For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ ನಿಧನದ ಸುದ್ದಿ ಹರ್ಷಿಕಾಗೆ ಈಗ ತಿಳಿಯಿತಂತೆ.! ಹಾಗಾದ್ರೆ, 'ಆ' ಟ್ವೀಟ್.?

  |
  Ambareesh : ಅಂಬರೀಶ್ ಸಾವಿನ ಬಗ್ಗೆ ಹರ್ಷಿಕಾ ಪೂಣಚ್ಚ ಮಾಡಿರುವ ಟ್ವೀಟ್ ಗೆ ಫ್ಯಾನ್ಸ್ ಗರಂ | FILMIBEAT KANNADA

  ರೆಬೆಲ್ ಸ್ಟಾರ್.. ಮಂಡ್ಯದ ಗಂಡು.. ಕನ್ವರ್ ಲಾಲ್ ಅಂಬರೀಶ್ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಕಾರಣ ನವೆಂಬರ್ 24 ರಂದು ಅಂಬರೀಶ್ ವಿಧಿವಶರಾದರು.

  ಅಂಬರೀಶ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಗಣ್ಯರು ಆಸ್ಪತ್ರೆಯತ್ತ ಧಾವಿಸಿದರು. ಚಿತ್ರರಂಗ ಮತ್ತು ರಾಜಕೀಯ ರಂಗದ ದಿಗ್ಗಜರು ಅಂಬರೀಶ್ ಗೆ ಅಂತಿಮ ನಮನ ಸಲ್ಲಿಸಿದರು.

  ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಕೂಡ ಇತ್ತು. 'ಕಲಿಯುಗದ ಕರ್ಣ'ನನ್ನು ಕಳೆದುಕೊಂಡು ಇಡೀ ಕರುನಾಡು ಕಂಬನಿ ಮಿಡಿದಿತ್ತು. ಹೀಗಿದ್ದರೂ, ಅಂಬರೀಶ್ ಅವರ ನಿಧನದ ಸುದ್ದಿ ಹರ್ಷಿಕಾ ಪೂಣಚ್ಚಗೆ ಇವತ್ತು ತಿಳಿದಿದ್ಯಂತೆ.! ಮುಂದೆ ಓದಿರಿ...

  ಹರ್ಷಿಕಾ ಮಾಡಿರುವ ಟ್ವೀಟ್ ನೋಡಿ...

  ಹರ್ಷಿಕಾ ಮಾಡಿರುವ ಟ್ವೀಟ್ ನೋಡಿ...

  ''ಇಂದು ನನ್ನ ಅತ್ಯಂತ ದುಃಖದ ದಿನ. ನಾನು ಒಂದು ಶೂಟ್ ಗಾಗಿ 23 ರಿಂದ ನೆಟ್ ವರ್ಕ್ ಇಲ್ಲದ ಪ್ರದೇಶದಲ್ಲಿ ಇರಬೇಕಾಯಿತು. ನನ್ನ ನೆಚ್ಚಿನ ಅಂಬರೀಶ್ ಅಂಕಲ್ ನಿಧನದ ಸುದ್ದಿ ನನಗೆ ಈಗ ತಿಳಿಯಿತು. ನಾನು ಎಂಥ ದುರಾದೃಷ್ಟವಂತೆ, ಅವರನ್ನು ಕೊನೆಯದಾಗಿ ನೋಡುವ ಅವಕಾಶವೂ ನನಗೆ ಸಿಕ್ಕಿಲ್ಲ. ಮಿಸ್ ಯೂ ಅಂಬರೀಶ್ ಅಂಕಲ್'' ಅಂತ ಹರ್ಷಿಕಾ ಪೂಣಚ್ಚ ಇಂದು ಟ್ವೀಟ್ ಮಾಡಿದ್ದಾರೆ.

  ಅಂಬಿ ನಿಧನದ ನಂತರ ಸುಮಲತಾ ಮೊದಲ ಮಾತು!

  ಹರ್ಷಿಕಾ ಟ್ವೀಟ್ ಸುತ್ತ ಗೊಂದಲ

  ಹರ್ಷಿಕಾ ಟ್ವೀಟ್ ಸುತ್ತ ಗೊಂದಲ

  ''ನವೆಂಬರ್ 23 ರಿಂದ ನೆಟ್ ವರ್ಕ್ ಇಲ್ಲದ ಪ್ರದೇಶದಲ್ಲಿ ಇರುವೆ'' ಅಂತ ಇಂದು ಹೇಳಿಕೊಂಡಿರುವ ಹರ್ಷಿಕಾ ಪೂಣಚ್ಚ ಟ್ವಿಟ್ಟರ್ ಅಕೌಂಟ್ ನಿಂದ ನವೆಂಬರ್ 24 ರಂದು ಒಂದು ಟ್ವೀಟ್ ಹೊರಬಿದ್ದಿದೆ. ಅಂಬರೀಶ್ ನಿಧನಕ್ಕೆ ಹರ್ಷಿಕಾ ಸಂತಾಪ ಸೂಚಿಸಿರುವ ಟ್ವೀಟ್ ಅದು.

  ದುಃಖದಲ್ಲೂ ಅಮ್ಮನ ಮುಖದಲ್ಲಿ ನಗು ತರಿಸಿದ ಅಂಬಿ ಪುತ್ರ ಅಭಿಷೇಕ್

  ನವೆಂಬರ್ 24 ರಂದು ಹರ್ಷಿಕಾ ಮಾಡಿದ್ದ ಟ್ವೀಟ್

  ನವೆಂಬರ್ 24 ರಂದು ಹರ್ಷಿಕಾ ಮಾಡಿದ್ದ ಟ್ವೀಟ್

  ''ಅಂಬಿ ಅಂಕಲ್ ಬಗ್ಗೆ ತಿಳಿದುಕೊಂಡಿರುವ ನಾನೇ ಧನ್ಯ. ನಿಮ್ಮನ್ನ ನಾನು ಸದಾ ಮಿಸ್ ಮಾಡಿಕೊಳ್ಳುವೆ'' ಎಂದು ನವೆಂಬರ್ 24 ರಂದು ಹರ್ಷಿಕಾ ಪೂಣಚ್ಚ ಟ್ವೀಟ್ ಮಾಡಿದ್ದರು. ಹಾಗಾದರೆ, ಅಂಬಿ ನಿಧನದ ಸುದ್ದಿ ಇಂದು ತಿಳಿಯಿತು ಅಂತ ಹರ್ಷಿಕಾ ಈಗ ಟ್ವೀಟ್ ಮಾಡಿರೋದು ಯಾಕೆ.?

  ಅಂಬಿಗೆ ಇದ್ದ ಕೊನೆಯ ಆಸೆ ಬಗ್ಗೆ ಹೇಳಿಕೊಂಡ ಸುಮಲತಾ

  ಟ್ವೀಟಿಗರು ಗರಂ

  ಟ್ವೀಟಿಗರು ಗರಂ

  ಹರ್ಷಿಕಾ ರವರ ಈ ಎರಡೆರಡು ಟ್ವೀಟ್ ಗಳನ್ನು ನೋಡಿ ಟ್ವೀಟಿಗರು ಗರಂ ಆಗಿದ್ದಾರೆ. ಅಂಬಿಗೆ ಅಂತಿಮ ನಮನ ಸಲ್ಲಿಸಲು ಬಾರದ ಹರ್ಷಿಕಾ ಪೂಣಚ್ಚಗೆ ಟ್ವೀಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

  ನಾಚಿಕೆ ಆಗಲ್ವಾ.?

  ನಾಚಿಕೆ ಆಗಲ್ವಾ.?

  ''ಹರ್ಷಿಕಾ ಪಬ್ಲಿಸಿಟಿ ತೆಗೆದುಕೊಳ್ಳಲು ಟ್ರೈ ಮಾಡುತ್ತಿದ್ದಾರೆ'' ಅಂತ ಟ್ವೀಟಿಗರು ಬೆಂಡೆತ್ತುತ್ತಿದ್ದಾರೆ. ನೆಟ್ ವರ್ಕ್ ಇಲ್ಲದ ಜಾಗ ಅಂದ್ರೆ, ಹಾಲಿವುಡ್ ಮೂವಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ರಾ ಅಂತಲೂ ಅಭಿಮಾನಿಗಳು ಪ್ರಶ್ನೆಗಳ ಬಾಣ ಸುರಿಸುತ್ತಿದ್ದಾರೆ.

  English summary
  Kannada Actress Harshika Poonacha tweets about Ambareesh's death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X