For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ 'ರುಸ್ತುಂ' ಅಡ್ಡದಲ್ಲಿ ಕಾಲಿವುಡ್ ಕಲಾವಿದ

  By Pavithra
  |
  ಶಿವಣ್ಣನಿಗಾಗಿ ತೆಲುಗಿನಿಂದ ಕನ್ನಡಕ್ಕೆ ಬಂದ ಖಳನಾಯಕ..!! | Filmibeat Kannada

  'ರುಸ್ತುಂ'..ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಸಿನಿಮಾ. ಸಾಹಸ ನಿರ್ದೇಶಕ ರವಿಮರ್ಮ ಆಕ್ಷನ್ ಕಟ್ ಹೇಳುತ್ತಿರುವ ಚೊಚ್ಚಲ ಚಿತ್ರ. ಫೋಟೋ ಶೂಟ್ ನಿಂದಲೇ ಸಾಕಷ್ಟು ಸುದ್ದಿ ಆಗಿದ್ದ ರುಸ್ತುಂ ಚಿತ್ರದ ಅಡ್ಡದಲ್ಲಿ ಕಾಲಿವುಡ್ ಕಲಾವಿದನ ಎಂಟ್ರಿ ಆಗಿದೆ.

  ಮೊದಲ ಹಂತದ ಚಿತ್ರೀಕರಣ ಮುಗಿಸಿರುವ 'ರುಸ್ತುಂ' ಚಿತ್ರತಂಡ ಸದ್ಯ ಎರಡನೇ ಹಂತದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.

  ಶಿವಣ್ಣ ಎದುರು ನಟಿಸೋದಕ್ಕಾಗಿ ಕಾಲಿವುಡ್ ನ ಹರೀಶ್ ಉಥಾಮನ್ ಆಗಮಿಸಿದ್ದಾರೆ. ಹರೀಶ್ ಉಥಾಮನ್ ತೆಲುಗು, ತಮಿಳು ಸೇರಿದಂತೆ ಮಲೆಯಾಳಂ ಚಿತ್ರಗಳಲ್ಲಿಯೂ ಅಭಿನಯ ಮಾಡಿದ್ದಾರೆ.

  ಮಯೂರಿ ಅವರತಾರಕ್ಕೆ ಬೆಚ್ಚಿಬಿದ್ದ ಸಂಚಾರಿ ವಿಜಯ್ ಮಯೂರಿ ಅವರತಾರಕ್ಕೆ ಬೆಚ್ಚಿಬಿದ್ದ ಸಂಚಾರಿ ವಿಜಯ್

  'ನಾ ಪೇರು ಸೂರ್ಯ ನಾ ಇಲ್ಲೂ ಇಂಡಿಯಾ' ಚಿತ್ರದಲ್ಲಿ ಹರೀಶ್ ಉಥಾಮನ್ ಅಭಿನಯ ಮಾಡಿದ್ದರು. ಸದ್ಯ 'ರುಸ್ತುಂ' ಚಿತ್ರದ ಮೂಲಕ ಹರೀಶ್ ಉಥಾಮನ್ ಕನ್ನಡದಲ್ಲಿ ತಮ್ಮ ಖಾತೆಯನ್ನು ಓಪನ್ ಮಾಡುತ್ತಿದ್ದಾರೆ. 'ರುಸ್ತುಂ' ಸಿನಿಮಾವನ್ನು ರವಿವರ್ಮ ನಿರ್ದೆಶನ ಮಾಡುತ್ತಿದ್ದು ಮಯೂರಿ ಹಾಗೂ ಶ್ರದ್ಧಾ ಶ್ರೀನಾಥ್ ಚಿತ್ರದ ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

  English summary
  Kollywood actor Harish Uthamanis acting in Kannada Rustam film .Shivaraj Kumar is acting as hero in Rustam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X