»   » ಉಪ್ಪಿದಾದಾ ಎಂಬಿಬಿಎಸ್ ಇನ್ಮುಂದೆ 'ರಿಯಲ್' ಡಾಕ್ಟರ್

ಉಪ್ಪಿದಾದಾ ಎಂಬಿಬಿಎಸ್ ಇನ್ಮುಂದೆ 'ರಿಯಲ್' ಡಾಕ್ಟರ್

Subscribe to Filmibeat Kannada

ರಿಯಲ್ ಸ್ಟಾರ್, ಸೂಪರ್ ಸ್ಟಾರ್, ಇತ್ತೀಚೆಗಷ್ಟೇ ಎಲ್ಲರಿಗೂ ಬಿಸಿ ಬಿಸಿ ಉಪ್ಪಿಟ್ಟು ಬಡಿಸಿದ ನಿರ್ದೇಶಕ ಉಪೇಂದ್ರ ಅವರನ್ನು ಇನ್ನು ಮುಂದೆ ಡಾಕ್ಟರ್ ಉಪೇಂದ್ರ ಎಂದು ಕರೆಯಬೇಕು. ಉಪ್ಪಿದಾದಾ ಎಂಬಿಬಿಎಸ್ ಎಂದು ಚಲನಚಿತ್ರದಲ್ಲಿ ಡಾಕ್ಟರ್ ಆಗಿದ್ದ ಉಪ್ಪಿ ಇದೀಗ ನಿಜ ಜೀವನದಲ್ಲೂ ಡಾಕ್ಟರ್ ಆಗುತ್ತಿದ್ದಾರೆ.

ಬರ್ತ್ ಡೇ ಸೆಲಬರೇಶನ್ ನಲ್ಲಿರುವ ರಿಯಲ್ ಸ್ಟಾರ್ ಸಿನಿಮಾ ಸಾಧನೆಯನ್ನು ಗುರುತಿಸಿದ ಕಾಂಬೋಡಿಯಾದ ಅಂಕೋರೋ ವಿಶ್ವವಿದ್ಯಾಲಯ ಗೌರ ಡಾಕ್ಟರೇಟ್ ನೀಡಿ ಸನ್ಮಾನಿಸಲಿದೆ.[ಡಾಕ್ಟರೇಟ್ ಪಡೆದ ಕನ್ನಡದ ತಾರೆಗಳ ಲಿಸ್ಟ್]

upendra

ಸದಾ ವಿಭಿನ್ನವಾಗಿ ಯೋಚನೆ ಮಾಡುವ ಉಪೇಂದ್ರ ಕನ್ನಡ ಚಿತ್ರರಂಗದ ಹೊಸತನದ ಹರಿಕಾರ. ಅವರು ನಿರ್ದೇಶಿಸಿದ ಎಲ್ಲ ಚಿತ್ರಗಳು ಸೂಪರ್ ಹಿಟ್. ಒಂದಕ್ಕೊಂದು ಭಿನ್ನ ಕತೆ ಆಯ್ದುಕೊಳ್ಳುವ ಉಪೇಂದ್ರ ನಿರ್ದೇಶಕ ಕಾಶಿನಾಥ್ ಗರಡಿಯಲ್ಲಿ ಪಳಗಿದವರು. ತಮ್ಮ ಪ್ರತಿಯೊಂದು ಚಿತ್ರದಲ್ಲಿ ಸಮಾಜಕ್ಕೆ ಒಂದೆಲ್ಲಾ ಒಂದು ಸಂದೇಶ ನೀಡುತ್ತಲೇ ಬಂದಿರುವ ಉಪೇಂದ್ರ ಅವರ ಸಾಧನೆಗೆ ಮತ್ತೊಂದು ಗರಿ ಸಿಕ್ಕಂತಾಗಿದೆ.[ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!]

ಡಾ. ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಶಿವರಾಜ್ ಕುಮಾರ್ ಅವರಿಗೂ ವಿವಿಧ ವಿವಿಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದವು.

English summary
Real Star Upendra is on a high! After playing reel Doctor role in Uppi Dada MBBS, Upendra now becomes real doctor! Confused? Well, let us clarify you guys that, Uppi 2 star is now a honourable doctor.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada