twitter
    For Quick Alerts
    ALLOW NOTIFICATIONS  
    For Daily Alerts

    ಗೌಡರ ಕುಟುಂಬ ರಾಜಕಾರಣ ಎಚ್.ಡಿ.ಕೆಗೆ ಮುಕ್ತಾಯ?

    By Harshitha
    |

    ''ಜೆ.ಡಿ.ಎಸ್ ಪಕ್ಷದಲ್ಲಿ ಎಚ್.ಡಿ.ದೇವೇಗೌಡರ ಕುಟುಂಬದ್ದೇ ದರ್ಬಾರ್. ಗೌಡರದ್ದು ಕುಟುಂಬ ರಾಜಕಾರಣ'', ಹೀಗಂತ ರಾಜಕೀಯ ರಂಗದಲ್ಲಿ ಅಪವಾದ ಇದ್ದೇ ಇದೆ. ಮೊದಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ನಂತ್ರ ಪುತ್ರರಾದ ಎಚ್.ಡಿ.ರೇವಣ್ಣ ಮತ್ತು ಎಚ್.ಡಿ.ಕುಮಾರಸ್ವಾಮಿ ಮುಂದೆ ನಿಖಿಲ್ ಗೌಡ ಅನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

    ಇದಕ್ಕೆ ಪುಷ್ಠಿ ನೀಡುವಂತೆ ಹಲವಾರು ಪ್ರತಿಭಟನೆಗಳಲ್ಲಿ, ಟೋಲ್ ಗಲಾಟೆಯಲ್ಲಿ ಖುದ್ದು ನಿಖಿಲ್ ಗೌಡ ಪಾಲ್ಗೊಂಡು ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ನೀಡಿದ್ದರು. ಆದ್ರೆ, ವಾಸ್ತವ ಇದಲ್ಲ. ನಿಖಿಲ್ ಗೌಡಗೆ ರಾಜಕೀಯಕ್ಕಿಂತ ಹೆಚ್ಚಾಗಿ ಸಿನಿಮಾ ಆಸಕ್ತಿ ಇದೆ.

    ಎಚ್.ಡಿ.ಕುಮಾರಸ್ವಾಮಿ ಅವರಿಗೂ ಚಿತ್ರರಂಗವೇ ಮೊದಲ ಆದ್ಯತೆ. ಮಗನ ಇಚ್ಛೆಗೆ ತಕ್ಕಂತೆ 'ಜಾಗ್ವಾರ್' ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ ಕುಮಾರಸ್ವಾಮಿ. ವರ್ಷಗಳ ನಂತ್ರ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿರುವ ಎಚ್.ಡಿ.ಕೆ, ಮಗ ನಿಖಿಲ್ ರನ್ನ ಯಶಸ್ವಿ ನಟ ಮಾಡುವುದಕ್ಕೆ ಪಣತೊಟ್ಟಿದ್ದಾರೆ ಹೊರತು ರಾಜಕೀಯಕ್ಕೆ ತರುವ ಯಾವುದೇ ಆಲೋಚನೆ ಕಾಣ್ತಿಲ್ಲ. [ವಯಸ್ಸಾಯ್ತು, ಇನ್ಮುಂದೆ ಚುನಾವಣೆ ಸ್ಪರ್ಧಿಸುವುದಿಲ್ಲ: ದೇವೇಗೌಡ]

    ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಆಡಿದ ಮಾತುಗಳು ಮತ್ತು ನಿಖಿಲ್ ಗೌಡ ಬಣ್ಣದ ಕನಸನ್ನ ನೋಡಿದರೆ, ಗೌಡರ ಕುಟುಂಬ ರಾಜಕಾರಣ ಎಚ್.ಡಿ.ಕೆಗೆ ಫುಲ್ ಸ್ಟಾಪ್ ಬಿದ್ದರೂ ಅಚ್ಚರಿ ಇಲ್ಲ. ಮುಂದೆ ಓದಿ.....

    ಎಚ್.ಡಿ.ಕೆ ಖುಷಿ ಪಟ್ಟ ಆ ಕ್ಷಣ

    ಎಚ್.ಡಿ.ಕೆ ಖುಷಿ ಪಟ್ಟ ಆ ಕ್ಷಣ

    ''ನನ್ನ ಮಗ ಹೀರೋ ಆಗ್ತೀನಿ ಅಂತ ಹೇಳಿದಾಗ, ನನಗೆ ಬಹಳ ಸಂತೋಷ ಆಯ್ತು'' - ಎಚ್.ಡಿ.ಕುಮಾರಸ್ವಾಮಿ

    ಹೊರಗಡೆ ಚರ್ಚೆ ಆಗುತ್ತಿರುವುದೇ ಬೇರೆ!

    ಹೊರಗಡೆ ಚರ್ಚೆ ಆಗುತ್ತಿರುವುದೇ ಬೇರೆ!

    ''ಕೆಲವರಲ್ಲಿ ಒಂದು ಭಾವನೆ ಇದೆ. ಹೊರಗಡೆ ಚರ್ಚೆ ಆಗುತ್ತಿರುವುದು ಏನಂದ್ರೆ - ಇವರು ಸಿನಿಮಾಗೆ ಮೊದಲು ಪ್ರವೇಶ ಮಾಡಿಸಿ, ಎರಡ್ಮೂರು ಚಿತ್ರಗಳನ್ನ ಮಾಡಿಸಿ, ಹೀರೋ ಆಗಿ ಬಿಲ್ಡಪ್ ಕೊಟ್ಟು, ನಂತ್ರ ಮಗನನ್ನ ರಾಜಕೀಯಕ್ಕೆ ತರಬೇಕು ಅಂತ ಸಿನಿಮಾರಂಗವನ್ನ ವೇದಿಕೆಯಾಗಿ ಮಾಡಿಕೊಂಡಿದ್ದಾರೆ ಅಂತ ಭಾವನೆ ವ್ಯಕ್ತ ಆಗ್ತಿದೆ.'' - ಎಚ್.ಡಿ.ಕುಮಾರಸ್ವಾಮಿ

     ''ರಾಜಕಾರಣಕ್ಕೆ ಕಳುಹಿಸುವ ಅನಿವಾರ್ಯತೆ ಇಲ್ಲ''

    ''ರಾಜಕಾರಣಕ್ಕೆ ಕಳುಹಿಸುವ ಅನಿವಾರ್ಯತೆ ಇಲ್ಲ''

    ''ಹೀರೋ ಆಗ್ಬೇಕು ಅನ್ನೋದು ನಿಖಿಲ್ ಆಸೆ. ಚಿತ್ರನಟನಾಗುವುದಕ್ಕೆ ಸಂಪೂರ್ಣ ತಯಾರಿ ಮಾಡಿಕೊಳ್ಳುತ್ತಿದ್ದಾನೆ. ಚಿತ್ರರಂಗದಲ್ಲಿ ಯಶಸ್ಸು ಕಾಣಬೇಕು. ಅದಕ್ಕೆ ನನ್ನ ಅನುಭವವನ್ನ ಧಾರೆ ಎರೀಬೇಕು ಅಂತ ನಾನು ತೀರ್ಮಾನ ಮಾಡಿಕೊಂಡಿದ್ದೇನೆ. ಎರಡ್ಮೂರು ಚಿತ್ರ ಮಾಡಿ ರಾಜಕಾರಣಕ್ಕೆ ಕಳುಹಿಸಬೇಕು ಅನ್ನೋ ಅನಿವಾರ್ಯತೆ ನನಗಿಲ್ಲ.'' - ಎಚ್.ಡಿ.ಕುಮಾರಸ್ವಾಮಿ [ಡಾ.ರಾಜ್ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಏನಂದ್ರು ಗೊತ್ತಾ?]

    'ರಾಜಕೀಯ ಯಾರ ಸ್ವತ್ತೂ ಅಲ್ಲ..!'

    'ರಾಜಕೀಯ ಯಾರ ಸ್ವತ್ತೂ ಅಲ್ಲ..!'

    ''ನಮ್ಮ ಕುಟುಂಬ ರಾಜಕೀಯ ನೋಡಾಗಿದೆ. Dynasty Rule, ಕುಟುಂಬ ರಾಜಕಾರಣ ಅಂತ ಎಲ್ಲರೂ ಮಾತನಾಡುತ್ತಾರೆ. ನಮಗೆ ರಾಜಕೀಯ ಸ್ವತ್ತೂ ಅಲ್ಲ, ಆಸ್ತಿಯೂ ಅಲ್ಲ. ನನ್ನ ಮಗ ಹೀರೋ ಆಗ್ತೀನಿ ಅಂದಾಗ ನನಗೆ ಬಹಳ ಸಂತೋಷ ಆಯ್ತು. ಇದು ರಾಜಕೀಯ ಪ್ರವೇಶಕ್ಕಾಗಿ ನಾವು ಬಳಸಿಕೊಳ್ಳುತ್ತಿರುವ ಸ್ಪ್ರಿಂಗ್ ಬೋರ್ಡ್ ಅನ್ನೋದು ಇಲ್ಲವೇ ಇಲ್ಲ'' - ಎಚ್.ಡಿ.ಕುಮಾರಸ್ವಾಮಿ [ಎಚ್.ಡಿ.ಕೆ ಪುತ್ರನಿಗೆ ಶಿವಣ್ಣನ ಪ್ರೀತಿಯ ಶುಭಾಶಯ]

    'ನಿಖಿಲ್ ಗೆ ಚಿತ್ರರಂಗದಲ್ಲಿ ಬೆಳೆಯುವ ಹಂಬಲ'

    'ನಿಖಿಲ್ ಗೆ ಚಿತ್ರರಂಗದಲ್ಲಿ ಬೆಳೆಯುವ ಹಂಬಲ'

    ''ನಿಖಿಲ್ ಮತ್ತು ನಾನು ಚರ್ಚೆ ಮಾಡಿದ್ದೇವೆ. ಹಲವಾರು ವರ್ಷ ಅವನು ಚಿತ್ರರಂಗದಲ್ಲಿ ಇರಬೇಕು. ನಾಡಿನ ಜನತೆ ಪ್ರೀತಿ ವಿಶ್ವಾಸ ಗಳಿಸಬೇಕು ಅಂತ ಬಯಸಿದ್ದೇನೆ. ನಮ್ಮ ಬ್ಯಾನರ್ ನಿಂದ ಉತ್ತಮ ಚಿತ್ರವನ್ನ ನಿರ್ಮಾಣ ಮಾಡಬೇಕು. ಒಂದೆರಡು ಸಿನಿಮಾಗೆ ಲಿಮಿಟ್ ಮಾಡುವ ಪ್ರಶ್ನೆಯೇ ಇಲ್ಲ.'' - ಎಚ್.ಡಿ.ಕುಮಾರಸ್ವಾಮಿ [ಡಾ.ರಾಜ್ ಕುಮಾರ್ ನನಗೆ ಸ್ಪೂರ್ತಿ - ನಿಖಿಲ್ ಗೌಡ]

    ನಿಖಿಲ್ ಹೇಳುವುದೇನು..?

    ನಿಖಿಲ್ ಹೇಳುವುದೇನು..?

    ''ಈಗ ನನ್ನ ಕಾನ್ಸನ್ಟ್ರೇಷನ್ ಮೂವಿ ಮಾತ್ರ. ಅದು ಚೆನ್ನಾಗಿ ಬರಬೇಕು. ನಾನು ಚೆನ್ನಾಗಿ ಪರ್ಫಾಮ್ ಮಾಡ್ಬೇಕು. ನಾನು ಉತ್ತಮ ನಟನಾಗಬೇಕು. ಇದರಲ್ಲಿ ನಾನು ಗುರುತಿಸಿಕೊಂಡು ರಾಜಕೀಯಕ್ಕೆ ಬರುವಂಥದ್ದು ಏನೂ ಇಲ್ಲ. ಅಂತಹ ಯಾವುದೇ ಒತ್ತಡ ಇಲ್ಲ. ನನಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೀಬೇಕು ಅನ್ನುವ ಆಸೆ ಇದೆ. ಒಂದೆರಡು ಸಿನಿಮಾಗಳನ್ನ ಮಾಡೋಕೆ ನಾನು ಇಲ್ಲಿಗೆ ಖಂಡಿತ ಬಂದಿಲ್ಲ. That is for sure.'' ['ಫಿಲ್ಮಿಬೀಟ್ ಕನ್ನಡ' ವಿಶೇಷ; ಎಚ್.ಡಿ.ಕೆ ಪುತ್ರ ನಿಖಿಲ್ ಸಂದರ್ಶನ]

    ಅಪ್ಪ-ಮಗನ ಮಾತಿನ ಅರ್ಥ

    ಅಪ್ಪ-ಮಗನ ಮಾತಿನ ಅರ್ಥ

    ನಿಖಿಲ್ ಗೌಡಗೆ ಕನ್ನಡ ಚಿತ್ರರಂಗದಲ್ಲಿ ಬೆಳೆಯುವ ಆಸೆ ಇದೆ. ಎಚ್.ಡಿ.ಕೆ ಆಶಯ ಕೂಡ ಅದೇ. ಚಿತ್ರರಂಗದಲ್ಲಿ ಫೇಮಸ್ ಆಗಿ ರಾಜಕೀಯಕ್ಕೆ ಬರುವಂಥದ್ದು ಏನು ಇಲ್ಲ ಅನ್ನೋದು ಇಬ್ಬರ ಮಾತಿನ ಅರ್ಥ. ಅಂದ್ಮೇಲೆ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಮೇಲೆ ನಿಖಿಲ್ ಗೆ ರಾಜಕೀಯದ ಅನಿವಾರ್ಯತೆ ಇಲ್ಲ. ಅಲ್ಲಿಗೆ, ಗೌಡರ ಕುಟುಂಬ ರಾಜಕೀಯ ಎಚ್.ಡಿ.ಕೆಗೆ ಕೊನೆಯಾದರೆ ಆಶ್ಚರ್ಯ ಪಡಬೇಡಿ.

    English summary
    Ex CM H.D.Kumaraswamy's son Nikhil Gowda is all set to make his Sandalwood debut with the movie 'Jaguar'. Nikhil Gowda clearly stated that his first choice is Cinema not Politics. Even H.D.Kumaraswamy wants his son to become a Successful star more than a Politician.
    Thursday, June 11, 2015, 17:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X