Just In
Don't Miss!
- Lifestyle
"ಭಾನುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ "
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗೆಳೆಯನಿಗಾದ ಅಪಘಾತಕ್ಕೆ ಮನನೊಂದ ಹರ್ಷಿಕಾ ಪೂಣಚ್ಚ
ಕೊಡಗಿನ ಕುವರಿ, ಕಪ್ಪು ಬಳೆಗಳ ಸುಂದರಿ ನಟಿ ಹರ್ಷಿಕಾ ಪೂಣಚ್ಚ ಬೇಸರದಲ್ಲಿದ್ದಾರೆ. ಈಗ ಆಗಿರುವಂತೆ ಮುಂದೆ ಎಂದು ಯಾರಿಗೂ ಆಗದಿರಲಿ ಎಂದು ದೇವರಲ್ಲಿ ಮನವಿ ಮಾಡುತ್ತಿದ್ದಾರೆ. ನಾವು ಈಗ ಹೇಳುತ್ತಿರುವುದು ನಟ ಭುವನ್ ಪೊನಣ್ಣ ಅವರ ಬಗ್ಗೆ. ಚಿತ್ರೀಕರಣದ ವೇಳೆ ಅಪಘಾತಕ್ಕೆ ಒಳಗಾಗಿ ಭುವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ನಟಿ ಹರ್ಷಿಕಾ ಬೇಸರವಾಗಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಭುವನ್ 'ರಾಂಧವ' ಎನ್ನುವ ಚಿತ್ರದಲ್ಲಿ ನಾಯಕನಾಗಿ ಅಭಿನಯ ಮಾಡುತ್ತಿದ್ದರು. ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಇಂದಿನಿಂದ ಎರಡನೇ ಹಂತದ ಶೂಟಿಂಗ್ ನಲ್ಲಿ ಭಾಗಿ ಆಗಬೇಕಿತ್ತು.
ಚಿತ್ರೀಕರಣ ವೇಳೆ ಅವಘಡ: ನಟ ಭುವನ್ ಮುಖಕ್ಕೆ ಗಾಯ
ಎರಡನೇ ಹಂತದ ಚಿತ್ರೀಕರಣಕ್ಕಾಗಿ ಭುವನ್ ಗೆಟಪ್ ಸಂಪೂರ್ಣ ಬದಲಾಗಬೇಕಿತ್ತು. ಅದಕ್ಕೂ ಮುನ್ನ ಒಂದು ಸೀನ್ ಮತ್ತೆ ಚಿತ್ರೀಕರಣ ಮಾಡೋಣ ಎಂದು ಖುದ್ದು ಭುವನ್ ಅವರೇ ಮನವಿ ಮಾಡಿದ್ದಾರೆ. ನಿರ್ದೇಶಕರು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಆದರೆ ಅಲ್ಲಿ ನಡೆದದ್ದೇ ಬೇರೆ. ಜಾರಿ ಬಿದ್ದ ಭುವನ್ ಮೂಗಿನಲ್ಲಿ ರಕ್ತ ಬಂದಿದ್ದೇಕೆ? ಭುವನ್ ಆಸ್ಪತ್ರೆಯಲ್ಲಿರುವ ಬಗ್ಗೆ ಗೆಳತಿ ಹರ್ಷಿಕಾ ಹೇಳಿದ್ದೇನು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಚಿತ್ರೀಕರಣದ ವೇಳೆ ಭುವನ್ ಗೆ ಗಾಯ
ಭುವನ್ ಪೊನಣ್ಣ ಅಭಿನಯದ 'ರಾಂಧವ' ಸಿನಿಮಾದ ಚಿತ್ರೀಕರಣದ ವೇಳೆ ನಟ ಭುವನ್ ಅವರ ಬೆನ್ನು ಹಾಗೂ ಮೂಗಿಗೆ ಗಾಯವಾಗಿದೆ. ಸದ್ಯ ಭುವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಜೀವಕ್ಕೆ ಯಾವುದೇ ರೀತಿಯಲ್ಲಿ ಅಪಾಯವಿಲ್ಲ ಎಂದಿದ್ದಾರೆ ಡಾಕ್ಟರ್.

ಬೇಸರ ವ್ಯಕ್ತ ಪಡಿಸಿದ ಹರ್ಷಿಕಾ
ಭುವನ್ ಅವರಿಗೆ ಚಿತ್ರೀಕರಣದ ವೇಳೆ ಪೆಟ್ಟಾಗಿರುವುದನ್ನು ತಿಳಿದ ನಟಿ ಹರ್ಷಿಕಾ ಪೂಣಚ್ಚ ಬೇಸರ ವ್ಯಕ್ತ ಪಡಿಸಿದ್ದಾರೆ ತಮ್ಮ ಫೇಸ್ ಬುಕ್ ನಲ್ಲಿ "ಮುಂಜಾಗ್ರತೆ ವಹಿಸಿಕೊಂಡು ಚಿತ್ರೀಕರಣದಲ್ಲಿ ಭಾಗಿ ಆಗಿ, ಈ ವಿಡಿಯೋ ನೋಡುತ್ತಿದ್ದರೆ ಭಯವಾಗುತ್ತಿದೆ. ಭುವನ್ ಅವರಿಗೆ ತುಂಬಾ ಪೆಟ್ಟಾಗಿದೆ". ಎಂದು ಸ್ಟೇಟಸ್ ಹಾಕಿದ್ದಾರೆ.

ಹಳೆ ನೋವಿಗೆ ಮತ್ತೆ ಪೆಟ್ಟು
ರಾಂಧವ ಸಿನಿಮಾದ ಚಿತ್ರೀಕರಣದ ವೇಳೆ ಭುವನ್ ಅವರ ಬೆನ್ನಿನ ಮೂಳೆಗೆ ಪೆಟ್ಟಾಗಿದೆ. ಕೆಲವು ದಿನಗಳು ವಿಶ್ರಾಂತಿ ಪಡೆದುಕೊಳ್ಳಲು ವೈದ್ಯರು ತಿಳಿಸಿದ್ದಾರೆ. ಇದೇ ವೇಳೆ ಮೂಗಿಗೂ ಗಾಯವಾಗಿದೆ.

ಹರ್ಷಿಕಾ -ಭುವನ್ ಸ್ನೇಹಿತರು
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನಣ್ಣ ಸಾಕಷ್ಟು ವರ್ಷಗಳಿಂದ ಗೆಳೆಯರು ಸಿನಿಮಾರಂಗಕ್ಕೂ ಬರುವ ಮುಂಚಿನಿಂದಲೂ ಇಬ್ಬರಿಗೂ ಪರಿಚವಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಇಬ್ಬರು ಒಂದೇ ಊರಿನವರು.

ರಾಂಧವ ಚಿತ್ರದಲ್ಲಿ ನಾಯಕನಾಗಿ ಅಭಿನಯ
ಕಿರುತೆರೆ ಹಾಗೂ ಮಾಡೆಲಿಂಗ್ ನಲ್ಲಿ ಪ್ರಖ್ಯಾತಿ ಪಡೆದಿರುವ ಭುವನ್ ಪೊನಣ್ಣ ಅಭಿನಯದ ಹೊಸ ಸಿನಿಮಾ ರಾಂಧವ. ಚಿತ್ರವನ್ನ ನವ ನಿರ್ದೇಶಕ ಸುನೀಲ್ ಆಚಾರ್ಯ ಡೈರೆಕ್ಟ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಭುವನ್ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.