Don't Miss!
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಟಿಸಲು ನಿಮಗೊಂದು ಸುವರ್ಣ ಅವಕಾಶ!
ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನಕ್ಕೆ ಹೆಚ್ಚಿನ ಬೇಡಿಕೆ ಇದೆ. ಆದರೂ ಕೂಡ ಉಪ್ಪಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನಿರ್ದೇಶನ ಮಾಡುವುದಿಲ್ಲ. ವರ್ಷಗಳ ಬಳಿಕ ಈಗ ನಟ ಉಪೇಂದ್ರ ಅವರು ಮತ್ತೆ ನಿರ್ದೇಶಕನ ಕ್ಯಾಪ್ ಹಾಕಿಕೊಳ್ಳುತ್ತಿದ್ದಾರೆ. ಹಾಗಾಗಿ ನಿಮಗೂ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಸಿನಿಮಾದ ಜೊತೆಗೆ ಪ್ರಜಾಕೀಯವನ್ನು ಆರಂಭಿಸಿರುವ ನಟ ಉಪೇಂದ್ರ ಅವರು, ಈಗ ಮತ್ತೆ ಸಿನಿಮಾ ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. ಉಪ್ಪಿ 2 ಚಿತ್ರದ ಬಳಿಕ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಚಿತ್ರದಲ್ಲಿನ ನೀವೂ ಕೂಡ ಉಪ್ಪಿ ಜೊತೆಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳಬಹುದು.
ಉಪೇಂದ್ರ ಅವರ ಜೊತೆಗೆ, ಅವರ ಮುಂದಿನ ಸಿನಿಮಾದಲ್ಲಿ ಅಭಿನಯಿಸುವುದು ಹೇಗೆ. ಅವರ ಸಿನಿಮಾದಲ್ಲಿ ಯಾರಿಗೆಲ್ಲಾ ಚಾನ್ಸ್ ಇದೆ. ಎನ್ನುವ ಸುವರ್ಣ ಅವಕಾಶದ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ....

ಉಪ್ಪಿ ಹೊಸ ಚಿತ್ರಕ್ಕೆ ಕಲಾವಿದರು ಬೇಕಾಗಿದ್ದಾರೆ!
ಹೌದು ನಟ ಉಪೇಂದ್ರ ಅವರು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದು, ಈಗಾಗಲೇ ಕಳೆದ ವರ್ಷ ಅವರ ಹುಟ್ಟುಹಬ್ಬಕ್ಕೆ ಪೋಸ್ಟರ್ ಕೂಡ ರಿಲೀಸ್ ಮಾಡಿದ್ದರು. ಈ ಚಿತ್ರದಲ್ಲಿ ಅಭಿನಯಿಸಲು ಉಪೇಂದ್ರ ಅವರಿಗೆ ನವ ಕಲಾವಿದರು ಬೇಕಾಗಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಪೋಸ್ಟ್ ಹಂಚಿಕೊಂಡು ಪ್ರಕಟಣೆ ಹೊರಡಿಸಿದ್ದಾರೆ ಉಪ್ಪಿ.

ನಟಿ, ನಟರಿಗೆ ಇರಬೇಕಾದ ಅರ್ಹತೆಗಳು ಹೀಗಿವೆ!
ಉಪೇಂದ್ರ ಅವರು ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ಅಭಿನಯಿಸಲು ನಟ ನಟಿಯರಿಗೆ ವಯಸ್ಸಿನ ಮಿತಿಯನ್ನು ನೀಡಲಾಗಿದೆ. ಉಪೇಂದ್ರ ಅವರು ರಿಲೀಸ್ ಪೋಸ್ಟರ್‌ನಲ್ಲಿ ಹಿಗೆ ನಮೂದಿಸಲಾಗಿದೆ. "ಉಪೇಂದ್ರ ಅವರು ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ಅಭಿನಯಿಸಲು ನಟ, ನಟಿಯರು ಬೇಕಾಗಿದ್ದಾರೆ. 14 ರಿಂದ 60 ವರ್ಷ ವಯಸ್ಸಿನವರೆಗೂ ಇರಬೇಕು. ತಾವು ನಟಿಸಿರುವ 2 ನಿಮಿಷದ ವೀಡಿಯೋ ತುಣುಕನ್ನು upendraproductionsgmail.com ಮೈಲ್ ಐಡಿಗೆ ಕಳಿಸಿಕೊಡಿ. ಕೊನೆಯ ದಿನಾಂಕ 10-03-2022 ಮಾರ್ಚ್-10ನೇ ತಾರೀಖಿನ ಒಳಗೆ." ಎಂದು ಬರೆಯಲಾಗಿದೆ.

ಕುತೂಹಲ ಮೂಡಿಸಿದ್ದ ನಾಮದ ಪೋಸ್ಟರ್!
ಉಪೇಂದ್ರ ಅವರ ಮುಂದಿನ ಚಿತ್ರದ ಬಗ್ಗೆ ಮೊದಲ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ. ಟೈಟಲ್ ಮೂರು ನಾಮದ ಸಿಂಬಲ್ ಹೊಂದಿದೆ. ಈ ಹಿಂದೆ ಸೂಪರ್ ಸಿನಿಮಾಗೂ ಅವರು ಚಿಹ್ನೆಯನ್ನೇ ಬಳಸಿದ್ದರು. ಈ ನಾಮವನ್ನು ಟೈಟಲ್‌ಗೆ ಬೇರೊಂದು ಅರ್ಥವೂ ಬರುತ್ತದೆ. I ಎಂದರೆ ನಾನು ಮತ್ತು U ಎಂದರೆ ನೀನು ಎಂಬರ್ಥವೂ ಸಿಗಲಿದೆ. ಟೈಟಲ್‌ನಲ್ಲೇ ಕುತೂಹಲ ಇಟ್ಟು ಉಪ್ಪಿ ಈಸ್ ಬ್ಯಾಕ್ ಎನ್ನುವ ಕ್ರೇಜ್ ಹುಟ್ಟು ಹಾಕಿದ್ದರು. ಇನ್ನು ಉಪ್ಪಿ2 ಚಿತ್ರದ ಬಳಿಕ ಆರು ವರ್ಷಗಳ ನಂತರ ಉಪೇಂದ್ರ ಅವರು ಮತ್ತೇ ನಿರ್ದೇಶನಕ್ಕೆ ಇಳಿದ್ದಾರೆ.

ಕಬ್ಜ ಚಿತ್ರದಲ್ಲಿ ಉಪೇಂದ್ರ ಬ್ಯುಸಿ!
ನಟ ಉಪೇಂದ್ರ ಅವರು ಸದ್ಯ ಕಬ್ಜ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ನಿರ್ದೇಶಕ ಆರ್ ಚಂದ್ರು, ನಿರ್ದೇಶನ ಮತ್ತು ನಿರ್ಮಾಣದಲ್ಲಿ ಸಿನಿಮಾ ತಯಾರಾಗುತ್ತಿದೆ. ಈಗಾಗಲೇ ಕಬ್ಜ ಚಿತ್ರದಲ್ಲಿ ಉಪ್ಪಿ ಅವರ ಲುಕ್ ಬದಲಾಗಿದೆ. ಉಪೇಂದ್ರ ಅವರು ರೆಟ್ರೋ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.