»   » ಶಿವಣ್ಣನ ಮನಮೋಹಕ ಸಿನಿಮಾಗಳ ಲಿಸ್ಟ್ ನೋಡಿದ್ದೀರಾ?

ಶಿವಣ್ಣನ ಮನಮೋಹಕ ಸಿನಿಮಾಗಳ ಲಿಸ್ಟ್ ನೋಡಿದ್ದೀರಾ?

Posted By: ಜೀವನರಸಿಕ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಅಬ್ಬಬ್ಬಾ.. ಈ ವಿಷಯ ಓದಿ ನೀವೊಂದ್ಸಾರಿ ಮೂಗಿನ ಮೇಲೆ ಬೆರಳಿಡುವುದು ಗ್ಯಾರಂಟಿ. ಒಂದೇ ವರ್ಷದಲ್ಲಿ ಅತ್ಯಂತ ಹೆಚ್ಚು ಸಿನಿಮಾಗಳಲ್ಲಿ ತೆರೆಗೆ ಬಂದ ದಾಖಲೆ ಇರೋದು ಡಾ.ರಾಜ್ ಹೆಸರಲ್ಲಿ. ಡಾ. ರಾಜ್ ಒಂದೇ ವರ್ಷದಲ್ಲಿ 8 ಸಿನಿಮಾಗಳಲ್ಲಿ ತೆರೆಗೆ ಬಂದು ಅಷ್ಟೂ ಸಿನಿಮಾಗಳಲ್ಲಿ ಗೆದ್ದು ಮೆರೆದಾಡಿದ ನಾಯಕ.

  ಅಂತಹಾ ಅಣ್ಣಾವ್ರ ಜ್ಯೇಷ್ಠ ಪುತ್ರ ಶಿವಣ್ಣ ತಂದೆಯ ಹಾದಿಯಲ್ಲೇ ಮುಂದುವರೆದಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಗೆದ್ದರೂ ಸೋತ್ರೂ ಸದಾ ಕೈಯ್ಯಲ್ಲಿ ಐದಾರು ಸಿನಿಮಾಗಳನ್ನ ಇಟ್ಟುಕೊಂಡೇ ಇರೋ ಒನ್ ಅಂಡ್ ಓನ್ಲೀ ನಟ ಅಂದ್ರೆ ಅದು ಶಿವಣ್ಣ ಮಾತ್ರ. ಮತ್ತೆ ಯಾರಾದ್ರೂ ಇದ್ದಾರ ಈ ಲಿಸ್ಟಿನಲ್ಲಿ?

  ಚಿತ್ರಜೀವನದಲ್ಲಿ ಮೂರು ದಶಕಗಳಿಗೆ ಹತ್ತಿರವಾಗ್ತಿರೋ ಹ್ಯಾಟ್ರಿಕ್ ಹೀರೋ ಸಿನಿಮಾ ಪ್ರೀತಿಯ ಬಗ್ಗೆ ಕನ್ನಡ ಸಿನಿಪ್ರೇಮಿಗಳಿಗೆ ಚೆನ್ನಾಗಿ ಗೊತ್ತಿದೆ. ಜುಲೈ 12ಕ್ಕೆ 54ಕ್ಕೆ ಕಾಲಿಡೋ ರಸಿಕರ ಯುವರಾಜನಿಗೆ ವಯಸ್ಸಾಗ್ತಾ ಇದ್ರೂ ಚಿತ್ರಗಳು ಮಾತ್ರ ದೊಡ್ಡ ಸಂಖ್ಯೆಯಲ್ಲಿವೆ. ಹುಟ್ಟುಹಬ್ಬದ ಶುಭಾಶಯಗಳು ಶಿವರಾಜ್ ಕುಮಾರ್. ಯಾವೆಲ್ಲ ಚಿತ್ರಗಳು ಹ್ಯಾಟ್ರಿಕ್ ಹೀರೋ ತೆಕ್ಕೆಯಲ್ಲಿವೆ ಅಂತ ನೋಡೋಕೆ ಈ ಸ್ಲೈಡ್ ತಿರುಗಿಸ್ತಾ ಹೋಗಿ.. [ಶಿವಣ್ಣನ ಬರ್ತಡೇಗೆ ಒಂದಕ್ಕಿಂತ ಒಂದು ವಿಶೇಷ ಕಾರ್ಯಕ್ರಮ]

  ಮತ್ತೆ ಶುರು ಸುನಿಯ ಮನಮೋಹಕ

  ಶಿವಣ್ಣ ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ ನಿರ್ದೇಶಕ ಸುನಿಯ ಕಥೆಯನ್ನ ಒಪ್ಪಿ 'ಮನಮೋಹಕ' ಅನ್ನೋ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ರು. ಫೋಟೋಶೂಟ್ ಕೂಡ ಮುಗಿಸಿದ್ದ 'ಮನಮೋಹಕ'. ಆದ್ರೆ ಈ ನಡುವೆ ಶುರುವಾಗೋದು ಡೌಟು ಅಂತ ಸುದ್ದಿಯಾಗಿತ್ತು. ಆದ್ರೆ ಈಗ 'ಮನಮೋಹಕ' ಶುರುವಾಗುವ ಮನಮೋಹಕ ಸೂಚನೆ ಕೊಟ್ಟಿದ್ದಾರೆ ಸುನಿ.

  ಶ್ರೀಕಂಠ ಮುಂದಿನ ವರ್ಷ ಶುರು

  'ಶ್ರಾವಣಿ ಸುಬ್ರಹ್ಮಣ್ಯ' ಖ್ಯಾತಿಯ ನಿರ್ದೇಶಕ ಮಂಜು ಸ್ವರಾಜ್ ನಿರ್ದೇಶನದ ಚಿತ್ರ 'ಶ್ರೀಕಂಠ'. ಸದ್ಯ 'ಶ್ರೀಕಂಠ' ಚಿತ್ರದ ಕಥೆ ಒಪ್ಪಿರೋ ಶಿವಣ್ಣ ಚಿತ್ರವನ್ನ ಮುಂದಿನ ವರ್ಷ ಶುರುಮಾಡೋ ಸಾಧ್ಯತೆಯಿದೆ. ಇದ್ರ ನಡುವೆ ಮಂಜು ಸ್ವರಾಜ್ ಕೂಡ ಬೇರೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  ಬಂಗಾರ ಸನ್ ಆಫ್ ಬಂಗಾರದ ಮನುಷ್ಯ

  ಬಂಗಾರ ಅನ್ನೋ ಟೈಟಲ್ನಲ್ಲಿ ಮತ್ತೊಂದು ಸಿನಿಮಾ ಈ ವರ್ಷವೇ ಶುರುವಾಗಲಿದೆ. ಚಿತ್ರದ ಟ್ಯಾಗ್ ಲೈನ್ ಮತ್ತು ಟೈಟಲ್ಲೇ ಚಿತ್ರದ ಪವರ್. 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಅನ್ನೋ ಟೈಟಲ್ ಇದ್ದ ಮೇಲೆ ಚಿತ್ರ ದೊಡ್ಡ ಪ್ರಚಾರ ಪಡ್ಕೊಳ್ಳೋದ್ರಲ್ಲಿ ಅನುಮಾನವಿಲ್ಲ. 'ಖುಷಿ ಖುಷಿಯಾಗಿ' ಖ್ಯಾತಿಯ ಯೋಗಿ ಜಿ ರಾಜ್ ನಿರ್ದೇಶನದ ಚಿತ್ರ ಇದು.

  ಮೈ ನೇಮ್ ಈಸ್ ಆಂಜಿ

  ಹ್ಯಾಟ್ರಿಕ್ ಹೀರೋ ಕೈಯಿಂದ ಮತ್ತೊಂದು ಹ್ಯಾಟ್ರಿಕ್ ಹೊಡೆಸೋಕೆ ಎ ಹರ್ಷ ಶಿವಣ್ಣ ಕಾಂಬಿನೇಷನ್ ಮತ್ತೆ ಒಂದಾಗಲಿರೋ ಚಿತ್ರ 'ಮೈ ನೇಮ್ ಈಸ್ ಆಂಜಿ'. ಈ ಚಿತ್ರಕ್ಕೆ ಈಗಿಂದಲೇ ವಿಶೇಷ ತಯಾರಿಯಲ್ಲಿದ್ದಾರಂತೆ ನಿರ್ದೇಶಕ ಹರ್ಷ.

  ಶಿವಣ್ಣನ ವಿಭಿನ್ನ ಲುಕ್ನ ಖದರ್

  ಶಿವಣ್ಣನ ಲುಕ್ನೇ ವಿಭಿನ್ನವಾಗಿ ಬಿಂಬಿಸ್ತಾ ಇರೋ ಚಿತ್ರ 'ಖದರ್'. ಪವರ್ಫುಲ್ ಆಕ್ಷನ್ ಪಾತ್ರವನ್ನ ಈ ಸಿನಿಮಾದಲ್ಲಿ ಶಿವಣ್ಣ ಮಾಡಲಿದ್ದಾರೆ. ಕುಮಾರ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ಅಭಿನಯಿಸೋಕೆ ಒಪ್ಪಿದ್ದಾರೆ.

  ಶಿವಲಿಂಗ ಟೀಸರ್ ಹುಟ್ಟಹಬ್ಬದಂದು ಬರಲಿದೆ

  ಖದರ್ ನಿರ್ಮಾಪಕ ಸುರೇಶ್ ನಿರ್ಮಾಣದ ಮತ್ತೊಂದು ಚಿತ್ರ 'ಶಿವಲಿಂಗ'. ಈಗಾಗ್ಲೇ ಚಿತ್ರೀಕರಣ ಮುಗಿಸಿದ್ದು ರಿಲೀಸ್ಗೆ ತಯಾರಾಗ್ತಿದೆ. ಚಿತ್ರದ ಟೀಸರ್ ಟ್ರೈಲರ್ ಬರ್ತಡೇಗೆ ಹೊರಬರಲಿದೆ.

  ಸಂತೆಯಲ್ಲಿ ನಿಂತ ಕಬೀರ

  ಶಿವಣ್ಣ ಸಿನಿಜೀವನಕ್ಕೆ ಮತ್ತೊಂದು ಇಮೇಜ್ ಕೊಡೋ ಚಿತ್ರ 'ಸಂತೆಯಲ್ಲಿ ನಿಂತ ಕಬೀರ'. ಈ ಹಿಂದೆ 'ಕಬಡ್ಡಿ' ಅನ್ನೋ ಚಿತ್ರ ಮಾಡಿ ರಾಜ್ಯಪ್ರಶಸ್ತಿ ಪಡ್ಕೊಂಡಿದ್ದ ಚಿತ್ರದ ನಿರ್ದೇಶಕರು ಅದ್ಭುತ ಕಥೆ ಹೆಣೆದಿದ್ದು ಕಬೀರ ಚಿತ್ರದ 50% ಚಿತ್ರೀಕರಣ ಮುಗಿದಿದೆ.

  ದೇಶಾದ್ಯಂತ ಸುದ್ದಿ ಮಾಡಿರುವ ಕಿಲ್ಲಿಂಗ್ ವೀರಪ್ಪನ್

  'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಬಗ್ಗೆ ಹೇಳ್ಬೇಕಾ? ಆರ್ಜಿವಿ ನಿರ್ದೇಶನದ ಚಿತ್ರ ದೇಶಾದ್ಯಂತ ಸುದ್ದಿ ಮಾಡಿದ್ದು ಚಿತ್ರದ ಚಿತ್ರೀಕರಣದಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ. ಚಿತ್ರ ಅಕ್ಟೋಬರ್ನಲ್ಲಿ ಹೊರಬರಲಿದೆ.

  ಬಂಗಾರದ ವಂಶ ಬರುತ್ತಾ..

  ಶಿವಣ್ಣ ರಾಧಿಕಾ ಕುಮಾರಸ್ವಾಮಿ ಕಾಂಬಿನೇಷನ್ನ ಅಣ್ಣ ತಂಗಿ ಸೆಂಟಿಮೆಂಟ್ನ ಸಿನಿಮಾ ಟೈಟಲ್ 'ಬಂಗಾರದ ವಂಶ'. ಸಿನಿಮಾ ನಿರ್ದೇಶನಕ್ಕೆ ತಯಾರಾಗ್ತಿರೋದು ನೂರು ಸಿನಿಮಾಗಳ ನಿರ್ದೇಶನದ ಸರದಾರನಾಗಲಿರೋ ಓಂ ಸಾಯಿಪ್ರಕಾಶ್. ಆದ್ರೆ ಈ ಚಿತ್ರ ಯಾವಾಗ ಶುರುವಾಗುತ್ತೋ ಗೊತ್ತಿಲ್ಲ.

  ಶಿವಣ್ಣ ಅಂದ್ರೆ ಉತ್ಸಾಹ

  ಇದಕ್ಕೆ ಅಲ್ವಾ ಹೇಳೋದು ಶಿವರಾಜ್ಕುಮಾರ್ ಅಂದ್ರೆ ಎನರ್ಜಿ ಅಂತ. ಇಷ್ಟು ಸಿನಿಮಾಗಳು ಕನ್ನಡದ ಯಾವ ಸ್ಟಾರ್ನಟರ ಬಳಿಯೂ ಇಲ್ಲ. ಆದ್ರೆ 53 ಕಳೆದ್ರೂ ಒಂದು ವರ್ಷ 4-5 ಸಿನಿಮಾಗಳಲ್ಲಿ ಬ್ಯುಸಿಯಾಗೋ ತಾಕತ್ತು ಇರೋದು ಶಿವಣ್ಣನಿಗೆ ಮಾತ್ರ ಅನ್ಸುತ್ತೆ.. ಆಲ್ ದಿ ಬಿಸೆಟ್ ಶಿವಣ್ಣ. ಹ್ಯಾಪಿ ಬರ್ತಡೇ ಟು ಯು.

   English summary
   Hats off to Hat-trick hero Shiva Rajkumar. Even at 54 darling of Kannada movie lovers Shivanna doing 4-5 movies per year. His father Dr. Rajkumar is the only actor to have acted in so many movies and all were super hits. Wish you all the best and happy birthday Shiva Rajkumar.

   Kannada Photos

   Go to : More Photos

   ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more