ಚಿರಂಜೀವಿ ಸರ್ಜಾ ಗೆ ಇದ್ದ ಆರೋಗ್ಯ ಸಮಸ್ಯೆಗಳೇನು: ಸಾವಿಗೆ ಕಾರಣವೇನು?
ಚಿರಂಜೀವಿ ಸರ್ಜಾ ಅವರು ಇದ್ದಕ್ಕಿದ್ದಂತೆ ಪ್ರಾಣ ಬಿಟ್ಟಿದ್ದಾರೆ. ಕೇವಲ 39 ವರ್ಷ ವಯಸ್ಸಿನ ಅವರಿಗೆ ಸಾವು ಬಂದಿದ್ದಕ್ಕೆ ಕಾರಣವೇನು? ಎಂಬುದು ಎಲ್ಲರ ಮನದಲ್ಲಿ ಹುಟ್ಟಿರುವ ಪ್ರಶ್ನೆ.
Recommended Video
ಕೆಲವು ಮೂಲಗಳ ಪ್ರಕಾರ ಕೆಲವೇ ದಿನಗಳ ಹಿಂದೆ ಸರ್ಜಾ ಅವರಿಗೆ ತುಸು ಆರೋಗ್ಯ ಸಮಸ್ಯೆ ಎದುರಾಗಿತ್ತಂತೆ. ಈ ಬಗ್ಗೆ ಆಸ್ಪತ್ರೆಯು ಅಧಿಕೃತ ಹೇಳಿಕೆ ನೀಡಿಲ್ಲವಾದರೂ ಆಪ್ತೇಷ್ಟರು ಈ ಬಗ್ಗೆ ಮಾಧ್ಯಮಗಳ ಬಳಿ ಹೇಳಿದ್ದಾರೆ.
ಕೆ.ಮಂಜು ಅವರು ಹೇಳಿದಂತೆ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ್ದರಂತೆ. ಅವರಿಗೆ ತುಸು ಆರೋಗ್ಯ ಸಮಸ್ಯೆ ಎದುರಾಗಿತ್ತಂತೆ. ಆದರೆ ಆ ನಂತರ ಮಾಮೂಲಿನಂತೆಯೇ ಇದ್ದರಂತೆ. ಆದರೆ ಇಂದು ಇದ್ದಕ್ಕಿದ್ದಂತೆ ಹೃದಯಾಘಾತವಾಗಿದೆ.

ತಲೆಯಲ್ಲಿ ನೋವು ಕಾಣಿಸಿಕೊಂಡಿತ್ತು
ಕೆಲವು ಮೂಲಗಳ ಹಾಗೂ ಮಾಧ್ಯಮಗಳ ಪ್ರಕಾರ, ಚಿರಂಜೀವಿ ಸರ್ಜಾ ಅವರಿಗೆ ಮೂರು ದಿನಗಳ ಹಿಂದೆ ತೆಲೆಯಲ್ಲಿ ನೋವು ಕಾಣಿಸಿಕೊಂಡಿತ್ತಂತೆ. ಬ್ರೇನ್ ಸ್ಟ್ರೋಕ್ ಮಾದರಿಯ ಸಮಸ್ಯೆ ಎದುರಾಗಿತ್ತು ಎನ್ನಲಾಗಿದೆ. ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆದು ಬಂದಿದ್ದರು ಸರ್ಜಾ.

ಫಿಟ್ಸ್ ಸಮಸ್ಯೆಯೂ ಇತ್ತು
ಅಷ್ಟೆ ಅಲ್ಲದೆ, ಅವರಿಗೆ ಫಿಟ್ಸ್ ಮಾದರಿಯ ಸಮಸ್ಯೆ ಇತ್ತು, ನಿನ್ನೆಯಷ್ಟೆ ಅವರಿಗೆ ಫಿಟ್ಸ್ ಆಗಿ ಮನೆಯಲ್ಲಿ ಒದ್ದಾಡಿದ್ದರು ಎಂದು ಅವರ ಕುಟುಂಬದ ಆಪ್ತರೇ ತಿಳಿಸಿದ್ದಾರೆ.

ಫಿಟ್‌ನೆಸ್ ಬಗ್ಗೆ ಅಸಡ್ಡೆ ಹೊಂದಿದ್ದರು
ಸಹೋದರ ಧ್ರುವ ಸರ್ಜಾ ಅವರಿಗೆ ಹೋಲಿಸಿದರೆ ಚಿರು ಗೆ ಫಿಟ್‌ನೆಸ್ ಬಗ್ಗೆ ತುಸು ಅಸಡ್ಡೆ ಇತ್ತು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರಲಿಲ್ಲವಂತೆ.

ತೀವ್ರ ಹೃದಯಾಘಾತವಾಗಿತ್ತು
ಉಸಿರಾಟದ ಸಮಸ್ಯೆ ಹಾಗೂ ಎದೆನೋವಿನಿಂದ ಕೆಳಗೆ ಬಿದ್ದ ಚಿರಂಜೀವಿ ಸರ್ಜಾ ರನ್ನು ಕೂಡಲೇ ಧ್ರುವ ಸರ್ಜಾ ಮತ್ತು ಇತರರು ಆಸ್ಪತ್ರೆಗೆ ಕರೆದುಕೊಂಡು ಬಂದರು. ಅಲ್ಲಿ ವೈದ್ಯರು ಪಲ್ಸ್ ರಿವೈವ್ ಚಿಕಿತ್ಸೆ ನೀಡಲು ಯತ್ನಿಸಿದರು. ಆದರೆ ಚಿರು ಸ್ಪಂದಿಸಲಿಲ್ಲ.


Click it and Unblock the Notifications











