»   » 'ಹೆಬ್ಬುಲಿ' ಟೈಟಲ್ ವಿಡಿಯೋ ಸಾಂಗ್ ಗೆ ಇಷ್ಟೊಂದು ಕ್ರೇಜ್?

'ಹೆಬ್ಬುಲಿ' ಟೈಟಲ್ ವಿಡಿಯೋ ಸಾಂಗ್ ಗೆ ಇಷ್ಟೊಂದು ಕ್ರೇಜ್?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಬಿಡುಗಡೆಗೆ ಕೌಂಡೌನ್ ಶುರುವಾಗಿದ್ದು, ದಿನದಿಂದ ದಿನಕ್ಕೆ 'ಹೆಬ್ಬುಲಿ' ಕ್ರೇಜ್ ಹೆಚ್ಚಾಗುತ್ತಿದೆ. ಟೀಸರ್ ಮೂಲಕ ಇಡೀ ದಕ್ಷಿಣ ಭಾರತವನ್ನೇ ತುದಿಗಾಲಲ್ಲಿ ಕಾಯಿಸುತ್ತಿದ್ದ 'ಹೆಬ್ಬುಲಿ' ಈಗ ಮತ್ತೊಂದು ಸರ್ಪ್ರೈಸ್ ಕೊಟ್ಟಿದೆ.

ಇಷ್ಟು ದಿನ 'ಹೆಬ್ಬುಲಿ' ಚಿತ್ರದ ಆಡಿಯೋ ಕೇಳಿ ಎಂಜಾಯ್ ಮಾಡ್ತಿದ್ದ ಅಭಿಮಾನಿಗಳಿಗೆ ಈಗ ವಿಡಿಯೋ ಸಾಂಗ್ ನೋಡುವ ಅವಕಾಶ ಸಿಕ್ಕಿದೆ. ಹೌದು, 'ಹೆಬ್ಬುಲಿ' ಚಿತ್ರದ ಟೈಟಲ್ ಟ್ರ್ಯಾಕ್ ನ ವಿಡಿಯೋ ಸಾಂಗ್ ರಿಲೀಸ್ ಆಗಿದ್ದು, ಯ್ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ.[ಕನ್ನಡದಲ್ಲಿ ಹಿಂದೆಂದೂ ಕಂಡಿಲ್ಲದ ಬಿಗ್ ಓಪನ್ನಿಂಗ್ ಪಡೆಯಲಿದೆ ಕಿಚ್ಚನ 'ಹೆಬ್ಬುಲಿ'!]

ಭಾನುವಾರ (ಫೆಬ್ರವರಿ 12) ಸಂಜೆ 'ಹೆಬ್ಬುಲಿ' ಚಿತ್ರದ ಟೈಟಲ್ ವಿಡಿಯೋ ಸಾಂಗ್ ಯ್ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ವೀಕ್ಷಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ, ಚೇತನ್ ಸಾಹಿತ್ಯ ಬರೆದಿದ್ದು, ಸಿದ್ಧಾರ್ಥ್ ಬಸ್ರೂರ್ ಕಂಠದಲ್ಲಿ ಮೂಡಿಬಂದಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೇ, ಚಿತ್ರದ ಸಾಂಗ್ ಟೀಸರ್ ಜೊತೆ ಟ್ರೈಲರ್ ಕೂಡ ಬಿಡುಗಡೆ ಆಗಬೇಕಿತ್ತು. ಆದ್ರೆ, ಟೈಟಲ್ ಸಾಂಗ್ ಟೀಸರ್ ಮಾತ್ರ ಬಿಡುಗಡೆಯಾಗಿದೆ. ಆದ್ರೆ, 'ಜೀ ಮ್ಯೂಸಿಕ್' ಅವರು ಅಫೀಶಿಯಲ್ ಆಗಿ ಟ್ರೈಲರ್ ಕೂಡ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.[ತಮಿಳುನಾಡಿನಲ್ಲಿ ಟ್ರೆಂಡಿಂಗ್ ನಲ್ಲಿದೆ ಕಿಚ್ಚನ 'ಹೆಬ್ಬುಲಿ'!]

ಅಂದ್ಹಾಗೆ, 'ಹೆಬ್ಬುಲಿ' ಇದೇ ತಿಂಗಳು 23 ರಂದು ದೇಶಾದ್ಯಂತ ತೆರೆಕಾಣುತ್ತಿದ್ದು, ಚೆನ್ನೈ, ಮುಂಬೈ, ಹೈದರಾಬಾದ್ ಸೇರಿದಂತೆ ಸುಮಾರು 500ಕ್ಕೂ ಅಧಿಕ ಸ್ಕ್ರೀನ್ ನಲ್ಲಿ 'ಹೆಬ್ಬುಲಿ' ಘರ್ಜಿಸಲಿದೆ. ಇನ್ನೂ 'ಹೆಬ್ಬುಲಿ' ಚಿತ್ರದಲ್ಲಿ ಕಿಚ್ಚ ಸುದೀಪ್ ಗೆ ಅಮಲಾ ಪೌಲ್ ಜೊತೆಯಾಗಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಸಾಥ್ ಕೊಟ್ಟಿದ್ದಾರೆ. ಇನ್ನೂ ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರಕ್ಕೆ ಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ.

English summary
Kiccha Sudeep Starrer Hebbuli Movie Title Video Song Released in Youtube. The Movie Directed by Krishna and Music Directed by Arjun Janya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada