»   » ಕೆಸಿಎನ್ ಮೋಹನ್ ಮಗಳಿಗೂ, ಎಚ್ಡಿಕೆ ಮಗನಿಗೂ ಡುಂಡುಂಡುಂ

ಕೆಸಿಎನ್ ಮೋಹನ್ ಮಗಳಿಗೂ, ಎಚ್ಡಿಕೆ ಮಗನಿಗೂ ಡುಂಡುಂಡುಂ

Posted By:
Subscribe to Filmibeat Kannada

ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ, ದಾಂಪತ್ಯ ಜೀವನಕ್ಕೂ ಕಾಲಿಡುತ್ತಿದ್ದಾರೆ. ಮೇ 20ರ ಬುಧವಾರ ನಿಖಿಲ್ ಗೌಡ ನಿಶ್ಚಿತಾರ್ಥ ಸ್ವಾತಿ ಜೊತೆ ಬೆಂಗಳೂರಿನಲ್ಲಿ ಸರಳವಾಗಿ ನಡೆದಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ನಿಖಿಲ್ ಗೌಡ ವಿವಾಹ ಚಿತ್ರ ನಿರ್ಮಾಪಕ ಕೆ.ಸಿ.ಎನ್.ಮೋಹನ್ ಅವರ ಪುತ್ರಿ ಸ್ವಾತಿ ಜೊತೆ ನಡೆಯಲಿದೆ. ಬುಧವಾರ ಸ್ವಾತಿ ಅವರ ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ಎರಡೂ ಕುಟುಂಬದವರ ಸಮ್ಮುಖದಲ್ಲಿ ನಡೆಸಿದೆ.

Nikhil Gowda

ಜೈನ್ ಕಾಲೇಜಿನಲ್ಲಿ ಓದುವಾಗ ನಿಖಿಲ್ ಗೌಡ ಮತ್ತು ಸ್ವಾತಿ ಪರಸ್ಪರ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ವಿವಾಹದ ತನಕ ಬಂದು ನಿಂತಿದ್ದು, ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ನಿಶ್ಚಿತಾರ್ಥ ನಡೆದಿದೆ.

ಒಂದುಕಡೆ ಈ ವರ್ಷ ನಿಖಿಲ್ ಗೌಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರ ನಾಯಕರಾಗಿರುವ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ಮತ್ತೊಂದೆಡೆ ಮದುವೆಗೆ ಸಿದ್ಧರಾಗುತ್ತಿದ್ದಾರೆ. 'ಮದುವೆ ಸದ್ಯಕಿಲ್ಲ, ಮೊದಲ ಚಿತ್ರ ಮುಗಿದ ಮೇಲೆ ಮದುವೆಯಾಗುತ್ತೇನೆ, ಇದಕ್ಕೆ ಸ್ವಾತಿಯ ಸಮ್ಮತಿಯೂ ಇದೆ' ಎಂದು ನಿಖಿಲ್ ಗೌಡ ಹೇಳಿದ್ದಾರೆ.

Swathi Gowda

ಅಂದಹಾಗೆ ಸರಳವಾಗಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಸದಸ್ಯರು ಬಿಟ್ಟು ಬೇರೆಯಾರೂ ಭಾಗವಹಿಸಿರಲಿಲ್ಲ. ಎಚ್.ಡಿ ರೇವಣ್ಣ, ಎಚ್.ಡಿ.ಬಾಲಕೃಷ್ಣ, ಸೇರಿದಂತೆ ಗೌಡರ ಕುಟುಂಬದ ಎಲ್ಲಾ ಸದಸ್ಯರು ನಿಶ್ಚಿತಾರ್ಥಕ್ಕೆ ಸಾಕ್ಷಿಯಾಗಿದ್ದರು.

English summary
Former CM H.D.Kumaraswamy son Nikhil Gowda got engaged to Swathi daughter of film producer K.C. N.Mohan. Engagement ceremony was held at K.C. N.Mohan residence on Wednesday, May 20th evening.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada