»   » 'ಇತಿಹಾಸ ಯಾವಾಗಲು ಸರಿ ಎನ್ನಲು ಸಾಧ್ಯ ಇಲ್ಲ!': ರಕ್ಷಿತ್ ಶೆಟ್ಟಿ

'ಇತಿಹಾಸ ಯಾವಾಗಲು ಸರಿ ಎನ್ನಲು ಸಾಧ್ಯ ಇಲ್ಲ!': ರಕ್ಷಿತ್ ಶೆಟ್ಟಿ

Posted By:
Subscribe to Filmibeat Kannada

ಟ್ವಿಟರ್ ನಲ್ಲಿ ಆಗಾಗ ಒಬ್ಬರನ್ನೊಬ್ಬರು ಕಾಲೆಳೆದು ಕೊಳ್ಳುತ್ತಾ ದೋಸ್ತಿಗಳಾಗಿರುವ ಕಿಚ್ಚ ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಇಬ್ಬರು ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಈಗಾಗಲೇ ಇಬ್ಬರ ಅಭಿಮಾನಿಗಳಿಗೆ ಗೊತ್ತಿದೆ. ರಕ್ಷಿತ್ ಶೆಟ್ಟಿ ತಾವೆ ಚಿತ್ರಕಥೆ ಬರೆದು, ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಸುದೀಪ್ ಥಗ್ಸ್(ದರೋಡೆಕೋರ) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.[ಶೀರ್ಷಿಕೆಯ ವಿವಾದದಡಿಯಲ್ಲಿ ಶೆಟ್ಟಿಯ ಥಗ್ಸ್ ಆಫ್ ಮಾಲ್ಗುಡಿ]

ಕಿಚ್ಚ ಸುದೀಪ್‌ ಮತ್ತು ರಕ್ಷಿತ್ ಶೆಟ್ಟಿ ಇಬ್ಬರು ಲೀಡ್ ರೋಲ್‌ ನಲ್ಲಿ ಕಾಣಿಸಿಕೊಳ್ಳುತ್ತಿರುವ 'ಥಗ್ಸ್ ಆಫ್‌ ಮಾಲ್ಗುಡಿ' ಚಿತ್ರದ ಬಗೆಗಿನ ಅಪ್‌ಡೇಟೆಡ್ ನ್ಯೂಸ್ ಒಂದು ಈಗ ಬಂದಿದೆ. ರಕ್ಷಿತ್‌ ಶೆಟ್ಟಿ ಚಿತ್ರದ ಹಿನ್ನೆಲೆ ಬಗ್ಗೆ 'ಇತಿಹಾಸ ಯಾವಾಗಲು ಸರಿ ಎನ್ನಲು ಸಾಧ್ಯ ಇಲ್ಲ' ಎಂದು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ ಫೇಸ್ ಬುಕ್ ಪೋಸ್ಟ್ ನಲ್ಲಿ ಏನಿದೆ?

"ಥಗ್ಸ್(ಕೊಲೆಗಡುಕರು) ಬಗ್ಗೆ ಹೇಳಲಾದ ಕಥೆಗಳನ್ನು ಹಲವು ಬಾರಿ ಬೇರೆ ಬೇರೆ ರೀತಿಯಲ್ಲಿ ಮತ್ತೆ ಮತ್ತೆ ಹೇಳಲಾಗಿದೆ. ಆದರೆ ಇದು ಏಕಮುಖವಾಗಿದೆ ಎಂದು ಬ್ರಿಟಿಷ್ ರಾಜ್‌(1858 ಮತ್ತು 1947 ರ ನಡುವೆ ಭಾರತೀಯ ಉಪಖಂಡದಲ್ಲಿ ಇದ್ದ ಬ್ರಿಟಿಷ್ ಸಾಮ್ರಾಜ್ಯದ ನಿಯಮ) ಚಿತ್ರಿಸಲ್ಪಟ್ಟಿದೆ. ಎಲ್ಲಾ ಕಥೆಗಳು ಒಂದೇ ರೀತಿ ಇಲ್ಲ. ಕಥೆಯ ಇನ್ನೊಂದು ಭಾಗ ಕತ್ತಲೆಯಲ್ಲಿಯೇ ಉಳಿದುಕೊಂಡಿದೆ. ಅದು ನಮಗ್ಯಾರಿಗೂ ಗೊತ್ತಿಲ್ಲ. ಇದನ್ನು ಹೇಳುವುದು ಅನವಶ್ಯಕ", ಎಂದು ರಕ್ಷಿತ್ ಶೆಟ್ಟಿ ತಮ್ಮ ಫೇಸ್‌ಬುಕ್‌ ಪೇಜ್‌ ನಲ್ಲಿ ಬರೆದಿದ್ದಾರೆ.

ರಕ್ಷಿತ್ ಹೀಗೆ ಯಾಕ್ ಹೇಳಿದ್ರು.?

ಅಂದಹಾಗೆ ರಕ್ಷಿತ್ ಶೆಟ್ಟಿ ಹೀಗೆ ಹೇಳಿರುವುದು 'ಥಗ್ಸ್ ಆಪ್ ಮಾಲ್ಗುಡಿ' ಚಿತ್ರ ಕಥೆಗೆ ಸಂಬಂಧಿಸಿದಂತೆ. ಮುಂಬರುವ ಜೂನ್‌ ತಿಂಗಳಲ್ಲಿ ಚಿತ್ರ ಸೆಟ್ಟೇರಲಿದ್ದು, 70 ವರ್ಷಗಳ ಹಿಂದಿನ ಅನ್‌ ಟೋಲ್ಡ್‌ ಸ್ಟೋರಿಯನ್ನು ಹೇಳುವ ದೃಶ್ಯಗಳೊಂದಿಗೆ ಚಿತ್ರೀಕರಣ ಆರಂಭವಾಗಲಿದೆ. ಕಿಚ್ಚ ಸುದೀಪ್, ನಾನು(ರಕ್ಷಿತ್ ಶೆಟ್ಟಿ) ಥಗ್ಸ್‌ ಗಳ ಪಾತ್ರದಲ್ಲಿ ಅಭಿನಯಿಸುತ್ತಿದ್ದೇವೆ" ಎಂದು ರಕ್ಷಿತ್ ಶೆಟ್ಟಿ ಸ್ಟೇಟಸ್ ಹಾಕಿದ್ದಾರೆ.[ಕಿಚ್ಚ ಸುದೀಪ್‌ ಚಿತ್ರಕ್ಕೆ ರಿಷಬ್ ಶೆಟ್ಟಿ ಆಕ್ಷನ್ ಕಟ್]

ವಿವಾದಾತ್ಮಕ ಮಾಹಿತಿಯ ಚಿತ್ರಕಥೆ

'ಥಗ್ಸ್‌ ಆಫ್ ಮಾಲ್ಗುಡಿ' ಬ್ರಿಟಿಷರ ಕಾಲದ ಹೆಚ್ಚಿನ ವಿವಾದಾತ್ಮಕ ಮಾಹಿತಿ ಕುರಿತ ಚಿತ್ರಕಥೆ ಹೊಂದಿರುವ ಸಿನಿಮಾ ಎಂದು ಹೇಳಲಾಗುತ್ತಿದೆ. ಆದರೂ ಸಹ ರಕ್ಷಿತ್ ಶೆಟ್ಟಿ ನಿಭಾಯಿಸುವ ಧೈರ್ಯ ಮಾಡಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ.

'ಥಗ್ಸ್ ಆಫ್ ಮಾಲ್ಗುಡಿ' ಶೀರ್ಷಿಕೆ ವಿವಾದ

ಕಿಚ್ಚನನ್ನು ವಿಲನ್ ಶೇಡ್ನಲ್ಲಿ ತೋರಿಸೋಕೆ ಅಂತ ರಕ್ಷಿತ್ ಶೆಟ್ಟಿ 'ಥಗ್ಸ್ ಆಫ್ ಮಾಲ್ಗುಡಿ' ಎಂಬ ಟೈಟಲ್ ಅನ್ನು ಹೊರಹಾಕಿದ ತಕ್ಷಣ ಈ ಶೀರ್ಷಿಕೆ ವಿವಾದಕ್ಕೆ ಸಿಲುಕುವ ಮುನ್ಸೂಚನೆ ಪಡೆದಿತ್ತು. ಯಾಕಂದ್ರೆ ನಿರ್ದೇಶಕ ಎ.ಪಿ.ಅರ್ಜುನ್ 'ಮಾಲ್ಗುಡಿ' ಅನ್ನೋ ಟೈಟಲ್‌ ನಲ್ಲಿ ಸಿನಿಮಾ ಮಾಡೋ ಪ್ಲಾನ್ನಲ್ಲಿ ಇದ್ದರೂ. ಹಾಗೆ ಶಂಕರ್ ನಾಗ್ ರವರ ಮಾಲ್ಗುಡಿಗೆ ಸಂಬಂಧಿಸಿದ್ದರಬಹುದು ಎಂಬ ಗಾಳಿ ಸುದ್ದಿ ಇತ್ತು. ಆದರೆ ಇದ್ಯಾವುದಕ್ಕೂ ರಕ್ಷಿತ್ ಶೆಟ್ಟಿಯ 'ಥಗ್ಸ್ ಆಫ್ ಮಾಲ್ಗುಡಿ' ಟೈಟಲ್ ಸಂಬಂಧಪಟ್ಟಿದಲ್ಲ. ಮುಂದಿನ ದಿನಗಳಲ್ಲಿ ಅಂತಹ ಸಮಸ್ಯೆ ಬಂದ್ರೆ ಕಿಚ್ಚ ಎಂಟ್ರಿಯಾದ್ರೆ ವಿವಾದ ಆಗೋ ಚಾನ್ಸ್ ಇಲ್ಲ.

ಮಲ್ಟಿ ಸ್ಟಾರರ್ ಸಿನಿಮಾ

'ಥಗ್ಸ್ ಆಫ್ ಮಾಲ್ಗಡಿ' ಚಿತ್ರವನ್ನು ಕನ್ನಡದಲ್ಲಿ ಮಾತ್ರವಲ್ಲದೇ, ತಮಿಳು, ತೆಲುಗು ಮತ್ತು ಹಿಂದಿಯಲ್ಲೂ ನಿರ್ಮಿಸುವ ಯೋಚನೆ ರಕ್ಷಿತ್ ಶೆಟ್ಟಿ ಗೆ ಇದೆ. ಇದಕ್ಕೆ ಕಾರಣ ಕಿಚ್ಚ ಸುದೀಪ್ ಗೆ ಇರುವ ಮಾರ್ಕೆಟ್ ಮತ್ತು ಮಾಲ್ಗುಡಿ ಎಂಬ ಟೈಟಲ್. ಇಂತಹ ಗಾಳಿಸುದ್ದಿಗಳು ಇವೆ. ಅಲ್ಲದೇ ಕಿಚ್ಚ ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಜೊತೆಗೆ ಇತರೆ ಸ್ಟಾರ್‌ ಗಳು ಅಭಿನಯಿಸಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಆದರೆ ಅವರು ಯಾರಿರಬಹುದು ಎಂಬುದು ಮಾತ್ರ ತಿಳಿದಿಲ್ಲ.

'ಥಗ್ಸ್ ಆಫ್ ಹಿಂದೂಸ್ತಾನ್' ಹಿಂದಿಯಲ್ಲಿ ಶುರು

ರಕ್ಷಿತ್ ಶೆಟ್ಟಿಯ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರದ ಸಬ್ಜಕ್ಟ್‌ ಆಧಾರದಲ್ಲಿ ಹಿಂದಿಯಲ್ಲಿ ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಅಮೀರ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಮತ್ತು ಇತರೆ ಹಲವು ನಟರ ಮುಖ್ಯ ಭೂಮಿಕೆಯಲ್ಲಿ 'ಥಗ್ಸ್ ಆಫ್ ಹಿಂದೂಸ್ತಾನ್' ಎಂಬ ಸಿನಿಮಾ ಚಿತ್ರೀಕರಣ ಶುರುವಾಗಿದೆ.

ಶೂಟಿಂಗ್ ಗೆ ಎದುರುನೋಡುತ್ತಿರುವ ಕಿಚ್ಚ ಸುದೀಪ್

ರಕ್ಷಿತ್ ಶೆಟ್ಟಿ ನಟಿಸಿರುವ 'ಕಿರಿಕ್ ಪಾರ್ಟಿ' ನೋಡಿದ ಖುಷಿಯಲ್ಲಿ ಇರುವ ಕಿಚ್ಚ ಸುದೀಪ್, 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ.

English summary
Rakshit Shetty and Kiccha Sudeep Starring Upcoming Movie is 'Thugs of Malgudi'. Related to this story director Rakshit Shetty Wrote 'History is not always right!'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada