For Quick Alerts
  ALLOW NOTIFICATIONS  
  For Daily Alerts

  ನಟಿ ಹರಿಪ್ರಿಯಾ ಮಾಡಿರುವ ಈ ಕೆಲಸಕ್ಕೆ ಭೇಷ್ ಎನ್ನಲೇಬೇಕು.!

  By Harshitha
  |
  ಶಭಾಷ್..!! ಹರಿಪ್ರಿಯಾ ಮಾಡಿರುವ ಈ ಕೆಲಸಕ್ಕೆ ಎಷ್ಟು ಹೊಗಳಿದ್ರು ಕಡಿಮೆ..!! | FIlmibeat Kannada

  ರಕ್ತದಾನ ಮಾಡಿ ಇತರರ ಪ್ರಾಣ ಉಳಿಸಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತಿದೆ.

  ಇಂದು ಜೂನ್ 14, ವಿಶ್ವ ರಕ್ತದಾನಿಗಳ ದಿನ. ಈ ದಿನ ನಟಿ ಹರಿಪ್ರಿಯಾ ರಕ್ತ ನೀಡಿ ಮೂರು ಜೀವ ಉಳಿಸಿದ್ದಾರೆ.

  ತೆರೆಮೇಲೆ ಹೀರೋಯಿನ್ ಆಗಿ ಪ್ರೇಕ್ಷಕರಿಂದ ಶಿಳ್ಳೆ-ಚಪ್ಪಾಳೆ ಗಿಟ್ಟಿಸುವ ನಟಿ ಹರಿಪ್ರಿಯಾ ಇಂದು ರಕ್ತದಾನ ಮಾಡಿ ಅಕ್ಷರಶಃ ನಮ್ಮೆಲ್ಲರಿಗೂ ಸ್ಫೂರ್ತಿ ತುಂಬಿದ್ದಾರೆ.

  ರಕ್ತಕ್ಕೆ ಯಾವುದೇ ಜಾತಿಯಿಲ್ಲ, ರಕ್ತದಾನ ಮಾಡಿ, ಜೀವ ಉಳಿಸಿ

  ತುರ್ತಾಗಿ ರಕ್ತ ಬೇಕಾಗಿದೆ ಎಂದು ಇಂದು ಬೆಳಗ್ಗೆ ಒಂದು ಟ್ವೀಟ್ ನೋಡಿದ ನಟಿ ಹರಿಪ್ರಿಯಾ, ಸೀದಾ ರಕ್ತದಾನ ಮಾಡಲು ಆಸ್ಪತ್ರೆಗೆ ತೆರಳಿದ್ದಾರೆ. ಮೊದಲ ಬಾರಿಗೆ ರಕ್ತ ನೀಡುತ್ತಿರುವುದಕ್ಕೆ ಗಾಬರಿ ಆಗಿದ್ದರೂ, ಹೆರಿಗೆ ವೇಳೆ ಅತಿಯಾದ ರಕ್ತಸ್ರಾವ ಉಂಟಾದ ಮಹಿಳೆಗೆ ರಕ್ತ ನೀಡಿ ಆಕೆಯ ಜೀವ ಉಳಿಸಿದ್ದಾರೆ ನಟಿ ಹರಿಪ್ರಿಯಾ.

  ಸರಿಯಾದ ಸಮಯಕ್ಕೆ ನಟಿ ಹರಿಪ್ರಿಯಾ ರಕ್ತ ನೀಡಿದ್ರಿಂದಾಗಿ, ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಷ್ಟೇ ಅಲ್ಲದೆ, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

  ಮೂರು ಜೀವ ಉಳಿಸಿದ ಸಂತಸದಲ್ಲಿರುವ ನಟಿ ಹರಿಪ್ರಿಯಾ, 'ರಕ್ತದಾನ ಮಾಡಿ ಜೀವ ಉಳಿಸಿ' ಎಂದು ಇನ್ಸ್ಟಾಗ್ರಾಮ್ ಮೂಲಕ ಎಲ್ಲರನ್ನೂ ಕೇಳಿಕೊಂಡಿದ್ದಾರೆ. ನಟಿ ಹರಿಪ್ರಿಯಾ ರವರ ಈ ಕಾರ್ಯಕ್ಕೆ ಭೇಷ್ ಎನ್ನಲೇಬೇಕು.! ಅಲ್ಲವೇ.?

  English summary
  Hats off to Kannada Actress Haripriya for donating blood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X