twitter
    For Quick Alerts
    ALLOW NOTIFICATIONS  
    For Daily Alerts

    #MeToo : 12 ವರ್ಷದ ಹಿಂದೆ 'ಮೀಟೂ' ಹುಟ್ಟಿದ ರೋಚಕ ಕಥೆ!

    |

    ''MeToo''... ಎಲ್ಲರೂ ಈಗ ಇದರ ಬಗ್ಗೆ ಮಾತನಾಡುತ್ತಾರೆ. 'ಮೀಟೂ' ಎಂದರೆ ಏನು ಎಂದು ತಿಳಿದಿದೆಯೋ, ಇಲ್ಲವೋ ಆದರೂ ಈಗ ಮೀಟೂ ಎನ್ನುವುದು ಒಂದು ಒಳ್ಳೆಯ ಚರ್ಚೆಯ ವಿಷಯವಾಗಿಬಿಟ್ಟಿದೆ.

    ಕನ್ನಡದ ಕೋಟೆಗೂ ಮೀಟೂ ಕಾಲಿಟ್ಟಿದೆ. ಒಂದು ವಾರದಿಂದ ಎಲ್ಲಿ ನೋಡಿದರು, ಯಾವ ಸುದ್ದಿ ಓದಿದರೂ ಬರೀ ಮೀಟೂ ಬಗ್ಗೆಯೇ ಇರುತ್ತಿದೆ. ಹಾಗಾದರೆ, ಈ ಮೀಟೂ ಅಂದರೆ ಏನು?, ಈ ಅಭಿಯಾನ ಶುರು ಆಗಿದ್ದು ಯಾಕೆ? ಯಾರು ಇದನ್ನು ಮೊದಲ ಪ್ರಾರಂಭ ಮಾಡಿದರು?.

    ಸರ್ಜಾ ಆಪ್ತನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಶ್ರುತಿ ಸರ್ಜಾ ಆಪ್ತನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಶ್ರುತಿ

    ಹೌದು, ಈ ರೀತಿಯ ಕುತೂಹಲ ಎಲ್ಲರಿಗೂ ಇರುತ್ತದೆ. ಆ ಕುತೂಹಲವನ್ನು ಈ ಲೇಖನ ತಣಿಸುತ್ತದೆ. ಮೀಟೂ ಅಭಿಯಾನ ನಿನ್ನೆ ಮೊನ್ನೆಯದಲ್ಲ ಅದಕ್ಕೆ 12 ವರ್ಷದ ಇತಿಹಾಸವಿದೆ. ಒಂದು ಒಳ್ಳೆಯ ಕಾರಣಕ್ಕಾಗಿ ಈ ಅಭಿಯಾನ ಶುರುವಾಗಿದೆ.

    ಅಂದಹಾಗೆ, ಸದ್ಯ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುವ 'ಮೀಟೂ' ಹುಟ್ಟಿನ ಹಿಂದಿನ ಒಂದು ರೋಚಕ ಕಥೆ ಮುಂದಿದೆ ಓದಿ...

    Metoo ಎಂದರೆ ಏನು?

    Metoo ಎಂದರೆ ಏನು?

    'ಮೀಟೂ' ಅಭಿಯಾನ ಮುಖ್ಯವಾಗಿ ಇರುವುದು ಹೆಣ್ಣು ಮಕ್ಕಳ ಲೈಂಗಿಕ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳದ ವಿರುದ್ಧ. ಲೈಂಗಿಕವಾಗಿ ದೌರ್ಜನ್ಯ ಆದ ಯಾವ ಮಹಿಳೆ ಕೂಡ ಇದರಲ್ಲಿ ಭಾಗವಹಿಸಬಹುದು. ಅಷ್ಟೇ ಅಲ್ಲದೆ, ಲೈಂಗಿಕವಾಗಿ ದೌರ್ಜನ್ಯ ಅನುಭವಿಸಿದ ಮಹಿಳೆಯರ ಪರ ಧ್ವನಿ ಎತ್ತುವವರು ಕೂಡ ಈ ಅಭಿಯಾನದ ಭಾಗ ಆಗಬಹುದು.

    ಸರ್ಜಾ ವಿರುದ್ಧ ಷಡ್ಯಂತ್ರ ರೂಪಿಸಲು ಶ್ರುತಿಗೆ ಇಬ್ಬರು ಕನ್ನಡ ನಟರು ಸಾಥ್.? ಸರ್ಜಾ ವಿರುದ್ಧ ಷಡ್ಯಂತ್ರ ರೂಪಿಸಲು ಶ್ರುತಿಗೆ ಇಬ್ಬರು ಕನ್ನಡ ನಟರು ಸಾಥ್.?

    ಈ ಅಭಿಯಾನದ ಉದ್ದೇಶ ಏನಾಗಿದೆ?

    ಈ ಅಭಿಯಾನದ ಉದ್ದೇಶ ಏನಾಗಿದೆ?

    ಮೀಟೂ ಅಭಿಯಾನದ ಮುಖ್ಯ ಉದ್ದೇಶ ಲೈಂಗಿಕ ದೌರ್ಜನ್ಯ ವಿರುದ್ಧ ಹೋರಾಡುವುದು. ಲೈಂಗಿಕ ಕಿರುಕುಳ ಅನುಭವಿಸಿದ ಮಹಿಳೆಯರು ಅದನ್ನು ಯಾರಿಗೂ ಹೇಳಲಾಗದೆ ಕಣ್ಣೀರು ಹಾಕುತ್ತಿರುತ್ತಾರೆ, ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ, ಈ ರೀತಿಯ ಘಟನೆ ನಡೆಯಬಾರದು, ಹೆಣ್ಣುಮಕ್ಕಳು ತಮ್ಮ ಮೇಲೆ ಆದ ಲೈಂಗಿಕ ದೌರ್ಜನ್ಯವನ್ನು ಧೈರ್ಯವಾಗಿ ಹೇಳಿಕೊಳಬೇಕು ಎನ್ನುವ ಉದ್ದೇಶವೆ ಮೀಟೂ.

    ಅರ್ಜುನ್ ಸರ್ಜಾ-ಶ್ರುತಿ ಹರಿಹರನ್ ಸಂಧಾನ ವಿಫಲ: ಅಂಬಿ ಪ್ರಯತ್ನ ಫೇಲ್.! ಅರ್ಜುನ್ ಸರ್ಜಾ-ಶ್ರುತಿ ಹರಿಹರನ್ ಸಂಧಾನ ವಿಫಲ: ಅಂಬಿ ಪ್ರಯತ್ನ ಫೇಲ್.!

    ತರಾನ್ ಬರ್ಕ್ ಎಂಬ ಮಹಿಳೆ ಶುರು

    ತರಾನ್ ಬರ್ಕ್ ಎಂಬ ಮಹಿಳೆ ಶುರು

    ಈ ಅಭಿಯಾನ ನಿನ್ನೆ ಮೊನ್ನೆಯದಲ್ಲ, ಮೀ ಟೂ ಮೊದಲು ಶುರು ಆಗಿದ್ದು, 12 ವರ್ಷಗಳ ಹಿಂದೆ. 2006 ರಲ್ಲಿ ತರಾನ್ ಬರ್ಕ್ ಎಂಬ ಆಫ್ರಿಕನ್ ಮೂಲದ ಮಹಿಳೆ ನ್ಯೂಯಾರ್ಕ್ ನಲ್ಲಿದ್ದು, ಆಕೆ ನಾಗರಿಕ ಹಕ್ಕುಗಳ ಹೋರಾಟಗಾರ್ತಿಯಾಗಿದ್ದರು. ತನ್ನ ಅಕ್ಕ ಪಕ್ಕ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ನೋಡಿ ಅವುಗಳಿಗೆ ಕಡಿವಣ ಹಾಕುವ ದೃಷ್ಟಿಯಿಂದ ಮೊಟ್ಟ ಮೊದಲ ಬಾರಿಗೆ ಮೀಟೂ ಅಭಿಯಾನ ಶುರು ಮಾಡಿದರು.

    ''Me too'' ಹುಟ್ಟಿದ್ದು ಈ ರೀತಿ

    ''Me too'' ಹುಟ್ಟಿದ್ದು ಈ ರೀತಿ

    12 ವರ್ಷಗಳ ಹಿಂದೆ ಒಂದು ದಿನ ತರಾನ್ ಬರ್ಕ್ ಅವರ ಬಳಿ ಒಬ್ಬ ಹುಡುಗಿ ತನ್ನ ಮೇಲೆ ಆದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಳ್ಳುತ್ತಾರೆ. ಕೇವಲ 13 ವರ್ಷದ ಆ ಬಾಲಕಿಯ ಕಥೆ ಕೇಳಿ ತರಾನ್ ಬರ್ಕ್ ಅವರ ಮನಸ್ಸಿಗೆ ನೋವಾಗುತ್ತದೆ. ಆ ಕ್ಷಣಕ್ಕೆ ಅವರು ಆ ಹುಡುಕಿಗೆ ಏನು ಹೇಳುವುದಿಲ್ಲ. ನಂತರ ನಾನು ಆಕೆಗೆ ''Me too'' ಅಂದರೆ, ನನಗೂ ಇದೇ ರೀತಿ ಆಗಿದೆ ಎಂದು ಹೇಳಿ ಸಮಾಧಾನ ಮಾಡಬೇಕಿತ್ತು ಎಂದು ಅನಿಸುತ್ತದೆ. ಅಲ್ಲಿಂದ ''Me too'' ಹುಟ್ಟಿಕೊಳ್ಳುತ್ತದೆ.

    ಕಳೆದ ವರ್ಷ ಪರಿಚಿತವಾಯ್ತು

    ಕಳೆದ ವರ್ಷ ಪರಿಚಿತವಾಯ್ತು

    2006ರಲ್ಲಿ ಶುರು ಆದರೂ ಈ ಅಭಿಯಾನ ಎಲ್ಲ ಕಡೆ ಪರಿಚಿತ ಆಗಿದ್ದು, ಕಳೆದ ವರ್ಷ ಅಕ್ಟೋಬರ್ ನಲ್ಲಿ. ಅಲಿಯಾಸ್ ಮಿಲಾನೊ ಎಂಬ ಮಹಿಳೆ ಹಾಲಿವುಡ್ ನಿರ್ದೇಶಕ ಹಾರ್ವೆ ವೈನ್ಸ್ಟಿನ್ ಮೇಲೆ ಆರೋಪ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆಕೆ ಬಳಸಿದ್ದ Me too ಹ್ಯಾಶ್ ಟ್ಯಾಗ್ ವೈರಲ್ ಆಗಿ, ಎಲ್ಲರಿಗೂ ಅದರ ಬಗ್ಗೆ ತಿಳಿಯುವಂತೆ ಆಯ್ತು.

    ಕನ್ನಡಕ್ಕೂ ಬಂತು ಮೀಟೂ

    ಕನ್ನಡಕ್ಕೂ ಬಂತು ಮೀಟೂ

    ಈ ರೀತಿ 12 ವರ್ಷಗಳ ಹಿಂದೆ ಒಂದು ಒಳ್ಳೆಯ ಯೋಚನೆಯಿಂದ ಶುರುವಾಗಿದ್ದ, ಮೀ ಟೂ ಇಂದು ಕನ್ನಡಕ್ಕೆ ಬಂದಿದೆ. ಬಾಲಿವುಡ್ ನಲ್ಲಿ ನಟಿ ತನುಶ್ರೀ ದತ್ತ ಹೇಳಿಕೆ ಮೂಲಕ ಸೃಷ್ಟಿಯಾದ ಮೀಟೂ ವಿನ ಗಾಟು ಈಗ ಚಂದನವನದ ತುಂಬ ಹಬ್ಬಿದೆ. ಅಂದಹಾಗೆ, ಈ ರೀತಿಯ ಒಂದು ಒಳ್ಳೆಯ ಅಭಿಯಾನ ದುರುಪಯೋಗ ಆಗದಿರಲಿ ಎನ್ನುವುದು ನಮ್ಮ ಆಶಯ.

    English summary
    History of Me Too campaign.
    Friday, October 26, 2018, 15:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X