For Quick Alerts
  ALLOW NOTIFICATIONS  
  For Daily Alerts

  ತಮಿಳಿಗೆ ಹೊರಟ ಹರಿಪ್ರಿಯಾ: ಸ್ಟಾರ್ ನಟನ ಚಿತ್ರಕ್ಕೆ ನಾಯಕಿ

  |

  ಕನ್ನಡ ಇಂಡಸ್ಟ್ರಿಯ ಪ್ರತಿಭಾನ್ವಿತ ಹಾಗೂ ಬ್ಯುಸಿಯೆಸ್ಟ್ ನಟಿ ಹರಿಪ್ರಿಯಾ. ಪ್ರಸ್ತುತ, ಎಂಟು ಹೊಸ ಕನ್ನಡ ಸಿನಿಮಾಗಳಲ್ಲಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಇದೀಗ, ತಮಿಳು ಇಂಡಸ್ಟ್ರಿಯಿಂದ ಆಫರ್ ಬಂದಿದ್ದು, ಸ್ಟಾರ್ ನಟನ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ಹರಿಪ್ರಿಯಾ ಕನ್ನಡದ ಜೊತೆ ಜೊತೆ ತೆಲುಗು ಮತ್ತು ತಮಿಳು ಭಾಷೆಯಲ್ಲೂ ಸಿನಿಮಾ ಮಾಡಿದ್ದಾರೆ. ಆದರೆ, ಉಗ್ರಂ ನಟಿಗೆ ಯಶಸ್ಸು ಸಿಕ್ಕಿದ್ದು ಕನ್ನಡದಲ್ಲಿ ಮಾತ್ರ. ಇದೀಗ, ಕಾಲಿವುಡ್ ಸ್ಟಾರ್ ನಟನ ಚಿತ್ರಕ್ಕೆ ಹೀರೋಯಿನ್ ಆಗ್ತಿರೋದು ಹರಿಪ್ರಿಯಾಗೆ ಅದೃಷ್ಟ ತರಬಹುದು.

  ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವ: 'ಅಮೃತಮತಿ'ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವ: 'ಅಮೃತಮತಿ'ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

  ಹೌದು, 'ನಾಡೋಡಿಗಳ್' (ಕನ್ನಡದಲ್ಲಿ-ಹುಡುಗರು) ಖ್ಯಾತಿಯ ಶಶಿಕುಮಾರ್ ನಟಿಸುತ್ತಿರುವ ಚಿತ್ರಕ್ಕೆ ಹರಿಪ್ರಿಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸತ್ಯಶಿವ ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ಶಶಿಕುಮಾರ್‌ಗೆ ಜೋಡಿಯಾಗಿ ಕನ್ನಡದ ಚೆಲುವೆ ಕಾಣಿಸಿಕೊಳ್ಳಲಿದ್ದಾರೆ.

  ಅಂದ್ಹಾಗೆ, ಹರಿಪ್ರಿಯಾಗೆ ತಮಿಳು ಇಂಡಸ್ಟ್ರಿ ಹೊಸದೇನಲ್ಲ. ಈ ಮುಂಚೆ 2010ರಲ್ಲಿ 'ಕನಗಾವಲ್ ಕಾಕಾ' ಚಿತ್ರದಲ್ಲಿ ನಟಿಸಿದ್ದರು. ಇದು ಮೊದಲ ತಮಿಳು ಚಿತ್ರ. ಇದಾದ ಬಳಿಕ ಅರ್ಜುನ್ ಸರ್ಜಾ ನಟನೆಯ 'ವಲ್ಲಕೋಟೈ' ಮತ್ತು ಪ್ರಸನ್ನ, ಚೆರಣ್ ಅಭಿನಯದ ಥ್ರಿಲ್ಲರ್ ಸಿನಿಮಾ 'ಮುರಾನ್'ನಲ್ಲಿ ಕಾಣಿಸಿಕೊಂಡರು. ಆಮೇಲೆ ಕನ್ನಡ ಸಿನಿಮಾ ಇಂಡಸ್ಟ್ರಿ ಕಡೆ ಹೆಚ್ಚು ಗಮನ ಕೊಟ್ಟ ಹರಿಪ್ರಿಯಾ ತಮಿಳು ಸಿನಿಮಾ ಮಾಡಿಲ್ಲ. ಇದೀಗ ಹತ್ತು ವರ್ಷದ ನಂತರ ಮತ್ತೆ ತಮಿಳಿಗೆ ಎಂಟ್ರಿಯಾಗಿದ್ದಾರೆ.

  ಶಶಿಕುಮಾರ್ ಮತ್ತು ಹರಿಪ್ರಿಯಾ ಜೊತೆಗೆ ವಿಕ್ರಾಂತ್, ತುಳಸಿ ಮತ್ತು ಮಧುಸೂಧನನ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಚಿತ್ರದ ಶೀರ್ಷಿಕೆ, ಚಿತ್ರೀಕರಣದ ಯೋಜನೆ ಹಾಗೂ ಇತರೆ ವಿವರಗಳನ್ನು ಶೀಘ್ರದಲ್ಲೇ ಘೋಷಿಸಲು ತಂಡ ನಿರ್ಧರಿಸಿದೆ. ನಿವಾಸ್ ಕೆ ಪ್ರಸನ್ನ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಶ್ರೀಕಾಂತ್ ಎನ್ ಬಿ ಸಂಕಲನ ಮಾಡುತ್ತಿದ್ದರೆ, ರಾಜ ಭಟ್ಟಾಚಾರ್ಜಿ ಛಾಯಾಗ್ರಹಣ ಮಾಡಲಿದ್ದಾರೆ. ಸಿ ಉದಯಕುಮಾರ್ ಕಲಾ ನಿರ್ದೇಶನ ಮತ್ತು ಮಹೇಶ್ ಸಾಹಸ ನಿರ್ದೇಶನ ಮಾಡಲಿದ್ದಾರೆ.

  Hariprriya to Play Female Lead in Tamil Actor Sasikumars Next Movie

  ಇನ್ನು ಹರಿಪ್ರಿಯಾ ಕನ್ನಡದಲ್ಲಿ ಪೆಟ್ರೋಮ್ಯಾಕ್ಸ್, ಅಮೃತಮತಿ, ಬೆಲ್ ಬಾಟಮ್ 2, ಹ್ಯಾಪಿ ಎಂಡಿಂಗ್, ಲಗಾಮ್, ಯವರು ರಿಮೇಕ್, ಶಶಾಂಕ್ ಸಿನಿಮಾ, ಕಸ್ತೂರಿ ಬಾ ಕುರಿತು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Kannada actress Hariprriya to Play Female Lead in Tamil Actor Sasikumar's Next Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X