra

  ಆದರೆ ಆ ಪಾತ್ರವನ್ನು ನಿಭಾಯಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂಬುದನ್ನು ಹರಿಪ್ರಿಯಾ ಬಹಿರಂಗಪಡಿಸಿದ್ದಾರೆ.

  ಬಾಯ್ ಫ್ರೆಂಡ್ ಯಾರು? SSLC ಮಾರ್ಕ್ಸ್ ಎಷ್ಟು? ಬಳಸುವ ಸೋಪ್ ಯಾವುದು? ಅಭಿಮಾನಿಗಳ ಪ್ರಶ್ನೆಗೆ ಹರಿಪ್ರಿಯಾ ಉತ್ತರಬಾಯ್ ಫ್ರೆಂಡ್ ಯಾರು? SSLC ಮಾರ್ಕ್ಸ್ ಎಷ್ಟು? ಬಳಸುವ ಸೋಪ್ ಯಾವುದು? ಅಭಿಮಾನಿಗಳ ಪ್ರಶ್ನೆಗೆ ಹರಿಪ್ರಿಯಾ ಉತ್ತರ

  ನಟನೆ ಮಾಡುವಾಗ ಕಲಾವಿದರು ಆ ಪಾತ್ರವಾಗುವುದು ಬಹಳ ಮುಖ್ಯ. ನನ್ನ ಎಲ್ಲ ಸಿನಿಮಾಗಳಲ್ಲಿನ ಪಾತ್ರಗಳಲ್ಲಿ ಹೇಗೆ ಪ್ರಯೋಗ ಮಾಡಲು ಬಯಸುತ್ತಿದ್ದೆ ಎಂಬುದನ್ನು ನೀವು ಗಮನಿಸಿರಬಹುದು. ನಾನೊಂದು ಪಾತ್ರ ಮಾಡುವಾಗ ಆ ಪಾತ್ರಕ್ಕೆ ಸಂಬಂಧಿಸಿದ ಎಲ್ಲ ಸಂಗತಿಗಳನ್ನೂ ತಿಳಿದುಕೊಳ್ಳಬೇಕು ಮತ್ತು ಅದು ನಿಜವಾಗಿರುವಂತೆ ಮಾಡಬೇಕು ಎಂದಿರುವ ಹರಿಪ್ರಿಯಾ, ನೀರ್ ದೋಸೆ ಚಿತ್ರದಲ್ಲಿನ 'ಬೆಳ್ಳುಳ್ಳಿ' ಅಲಿಯಾಸ್ 'ಕುಮುದಾ' ಪಾತ್ರದಲ್ಲಿ ಸಿಗರೇಟ್ ಸೇದುವ ಕಷ್ಟವನ್ನು ಹಂಚಿಕೊಂಡಿದ್ದಾರೆ. ಅದನ್ನು ಅವರದೇ ಮಾತುಗಳಲ್ಲಿ ಓದಿಕೊಳ್ಳಿ...

  ಸಿಗರೇಟ್ ಕಲಿಸಿದ ಸಹೋದರ

  ಸಿಗರೇಟ್ ಕಲಿಸಿದ ಸಹೋದರ

  'ನಾನು ಸಿಗರೇಟ್ ಸೇದುತ್ತೇನೆ ಎನ್ನುವುದು ನನಗೇ ಗೊತ್ತಿರಲಿಲ್ಲ. ಆದರೆ ಇಲ್ಲಿ ಸಿಗರೇಟ್ ನನ್ನ ಕೈಬೆರಳ ಸಂದಿಯಲ್ಲಿತ್ತು, ಅದನ್ನು ಹಿಡಿದುಕೊಂಡು ಏನು ಮಾಡುವುದೆಂದೇ ತಿಳಿದಿರಲಿಲ್ಲ. ಸಿಗರೇಟ್ ಸೇದುವ ನನ್ನ ಸಹೋದರ ಮತ್ತು ಅವನ ಸ್ನೇಹಿತರನ್ನು ಸಹಾಯಕ್ಕಾಗಿ ಕೇಳಿದ್ದೆ. ಸಿಗರೇಟ್ ಬಿಡುವಂತೆ ಅವರ ಮನವೊಲಿಸಲು ನಾನು ಯಾವಾಗಲೂ ಪ್ರಯತ್ನಿಸುತ್ತಿದ್ದವಳು. ಒಂದು ದಿನ ಅವರ ಸ್ಮೋಕಿಂಗೇ ನನಗೆ ಸಹಾಯವಾಗಿ ಬರುತ್ತದೆ ಎನ್ನುವುದು ಯಾರಿಗೆ ಗೊತ್ತಿತ್ತು?

  ರಾಜಕೀಯ ರಂಗಕ್ಕೆ ಇಳಿಯುತ್ತಾರಾ 'ನೀರ್ ದೋಸೆ' ಬೆಡಗಿ ಹರಿಪ್ರಿಯಾ?ರಾಜಕೀಯ ರಂಗಕ್ಕೆ ಇಳಿಯುತ್ತಾರಾ 'ನೀರ್ ದೋಸೆ' ಬೆಡಗಿ ಹರಿಪ್ರಿಯಾ?

  ಟೆರೇಸ್‌ನಲ್ಲಿ ಕದ್ದುಮುಚ್ಚಿ ಹೊಗೆಯಾಟ

  ಟೆರೇಸ್‌ನಲ್ಲಿ ಕದ್ದುಮುಚ್ಚಿ ಹೊಗೆಯಾಟ

  ಮೊದಲ ಬಾರಿಯಾಗಿದ್ದರಿಂದ ಅವರು ನನಗೆ ಯಾವುದೋ ಅಷ್ಟಾಗಿ ಘಾಟು ಇಲ್ಲದ ಸಿಗರೇಟ್ ಸೇದುವಂತೆ ಸಲಹೆ ನೀಡಿದ್ದರು. ನಾನು ಮತ್ತು ನನ್ನ ಸಹೋದರ ಇಬ್ಬರೂ ಟೆರೇಸ್‌ಗೆ ಹೋಗಿ ಅಕ್ಕಪಕ್ಕದ ಮನೆಯವರಿಗೆ ಕಾಣಿಸದಂತೆ ಕದ್ದು ಕುಳಿತು ಸಿಗರೇಟ್ ಸೇದುತ್ತಿದ್ದೆವು. ನಾನು ಸೇದಿದ್ದಕ್ಕಿಂತಲೂ ಕೆಮ್ಮಿದ್ದೇ ಹೆಚ್ಚು. ಒಂದು ಪಫ್ ತಗೊಂಡು ಕೂಡಲೇ ಹೊರಬಿಡುತ್ತಿದ್ದೆ. ಬಳಿಕ ನನ್ನ ಸಹೋದರ ನನ್ನ ಶ್ವಾಸಕೋಶದೊಳಗೆ ಅದನ್ನು ಹೇಗೆ ಎಳೆದುಕೊಂಡು ಕೆಲವು ಸೆಕೆಂಡ್‌ಗಳವರೆಗೆ ಹಿಡಿದಿಟ್ಟುಕೊಂಡರೆ ಅದು ನೈಜವಾಗಿರುತ್ತದೆ ಎಂಬುದನ್ನು ಕಲಿಸಿಕೊಟ್ಟ.

  ಅಮ್ಮ ನಗುತ್ತಿದ್ದಳು

  ಅಮ್ಮ ನಗುತ್ತಿದ್ದಳು

  ಸಿಗರೇಟ್ ಹಿಡಿದುಕೊಳ್ಳುವುದು ಮತ್ತು ಹಚ್ಚುವುದನ್ನೂ ಅವನೇ ತಿಳಿಸಿದ. ಕೆಲಸ ಮುಗಿದ ಪ್ರತಿ ಸಂಜೆಯೂ ನಾವಿಬ್ಬರೂ ಸಿಗರೇಟ್ ಸೇದಲು ಟೆರೇಸ್‌ಗೆ ಹೋಗುತ್ತಿದ್ದೆವು. ಅಮ್ಮನಿಗೆ ಅದನ್ನು ಅಣಕಿಸಲು ಬಳಸುತ್ತಿದ್ದೆವು. 'ಬಾಯ್ ಅಮ್ಮಾ, ನಾವು ಸಿಗರೇಟ್ ಸೇದಲು ಹೋಗುತ್ತಿದ್ದೇವೆ' ಎಂದು. ನಾವು ಆಕೆಯ ಪ್ರತಿಕ್ರಿಯೆ ತಿಳಿಯಲು ಬಯಸುತ್ತಿದ್ದೆವು. ಆಕೆ ನಮ್ಮ ಹುಡುಗಾಟ ಕಂಡು ನಗಲು ಆರಂಭಿಸಿದಳು. ಇದನ್ನು ಅಭ್ಯಾಸ ಮಾಡಿಕೊಳ್ಳಬೇಡಿ ಎಂದು ಹೇಳುತ್ತಲೇ ಇದ್ದಳು.

  ಹರಿಪ್ರಿಯಾ ಮನೇಲಿ ನಡೀತಿದೆ ಕೊಡೋ ತಗೋಳೋ ಮಾತುಕತೆ: ಮದ್ವೆ ಆಗ್ತಾರಾ ಬೆಡಗಿ?ಹರಿಪ್ರಿಯಾ ಮನೇಲಿ ನಡೀತಿದೆ ಕೊಡೋ ತಗೋಳೋ ಮಾತುಕತೆ: ಮದ್ವೆ ಆಗ್ತಾರಾ ಬೆಡಗಿ?

  ಎರಡು ಪ್ಯಾಕ್ ಸೇದಿದ್ದೆ!

  ಎರಡು ಪ್ಯಾಕ್ ಸೇದಿದ್ದೆ!

  ಈ ಚಿತ್ರದಲ್ಲಿ ಈಜುಕೊಳದ ಬಳಿ ಸಿಗರೇಟ್ ಸೇದುವ ದೃಶ್ಯವನ್ನು ನೀವು ನೋಡಿರಬಹುದು. (ಈ ಚಿತ್ರದ ಬಗ್ಗೆ ನಿಮಗೆ ನಾನು ತುಂಬಾ ಹೇಳುವುದಿದೆ). ನಿಮಗೆ ಬಾತ್ ಟಬ್ ಸೀನ್ ನೆನಪಿರಬಹುದು. ದೃಶ್ಯದ ಮುಂದುವರಿಕೆಗೆ ತೊಂದರೆಯಾಗದಂತೆ ಸನ್ನಿವೇಶ ಪೂರ್ಣಗೊಳ್ಳುವವರೆಗೂ ನಾನು ಬಾತ್ ಟಬ್‌ನಲ್ಲಿಯೇ ಮಲಗಿದ್ದೆ. ದೃಶ್ಯ ಮುಗಿಯುವವರೆಗೂ ಸಿಗರೇಟ್ ಸೇದುತ್ತಲೇ ಇದ್ದೆ. ಬಾತ್‌ಟಬ್‌ನಿಂದ ಎದ್ದಾಗ ನನಗೆ ಆಘಾತವಾಗಿತ್ತು. ಏಕೆಂದರೆ ನೆಲದ ಮೇಲೆ ಸುಮಾರು ಎರಡು ಪ್ಯಾಕ್‌ನಷ್ಟು ಸಿಗರೇಟ್ ಬಿದ್ದಿತ್ತು.

  ಕೆಟ್ಟ ವಾಸನೆ ಸಹಿಸಲಾಗುತ್ತಿರಲಿಲ್ಲ

  ಕೆಟ್ಟ ವಾಸನೆ ಸಹಿಸಲಾಗುತ್ತಿರಲಿಲ್ಲ

  ಜನರು ಸ್ಮೋಕಿಂಗ್‌ಗೆ ಹೇಗೆ ವ್ಯಸನರಾಗುತ್ತಾರೋ ನನಗೆ ಅರ್ಥವಾಗುತ್ತಿಲ್ಲ. ಏಕೆಂದರೆ ಅದು ನನಗಂತೂ ಬಹಳ ಕೆಟ್ಟ ಅನುಭವ ನೀಡಿತು. ಸಿನಿಮಾದುದ್ದಕ್ಕೂ ನಾನು ಕೆಮ್ಮುತ್ತಲೇ ಇದ್ದೆ. ಆ ಸಮಯದಲ್ಲಿ ಗಂಟಲು ನೋವು ಕೂಡ ಕಾಣಿಸಿಕೊಂಡಿತ್ತು. ಪ್ರತಿ ಸ್ಮೋಕಿಂಗ್ ದೃಶ್ಯದ ನಂತರವೂ ನಾನು ಹಲ್ಲುಜ್ಜುತ್ತಿದ್ದೆ ಇಲ್ಲವೇ ಮೌತ್ ಸ್ಪ್ರೇ ಬಳಸುತ್ತಿದ್ದೆ. ನನ್ನನ್ನು ನಾನು ಫ್ರೆಶ್ ಆಗಿರಿಸಿಕೊಳ್ಳಲು ಬಯಸಿದ್ದೆ. ಆ ಕೆಟ್ಟ ವಾಸನೆಯನ್ನು ದ್ವೇಷಿಸುತ್ತಿದ್ದೆ.

  ಸಾಕಷ್ಟು ಸಮಸ್ಯೆ ಅನುಭವಿಸಿದೆ

  ಸಾಕಷ್ಟು ಸಮಸ್ಯೆ ಅನುಭವಿಸಿದೆ

  ಆ ಶೂಟಿಂಗ್ ಮುಕ್ತಾಯಗೊಂಡ ಕೊನೆಯ ದಿನವೇ ನಾನು ಸಿಗರೇಟ್ ಮುಟ್ಟಿತ್ತು. ಅದು ನನ್ನ ಮೇಲೆ ಕೆಟ್ಟ ಪರಿಣಾಮ ಬೀರಿತು. ಹಗೆಯ ಸುತ್ತ ಇದ್ದಾಗಲೆಲ್ಲಾ ನನಗೆ ಮೈಗ್ರೇನ್ ಬರಲು ಆರಂಭಿಸಿತ್ತು. ಅದು ಹವನದ ಕುಂಡ ಹೊಗೆಯಾಗಿರಬಹುದು ಅಥವಾ ಅಗರಬತ್ತಿ ಹೊಗೆಯಾಗಿರಬಹುದು. ಅದರಿಂದ ನನಗೆ ಸೀನು ಕೂಡ ಬರುತ್ತಿತ್ತು. ಎಲ್ಲ ಬಗೆಯ ಹೊಗೆಯಿಂದಲೂ ಕಷ್ಟವಾಗಲಾರಂಭಿಸಿತು. ನಾಲ್ಕು ವರ್ಷದ ನಂತರ ಇಂದೂ ಕೂಡ ನನಗೆ ಕಷ್ಟ ಕೊಡುತ್ತಿದೆ. ಆದರೆ ಆ ಸಿನಿಮಾದಿಂದ ಹೊರಬಂದ ಮೆಚ್ಚುಗೆ ಹಾಗೂ ಯಶಸ್ಸು ಅದೆಲ್ಲ ಶ್ರಮವನ್ನೂ ಸಾರ್ಥಕಗೊಳಿಸಿತು. 'ಮುಕೇಶ್ ಹೇಳುವುದನ್ನು ನೆನಪಿಟ್ಟುಕೊಳ್ಳಿ, ಸಿಗರೇಟ್ ಸಾಯಿಸುತ್ತದೆ'.

  English summary
  Kannada actress Haripriya was much appreciated for her bold acting in Neer Dose, but she still facing the bad effect of smoking scenes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X