twitter
    For Quick Alerts
    ALLOW NOTIFICATIONS  
    For Daily Alerts

    ಸೋತವರೇ ಸೇರಿ ವಿಶ್ವಕ್ಕೆ ನಂ.1 ಆದ 'ಮನಿ ಹೈಸ್ಟ್' ಕತೆ

    |

    ಸೋತವರೇ ಸೇರಿಕೊಂಡು ಮಾಡಿದ ಪ್ರಯತ್ನ ಇಂದು ವಿಶ್ವಕ್ಕೇ ನಂ 1 ಆಗಿದೆ. ಕನಿಷ್ಟ ನಿರೀಕ್ಷೆ ಇಟ್ಟು ಮಾಡಿದ್ದ ಧಾರಾವಾಹಿಯೊಂದು ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಪಡೆದಿದೆ. ಅದೇ 'ಮನಿ ಹೈಸ್ಟ್'.

    ಕೆಂಪು ಬಣ್ಣದ ಜರ್ಸಿ ತೊಟ್ಟು ಮೇಲೆ ತಿರುವಿದ ಮೀಸೆಯ ಮುಖವಾಡ ಹಾಕಿದ ಕಳ್ಳರು, ಬ್ಯಾಂಕ್‌ ಅನ್ನು ದೋಚುವ ರೋಮಾಂಚಕ ಕತೆಯುಳ್ಳ ವೆಬ್ ಸೀರೀಸ್ ಮನಿ ಹೈಸ್ಟ್‌, ಇಂದು ನೆಟ್‌ಫ್ಲಿಕ್ಸ್‌ ನ ಚಿನ್ನದ ಮೊಟ್ಟೆ ಇಡುವ ಕೋಳಿ! ಆದರೆ ಇದೇ ವೆಬ್ ಸೀರೀಸ್‌ ಮೂರು ವರ್ಷದ ಹಿಂದೆ ಫ್ಲಾಫ್ ಶೋ ಆಗಿತ್ತು ಎಂದರೆ ನೀವು ನಂಬಲೇ ಬೇಕು.

    2017 ಸ್ಪ್ಯಾನಿಷ್ ಭಾಷೆಯಲ್ಲಿ ತಯಾರಾದ 'ಲಾ ಕಾಸಾ ಡಿ ಪ್ಯಾಪೆಲ್' (ಇಂಗ್ಲಿಷ್‌ ನಲ್ಲಿ ಮನಿ ಹೈಸ್ಟ್) ಮೊದಲಿಗೆ ಆಂಟೆನಾ 3 ಎಂಬ ಚಾನೆಲ್‌ನಲ್ಲಿ ಧಾರಾವಾಹಿಯಾಗಿ ಪ್ರಸಾರವಾಯಿತು.

    ಧಾರಾವಾಹಿಯ ಮೊದಲ ಶೋ ಚೆನ್ನಾಗಿ ಪ್ರೇಕ್ಷಕರನ್ನು ಸೆಳೆಯಿತಾದರೂ ಎರಡನೇ ಶೋ ನಿಂದಲೇ ಟಿಆರ್‌ಪಿ ಇಳಿಯಲಾರಂಭಿಸಿತು. ಎಷ್ಟೆಂದರೆ ಕೊನೆ ಶೋ ಪ್ರಸಾರವಾಗುವ ಹೊತ್ತಿಗೆ ಮನಿ ಹೈಸ್ಟ್ ನಿರ್ಮಾಪಕರು, ನಿರ್ದೇಶಕರು, ನಟರುಗಳು ಬೇರೆ-ಬೇರೆ ಪ್ರಾಜೆಕ್ಟ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ತಯಾರಾಗಿದ್ದರು. ಆದರೆ ಆ ನಂತರ ಆಗಿದ್ದು ಪವಾಡ.

    ಖ್ಯಾತ ಅಮೆರಿಕ ಶೋಗಳನ್ನೂ ಹಿಂದೂಡಿತು

    ಖ್ಯಾತ ಅಮೆರಿಕ ಶೋಗಳನ್ನೂ ಹಿಂದೂಡಿತು

    ಮನಿ ಹೈಸ್ಟ್ ಅನ್ನು ನೆಟ್‌ಫ್ಲಿಕ್ಸ್‌ ಖರೀದಿ ಮಾಡಿತು. ಮೊದಲ ಪಾರ್ಟ್‌ ನ 13 ಎಪಿಸೋಡ್‌ಗಳು ನೆಟ್‌ಫ್ಲಿಕ್ಸ್‌ ಗೆ ಅಪ್‌ಲೋಡ್ ಆಗಿ ಕೆಲವೇ ದಿನಗಳಲ್ಲಿ ಈ ಶೋ ನಂ.1 ಶೋ ಆಗಿಬಿಟ್ಟಿತು. ಖ್ಯಾತ ಅಮೆರಿಕದ ಟಿವಿ ಶೋಗಳನ್ನೂ ಸಹ ಹಿಂದಿಕ್ಕಿತು ನಂ1 ಆಗಿ ಮೆರೆಯಿತು ಮನಿ ಹೈಸ್ಟ್.

    ಸೋತವರೇ ನಿರ್ಮಿಸಿದ್ದ ಧಾರಾವಾಹಿ ಮನಿ ಹೈಸ್ಟ್

    ಸೋತವರೇ ನಿರ್ಮಿಸಿದ್ದ ಧಾರಾವಾಹಿ ಮನಿ ಹೈಸ್ಟ್

    ವಿಷಯವೇನೆಂದರೆ ಈ ವೆಬ್ ಸೀರೀಸ್‌ ಅನ್ನು ಸೋತವರೇ ಸೇರಿ ನಿರ್ಮಿಸಿದ್ದರು. ಹೌದು, ಪಾತ್ರವರ್ಗ, ನಿರ್ದೇಶಕರು, ನಿರ್ಮಾಪಕರು ಒಂದಲ್ಲಾ ಒಂದು ರೀತಿ ತಮ್ಮ ವೃತ್ತಿ, ಜೀವನದಲ್ಲಿ ಸೋತವರೇ ಆಗಿದ್ದರು. ಯಾರಿಗೂ ದೊಡ್ಡ ಹಿನ್ನೆಲೆ ಇರಲಿಲ್ಲ, ದೊಡ್ಡ ಅನುಭವ ಇರಲಿಲ್ಲ, ಆದರೆ ಎಲ್ಲರೂ ಒಟ್ಟಾಗಿ ಪ್ರಯತ್ನಕ್ಕೆ ಕೈ ಹಾಕಿದ್ದರು. ಪತ್ರಕರ್ತನಾಗಿದ್ದ ಮನಿ ಹೈಸ್ಟ್ ಲೇಖಕ ಅಲೆಕ್ಸ್ ಪೀನಾ ಸಹ ಆ ಮುಂಚೆ ದೊಡ್ಡ ಯಶಸ್ಸನ್ನು ಕಂಡಿರಲಿಲ್ಲ.

    ಮನಿ ಹೈಸ್ಟ್‌ ಪಾತ್ರಗಳಲ್ಲೂ ಅದೇ ಕಾಣುತ್ತದೆ

    ಮನಿ ಹೈಸ್ಟ್‌ ಪಾತ್ರಗಳಲ್ಲೂ ಅದೇ ಕಾಣುತ್ತದೆ

    ಸೂಕ್ಷ್ಮವಾಗಿ ಗಮನಿಸಿದರೆ ಮನಿ ಹೈಸ್ಟ್‌ನ ಎಲ್ಲಾ ಮುಖ್ಯ ಪಾತ್ರಗಳೂ ಸಹ ಸೋತ ಪಾತ್ರಗಳೇ ಆಗಿವೆ. ಟೋಕಿಯೋ ಪಾತ್ರ ಬ್ಯಾಂಕ್ ರಾಬರಿ ಮಾಡುವಾಗ ಬಾಯ್‌ಫ್ರೆಂಡ್ ಅನ್ನು ಕಳೆದುಕೊಂಡಿದ್ದಾಳೆ, ನೈರೋಬಿ ಮಗುವನ್ನು ಕಳೆದುಕೊಂಡಿದ್ದಾಳೆ. ಡೆನ್ವರ್ ತಾಯಿಯನ್ನು, ಮಾಸ್ಕೊ ಹೆಂಡತಿಯನ್ನು, ಬರ್ಲಿನ್‌ ಗೆ ಜೀವ ತೆಗೆಯುವ ಕಾಯಿಲೆ ಹಿಂದೆ ಬಿದ್ದಿದೆ. ಫ್ರೊಫೆಸರ್‌ ಬಾಲ್ಯದ ಅವಮಾನ, ಬಡತನ ಬೆನ್ನಿಗೆ ಬಿಡದೆ ಕಾಡುತ್ತಿದೆ. ಹೀಗೆ ಎಲ್ಲಾ ಪಾತ್ರಗಳಿಗೂ ಇನ್ನು ಕಳೆದುಕೊಳ್ಳಲು ಏನೂ ಇಲ್ಲ.

    ಮುಖವಾಡ ಹಾಕಿ ಪ್ರತಿಭಟನೆ ಮಾಡಿದ ಲಕ್ಷಾಂತರ ಜನ

    ಮುಖವಾಡ ಹಾಕಿ ಪ್ರತಿಭಟನೆ ಮಾಡಿದ ಲಕ್ಷಾಂತರ ಜನ

    ಹಣವಂತ ಬ್ಯಾಂಕ್‌ಗಳ 'ಪ್ರತಿರೋಧಿ'ಗಳಾಗಿ ಈ ಕಳ್ಳರ ಗ್ಯಾಂಗ್ ಗುರುತಿಸಿಕೊಳ್ಳುತ್ತದೆ. ಎಷ್ಟರ ಮಟ್ಟಿಗೆ ಈ ವೆಬ್‌ ಸೀರೀಸ್ ವಿಶ್ವದಾದ್ಯಂತ ಪರಿಣಾಮ ಬೀರಿದೆಯೆಂದರೆ, ಅಮೆರಿಕ, ಇಟಲಿ, ಆಫ್ರಿಕಾ, ಅರ್ಜೆಂಟೀನಾ ಇನ್ನೂ ಹಲವು ಕಡೆಗಳಲ್ಲಿ ಪ್ರತಿಭಟನೆಗಳಲ್ಲಿ ಅದೇ ಕೆಂಪು ಜರ್ಸಿ, ಡಾಲಿ ಮುಖವಾಡ ಕಾಣಿಸಿಕೊಂಡಿತು. ಪ್ರತಿರೋಧದ ದನಿಯಾಗಿ ಮನಿಹೈಸ್ಟ್‌ ಗುರುತಿಸಿಕೊಂಡಿತು.

    ನಾಲ್ಕನೇ ಭಾಗ ಬಿಡುಗಡೆ ಆಗಿದೆ

    ನಾಲ್ಕನೇ ಭಾಗ ಬಿಡುಗಡೆ ಆಗಿದೆ

    ಇದೀಗ ನಾಲ್ಕು ದಿನಗಳ ಹಿಂದೆ ಮನಿ ಹೈಸ್ಟ್‌ ನ ನಾಲ್ಕನೇ ಭಾಗ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ. ರಾಯಲ್ ಮೀಂಟ್ ಆಫ್ ಸ್ಪೇನ್‌ನಿಂದ ಚಿನ್ನವನ್ನು ಕದಿಯುವ ಯತ್ನದಲ್ಲಿ ಇನ್ನೇನು ಸಫಲವಾಗುತ್ತಿದೆ ಫ್ರೊಫೆಸರ್ ಮತ್ತು ತಂಡ. ನಾಲ್ಕನೇ ಭಾಗ ಬಿಡುಗಡೆ ಆದಾಗಿನಿಂದಲೂ ಮನಿ ಹೈಸ್ಟ್ ನಂ.1 ಸ್ಥಾನದಲ್ಲಿದೆ.

    English summary
    Money Heist become best show if Netflix right now. Here is the story of Money Heist. What are their struggles.
    Tuesday, April 7, 2020, 20:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X