For Quick Alerts
  ALLOW NOTIFICATIONS  
  For Daily Alerts

  ರಚನಾಗೆ ಟಾರ್ಚರ್ ಕೊಟ್ರಾ ಹುಚ್ಚ ವೆಂಕಟ್ ಫ್ಯಾನ್ಸ್.! ಕಾರಣ ಈ ಡೈಲಾಗ್

  By Bharath Kumar
  |

  ಹುಚ್ಚ ವೆಂಕಟ್ ಬಗ್ಗೆ ತಿಳಿದುಕೊಂಡಿರುವರಿಗೆ ರಚನಾ ಎಂಬ ಹೆಸರು ಚಿರಪರಿಚಿತ. ಯಾಕಂದ್ರೆ, ಈ ಹಿಂದೆ 'ಸೂಪರ್ ಜೋಡಿ' ಎಂಬ ರಿಯಾಲಿಟಿ ಶೋ ಒಂದರಲ್ಲಿ ರಚನಾ ಮತ್ತು ವೆಂಕಟ್ ಇಬ್ಬರು ಒಟ್ಟಿಗೆ ಭಾಗವಹಿಸಿದ್ದರು. ಈ ಶೋ ಮುಗಿದ ನಂತರ 'ರಚನಾ ನನ್ನ ಪ್ರೇಯಸಿ' ಎಂದು ಹೇಳಿ ವೆಂಕಟ್ ಸಂಚಲನ ಸೃಷ್ಟಿಸಿದ್ದರು.

  ವೆಂಕಟ್ 'ಹುಚ್ಚು' ಪ್ರೀತಿ ಬಗ್ಗೆ 'ಸೂಪರ್ ಜೋಡಿ' ರಚನಾ ಬಿಚ್ಚಿಟ್ಟ ರಿಯಲ್ ಕಹಾನಿವೆಂಕಟ್ 'ಹುಚ್ಚು' ಪ್ರೀತಿ ಬಗ್ಗೆ 'ಸೂಪರ್ ಜೋಡಿ' ರಚನಾ ಬಿಚ್ಚಿಟ್ಟ ರಿಯಲ್ ಕಹಾನಿ

  ''ರಚನಾ ನನ್ನನ್ನು ಪ್ರೀತಿಸಿ ಮೋಸ ಮಾಡಿದ್ದಾರೆ, ಮದುವೆಯಾಗುವುದಾಗಿ ನಂಬಿಸಿದ್ದರು'' ಎಂದೆಲ್ಲಾ ಹುಚ್ಚ ವೆಂಕಟ್ ಆರೋಪ ಮಾಡಿದ್ದರು. ಆಮೇಲೆ ಈ ವಿವಾದ ತಣ್ಣಗಾಗಿತ್ತು. ಈ ಘಟನೆ ನಡೆದ ಸುಮಾರು ಒಂದು ವರ್ಷ ಆಗಿರಬಹುದು. ಈಗ ಹುಚ್ಚ ವೆಂಕಟ್ ಅಭಿಮಾನಿಗಳು ರಚನಾ ವಿರುದ್ಧ ಆಕ್ರೋಶಗೊಂಡಿದ್ದಾರೆ.

  ಅದಕ್ಕೆ ಕಾರಣ ರಚನಾ ಅಭಿನಯಿಸಿರುವ ಹೊಸ ಸಿನಿಮಾ. ಈ ಸಿನಿಮಾದ ಡೈಲಾಗ್ ಈಗ ವೆಂಕಟ್ ಅಭಿಮಾನಿಗಳು ಮತ್ತು ರಚನಾ ಮಧ್ಯೆ ವಾರ್ ಗೆ ಕಾರಣವಾಗಿದೆ. ಅಷ್ಟಕ್ಕೂ, ಆ ಡೈಲಾಗ್ ಏನು.? ಆ ಸಿನಿಮಾ ಯಾವುದು.? ಮುಂದೆ ಓದಿ.....

  'ಸಮರ್ಥ' ಚಿತ್ರದ ಸಂಭಾಷಣೆಯಿಂದ ವಿವಾದ

  'ಸಮರ್ಥ' ಚಿತ್ರದ ಸಂಭಾಷಣೆಯಿಂದ ವಿವಾದ

  ರವಿ ಸಿರೂರು ಮತ್ತು ರಚನಾ ನಾಯಕ, ನಾಯಕಿಯಾಗಿ ಅಭಿನಯಿಸಿರುವ 'ಸಮರ್ಥ' ಸಿನಿಮಾ ಕಳೆದ ವಾರ ತೆರೆಕಂಡಿದೆ. ಈ ಸಿನಿಮಾದಲ್ಲಿ ಒಂದು ಡೈಲಾಗ್ ಇದ್ದು, ಅದು ಅಶ್ಲೀಲವಾಗಿದೆ ಮತ್ತು ಹುಚ್ಚ ವೆಂಕಟ್ ಅವರ 'ಮಾಜಿ ಪ್ರೇಯಸಿ ನೀವು, ನಿಮ್ಮ ಬಗ್ಗೆ ಕೆಟ್ಟದಾಗಿದೆ' ಎಂದು ಹುಚ್ಚ ವೆಂಕಟ್ ಅಭಿಮಾನಿಗಳು, ದೂರವಾಣಿ ಮೂಲಕ ರಚನಾ ಹಾಗೂ ನಾಯಕ ರವಿ ಸಿರೂರು ಅವರಿಗೆ ತೊಂದರೆ ಕೊಡ್ತಿದ್ದಾರಂತೆ.

  ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಹುಚ್ಚ ವೆಂಕಟ್ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಹುಚ್ಚ ವೆಂಕಟ್

  ಏನಿದೆ ಆ ಡೈಲಾಗ್ ನಲ್ಲಿ.?

  ಏನಿದೆ ಆ ಡೈಲಾಗ್ ನಲ್ಲಿ.?

  ಸರಿ, ಏನಪ್ಪಾ ಅಂತಹ ಡೈಲಾಗ್ ಅಂತ ನೋಡಿದ್ರೆ, ''ಚಾನ್ಸ್ ಕೊಟ್ಟು ನೋಡು ಮಂಚದಲ್ಲಿ ಮಗು ಕೊಡ್ತೀನಿ'' ಎಂದು ನಾಯಕ ರವಿ ಸಿರೂರು ನಾಯಕಿ ರಚನಾ ಅವರ ಬಳಿ ಹೇಳುವ ಸಂಭಾಷಣೆಯಂತೆ. ಅಂದ್ಹಾಗೆ, ಈ ಡೈಲಾಗ್ ಟ್ರೈಲರ್ ನಲ್ಲಿಲ್ಲ. ಸಿನಿಮಾದಲ್ಲಿದೆಯಂತೆ.

  ಹುಚ್ಚ ವೆಂಕಟ್ ಮಾಡಿಸಿರಬಹುದಾ.?

  ಹುಚ್ಚ ವೆಂಕಟ್ ಮಾಡಿಸಿರಬಹುದಾ.?

  ಲಗ್ಗರೆ ಕಾಯಿನ್ ಬೂತ್ ನಿಂದ ರವಿ ಸಿರೂರು ಮತ್ತು ರಚನಾ ಇಬ್ಬರಿಗೂ ಹೆಚ್ಚು ವೆಂಕಟ್ ಅಭಿಮಾನಿಗಳು ಎಂದು ಹೇಳಿಕೊಂಡು ಫೋನ್ ಮಾಡಿ, ಅಶ್ಲೀಲ ಪದಗಳಿನಿಂದ ನಿಂದಿಸಿದ್ದಾರಂತೆ. ಇದರಿಂದ ಆತಂಕಗೊಂಡ ರಚನಾ ಪೊಲೀಸ್ ದೂರು ನೀಡಿದ್ದಾರಂತೆ. ಇನ್ನು ಹಳೇ ದ್ವೇಷದ ಹಿನ್ನೆಲೆ ಹುಚ್ಚ ವೆಂಕಟ್ ಅವರೆ ಮಾಡಿಸಿರಬಹುದಾ ಎಂಬ ಅನುಮಾನವನ್ನ ರಚನಾ ವ್ಯಕ್ತಪಡಿಸುತ್ತಾರೆ.

  'ಸೂಪರ್ ಜೋಡಿ'ಗೂ ಮೊದಲೇ ವೆಂಕಟ್-ರಚನಾಗೆ ಪರಿಚಯವಿತ್ತು.!'ಸೂಪರ್ ಜೋಡಿ'ಗೂ ಮೊದಲೇ ವೆಂಕಟ್-ರಚನಾಗೆ ಪರಿಚಯವಿತ್ತು.!

  ಗರಂ ಆದ ಹುಚ್ಚ ವೆಂಕಟ್

  ಗರಂ ಆದ ಹುಚ್ಚ ವೆಂಕಟ್

  ಇನ್ನು ಈ ಬಗ್ಗೆ ಹುಚ್ಚ ವೆಂಕಟ್ ಸ್ಪಷ್ಟನೆ ನೀಡಿದ್ದು, ''ಬಹುಶಃ ಸಿನಿಮಾ ಪಬ್ಲಿಸಿಟಿಗೋಸ್ಕರ ಮಾಡ್ತಿದ್ದಾರೆ ಅನಿಸುತ್ತೆ, ನಾನು ಅದನ್ನ ಮೆರೆತು ಒಂದು ವರ್ಷ ಆಗಿದೆ. ಹೆಣ್ಣು ಮಕ್ಕಳಂದ್ರೆ ನನಗೆ ಗೌರವ. ನಾನು ಅವರಿಗೆ ತೊಂದರೆ ಕೊಡ್ತೀನಾ.? ನನ್ನ ಅಭಿಮಾನಿಗಳನ್ನ ನಿಯಂತ್ರಿಸುವುದಕ್ಕೆ ಆಗಲ್ಲ'' ಎಂದಿದ್ದಾರೆ.

  English summary
  Kannada actress, 'super jodi' reality show ex contestant rachana has given complaint against huccha venkat fans

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X