For Quick Alerts
  ALLOW NOTIFICATIONS  
  For Daily Alerts

  ಮತ್ತೆ ಜೊತೆಯಾಗುತ್ತಿದೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಜೋಡಿ

  |

  ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಜೋಡಿ ಈಗ ಮತ್ತೆ ಒಂದಾಗುತ್ತಿದ್ದಾರೆ.

  ಪ್ರಭಾಸ್ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ KGF ತಂಡ |Rocking Star Yash|KGF-2 | Prabhas|

  ಹೌದು, ಈ ಬಗ್ಗೆ ಹೇಮಂತ್ ರಾವ್ ಟ್ವೀಟ್ ಮಾಡಿದ್ದು, 'ನಾಳೆ ಬೆಳಿಗ್ಗೆ 10 ಗಂಟೆಗೆ ಮುಂದಿನ ಪ್ರಾಜೆಕ್ಟ್ ಬಗ್ಗೆ ಘೋಷಣೆ ಮಾಡಲಿದ್ದೇವೆ' ಎಂದು ಹೇಳಿದ್ದಾರೆ.

  2016 ರಲ್ಲಿ ತೆರೆ ಕಂಡಿದ್ದ ರಕ್ಷಿತ್ ಶೆಟ್ಟಿ, ಅನಂತ್ ನಾಗ್, ಶೃತಿ ಹಾಸನ್, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಗೋದಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ಉತ್ತಮ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಒಂದಾಗುತ್ತಿರುವುದು ಸಿನಿ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.

  ಹೇಮಂತ್ ರಾವ್-ರಕ್ಷಿತ್ ಶೆಟ್ಟಿ ಜೋಡಿ

  ಹೇಮಂತ್ ರಾವ್-ರಕ್ಷಿತ್ ಶೆಟ್ಟಿ ಜೋಡಿ

  ಬೆಳಿಗ್ಗೆ ಟ್ವೀಟ್ ಮಾಡಿದ್ದ ನಿರ್ದೇಶಕ ಹೇಮಂತ್ ರಾವ್, ರಕ್ಷಿತ್ ಶೆಟ್ಟಿ ಹಾಗೂ ತಾವು ಒಟ್ಟಿಗೆ ಕೂತಿರುವ ಚಿತ್ರಗಳನ್ನು ಟ್ವೀಟ್ ಮಾಡಿ, ಕೊರೊನಾ ಭೀತಿಯಿಂದ ಮನೆಯಲ್ಲಿ ಕೂತು, ಹಾರ್ಡ್ ಡಿಸ್ಕ್ ಕ್ಲೀನ್ ಮಾಡುತ್ತಿದ್ದಾಗ ಈ ಚಿತ್ರ ಸಿಕ್ಕಿತು, ನಾವಿಬ್ಬರೂ ಮತ್ತೆ ಒಟ್ಟಿಗೆ ಕೆಲಸ ಮಾಡೋಣ'' ಎಂದು ಬರೆದುಕೊಂಡಿದ್ದರು.

  ಗುರುವಾರ ಬೆಳಿಗ್ಗೆ ಘೋಷಣೆ

  ಗುರುವಾರ ಬೆಳಿಗ್ಗೆ ಘೋಷಣೆ

  ಮತ್ತೆ ಸಂಜೆ ವೇಳೆಗೆ ಇದನ್ನು ಅಧಿಕೃತಗೊಳಿಸಿದ ಹೇಮಂತ್ ರಾವ್, ಬೆಳಿಗ್ಗೆ ಮಾಡಿದ್ದ ಟ್ವೀಟ್ ಪ್ರಾಜೆಕ್ಟ್ ಬಗ್ಗೆ ನೀಡಿದ್ದ ಸೂಚನೆ, ನಮ್ಮ ಮುಂದಿನ ಸಿನಿಮಾ ಬಗ್ಗೆ ನಾಳೆ ಬೆಳಿಗ್ಗೆ 10 ಗಂಟೆಗೆ ಘೋಷಣೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

  ಚಾರ್ಲಿ 777 ಸಿನಿಮಾದಲ್ಲಿ ಬ್ಯುಸಿ

  ಚಾರ್ಲಿ 777 ಸಿನಿಮಾದಲ್ಲಿ ಬ್ಯುಸಿ

  ರಕ್ಷಿತ್ ಶೆಟ್ಟಿ ಅವರು ಅವನೇ ಶ್ರೀಮನ್ನಾರಾಯಣ ಚಿತ್ರದ ಬಳಿಕ ಈಗ ಚಾರ್ಲಿ 777 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಕಿರಣ್ ರಾಜ್.ಕೆ ನಿರ್ದೇಶಿಸಿದ್ದಾರೆ. ಜೊತೆಗೆ ಪುಣ್ಯಕೋಟಿ ಎಂಬ ಸಿನಿಮಾ ಸಹ ರಕ್ಷಿತ್ ಮಾಡಲಿದ್ದಾರೆ.

  ಕವಲುದಾರಿ ಯಶಸ್ಸಿನಲ್ಲಿ ಹೇಮಂತ್ ರಾವ್

  ಕವಲುದಾರಿ ಯಶಸ್ಸಿನಲ್ಲಿ ಹೇಮಂತ್ ರಾವ್

  ಇನ್ನು ಹೇಮಂತ್ ರಾವ್ ಅವರು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾದರು. ನಂತರ ಬಾಲಿವುಡ್‌ ನ ಅಂಧಾದುನ್ ಸಿನಿಮಾಕ್ಕೆ ಚಿತ್ರಕತೆ ಬರೆದರು. ಕಳೆದ ವರ್ಷ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್‌ಗಾಗಿ ಕವಲುದಾರಿ ಸಿನಿಮಾ ನಿರ್ದೇಶಿಸಿದ್ದು ಇದು ಹಿಟ್ ಆಗಿದೆ.

  English summary
  Director Hemanth Rao and Rakshit Shetty teaming up for another movie. Hemanth Rao said details will be announced tomorrow.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X