For Quick Alerts
  ALLOW NOTIFICATIONS  
  For Daily Alerts

  ನಿಖಿಲ್ ಕುಮಾರಸ್ವಾಮಿ ಮದುವೆಗೆ ಮಂಟಪ: ಹೇಗಿದೆ ನೋಡಿ ತಯಾರಿ

  |

  ನಿಖಿಲ್ ಕುಮಾರಸ್ವಾಮಿ-ರೇವತಿ ಮದುವೆಯನ್ನು ನಿಗದಿತ ದಿನದಂದೇ ನಿಗದಿತ ಜಾಗದಲ್ಲಿಯೇ ಆದರೆ ಅತ್ಯಂತ ಸರಳವಾಗಿ ಮಾಡಲು ಕುಮಾರಸ್ವಾಮಿ ನಿಶ್ಚಿಯಿಸಿದ್ದಾರೆ.

  ನಿನ್ನೆಯಷ್ಟೆ ಕುಮಾರಸ್ವಾಮಿ ಅವರು ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ಈ ಹಿಂದೆ ನಿಶ್ಚಯ ಮಾಡಿದಂತೆ ಏಪ್ರಿಲ್ 17 ರಂದೇ ಈ ಮೊದಲು ನಿಗದಿಯಾಗಿದ್ದ ಕೇತಿಗಾನಹಳ್ಳಿ ಫಾರ್ಮ್‌ಂ ಹೌಸ್‌ನಲ್ಲಿಯೇ ವಿವಾಹವಾಗಲಿದೆ.

  ನಾಳೆಯೇ ನಿಖಿಲ್ ಕುಮಾರಸ್ವಾಮಿ-ರೇವತಿ ಮದುವೆ ಕೇತಿಗಾನಹಳ್ಳಿಯಲ್ಲಿ ನಡೆಯಲಿದ್ದು, ಬಹುತೇಕ ತಯಾರಿ ನಡೆದಿದ್ದು, ಮಂಟಪದ ತಯಾರಿ ಅಂತಿಮ ಹಂತದಲ್ಲಿದೆ. ನಿಖಿಲ್ ಮದುವೆ ತಯಾರಿಯ ಕೆಲವು ಚಿತ್ರಗಳು ಇಲ್ಲಿವೆ.

  ಕೊರೊನಾ ಕಾರಣದಿಂದ ಸರಳ ವಿವಾಹ

  ಕೊರೊನಾ ಕಾರಣದಿಂದ ಸರಳ ವಿವಾಹ

  ಭಾರಿ ಅದ್ಧೂರಿಯಾಗಿ ಮಾಡಲಿಚ್ಚಿಸಿದ್ದ ವಿವಾಹವನ್ನು ಕೊರೊನಾ ಕಾರಣದಿಂದಾಗಿ ಈಗ ಸರಳವಾಗಿ ಮಾಡಲಾಗುತ್ತಿದೆ. ಸರಳವಾದ ಮಂಟಪ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದೆ.

  ಕುಟುಂಬದ ಕೆಲವರು ಮಾತ್ರ ಭಾಗಿ

  ಕುಟುಂಬದ ಕೆಲವರು ಮಾತ್ರ ಭಾಗಿ

  ಕುಟುಂಬದ ಕೆಲವರು ಮಾತ್ರವೇ ನೆರೆಯಲಿರುವ ಮದುವೆ ಕಾರ್ಯಕ್ರಮಕ್ಕೆ ಕೆಲವು ತಾತ್ಕಾಲಿಕ ಟೆಂಟ್‌ಗಳನ್ನು ಹಾಕಲಾಗಿದೆ. ಆಗಮಿಸುವ ಕುಟುಂಬಸ್ಥರಿಗೆ ಊಟ-ಉಪಚಾರಕ್ಕಾಗಿ, ವಿಶ್ರಾಂತಿಗಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ.

  ಮುಖ್ಯ ಕಾರ್ಯದರ್ಶಿ ಬಳಿ ಒಪ್ಪಿಗೆ ಪಡೆಯಲಾಗಿದೆ

  ಮುಖ್ಯ ಕಾರ್ಯದರ್ಶಿ ಬಳಿ ಒಪ್ಪಿಗೆ ಪಡೆಯಲಾಗಿದೆ

  ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಅವರ ಬಳಿ ಒಪ್ಪಿಗೆ ಪಡೆದುಕೊಂಡಿದ್ದು, ಕೆಲವೇ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಶಾಸ್ತ್ರೋಸ್ತ್ರಕ್ತವಾಗಿ ಕಾರ್ಯಕ್ರಮ ನಡೆಯಲಿದೆ. ರಾಮನಗರ ಜಿಲ್ಲೆಯಲ್ಲಿ ಒಂದೂ ಕೊರೊನಾ ಪಾಸಿಟಿವ್ ಪ್ರಕರಣ ಇಲ್ಲದಿರುವುದು ಧೈರ್ಯ ನೀಡಿದೆ ಎಂದು ಕುಮಾರಸ್ವಾಮಿ ನಿನ್ನೆ ಮಾಧ್ಯಮಗಳಿಗೆ ತಿಳಿಸಿದ್ದರು.

  ಯಾವುದೇ ಕಾರಣಕ್ಕೂ ಮದುವೆಗೆ ಬರಬೇಡಿ: ಎಚ್‌ಡಿಕೆ

  ಯಾವುದೇ ಕಾರಣಕ್ಕೂ ಮದುವೆಗೆ ಬರಬೇಡಿ: ಎಚ್‌ಡಿಕೆ

  ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರು ಯಾವುದೇ ಕಾರಣಕ್ಕೂ ಮದುವೆ ಕಾರ್ಯಕ್ರಮಕ್ಕೆ ಬರಬಾರದು. ಮನೆಯಲ್ಲೇ ಇದ್ದು ನವ ವಧು-ವರರಿಗೆ ಆಶೀರ್ವಾದ ಮಾಡಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಕೊರೊನಾ ಪರಿಸ್ಥಿತಿ ಹತೋಟಿಗೆ ಬಂದ ನಂತರ ಆರತಕ್ಷತೆ ಇಟ್ಟುಕೊಳ್ಳುವ ಬಗ್ಗೆ ಚಿಂತನೆ ಇದೆ ಎಂದು ಹೇಳಿದ್ದಾರೆ.

  English summary
  Nikhil Kumaraswamy-Revathi marrige function is on April 17. Here is some pictures of Marriege preperation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X