»   » ಹರಿಪ್ರಿಯಾಗೆ ನಾಚಿಕೆ ಆಗಲ್ವಾ? 'ನೀರ್ ದೋಸೆ' ರುಬ್ಬಿದ್ದು ದುಡ್ಡಿಗಾಗಿ?

ಹರಿಪ್ರಿಯಾಗೆ ನಾಚಿಕೆ ಆಗಲ್ವಾ? 'ನೀರ್ ದೋಸೆ' ರುಬ್ಬಿದ್ದು ದುಡ್ಡಿಗಾಗಿ?

Posted By:
Subscribe to Filmibeat Kannada

''ನಿಮಗೆ ನಾಚಿಕೆ ಆಗಲ್ವಾ.? ಒಂದು ಹೆಣ್ಣಾಗಿ ಸಿಗರೇಟ್, ಡ್ರಿಂಕ್ಸ್ ತಗೋತೀರಾ.? ಪಬ್ಲಿಸಿಟಿ ಗೋಸ್ಕರ ಮಾಡಿದ್ರಾ.? ದುಡ್ಡಿಗಾಗಿ ಮಾಡಿದ್ರಾ.? ತಪ್ಪು....ಇನ್ಮೇಲೆ ಯಾವ ಐಟಂ ಸಾಂಗ್ ಮಾಡಬಾರದು''

- ಹೀಗಂತ ನಟಿ ಹರಿಪ್ರಿಯಾ ರವರಿಗೆ ಕಟ್ಟೆಚ್ಚರ ನೀಡಿರುವುದು 'ಫೈರಿಂಗ್ ಸ್ಟಾರ್' ಹುಚ್ಚ ವೆಂಕಟ್. ['ನೀರ್ ದೋಸೆ'ಯಲ್ಲಿ ಎಂತೆಂಥಾ ಡೈಲಾಗುಗಳಿವೆ ಗೊತ್ತಾ?]


'ದುಂಡುಮಲ್ಲಿಗೆ' ಹರಿಪ್ರಿಯಾ 'ಕಾಲ್ ಗರ್ಲ್' ಪಾತ್ರದಲ್ಲಿ ಅಭಿನಯಿಸಿರುವ 'ನೀರ್ ದೋಸೆ' ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ ಸಮಾರಂಭ ಮೊನ್ನೆಮೊನ್ನೆಯಷ್ಟೇ ಬೆಂಗಳೂರಿನ ETA ಮಾಲ್ ನಲ್ಲಿ ಅದ್ಧೂರಿಯಾಗಿ ನಡೆದಿತ್ತು.


ಡಬಲ್ ಮೀನಿಂಗ್ ಡೈಲಾಗ್ ಗಳೇ ತುಂಬಿ ತುಳುಕಿರುವ 'ನೀರ್ ದೋಸೆ' ಚಿತ್ರದ ಟ್ರೈಲರ್ ಹಾಗೂ ಅದರಲ್ಲಿ ಇರುವ ಹರಿಪ್ರಿಯಾ ರವರ ಬಿಸಿ ಬಿಸಿ ಅವತಾರ ಕಂಡು ಹುಚ್ಚ ವೆಂಕಟ್ ಕೆರಳಿದ್ದಾರೆ. [ಚಿತ್ರಗಳು : 'ನೀರ್ ದೋಸೆ' ಚಿತ್ರದಲ್ಲಿ ಹರಿಪ್ರಿಯಾ ಹಸಿ ಬಿಸಿ]


'ನೀರ್ ದೋಸೆ' ಚಿತ್ರತಂಡಕ್ಕೆ ಮತ್ತು ಹರಿಪ್ರಿಯಾ ರವರಿಗೆ ತಮ್ಮದೇ ಶೈಲಿಯಲ್ಲಿ ಬೆಂಡೆತ್ತಿ ಬ್ರೇಕ್ ಹಾಕಿರುವ ಹುಚ್ಚ ವೆಂಕಟ್ ವಿಡಿಯೋ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ.


ಈ ಬಾರಿ ಹುಚ್ಚ ವೆಂಕಟ್ ಅಬ್ಬರ ಹೇಗಿದೆ ಅಂತ ಅವರ ಮಾತುಗಳಲ್ಲೇ ಓದಿರಿ, ಕೆಳಗಿರುವ ಸ್ಲೈಡ್ ಗಳಲ್ಲಿ.....


'ನೀರ್ ದೋಸೆ' ಓಡಲ್ಲ.!

''ನನ್ ಮಗಂದ್...'ನೀರ್ ದೋಸೆ' ಟೀಮ್ ಗೆ ಹೇಳ್ತಾಯಿರೋದು. ನಿಮ್ಮ ಪಿಕ್ಚರ್ ಓಡುತ್ತೆ ಅಂದ್ಕೊಂಡ್ರಾ..? 100% ಓಡಲ್ಲ'' - ಹುಚ್ಚ ವೆಂಕಟ್ ['ನೀರ್ ದೋಸೆ' ಬೇಡ ಅಂತ ತಳ್ಳಿದ ರಮ್ಯಾ ಬಗ್ಗೆ ಚಿತ್ರದಲ್ಲಿ ಕೊಂಕು ನುಡಿ.?!]


ಹೆಣ್ಮಕ್ಕಳನ್ನ ಕೆಟ್ಟದಾಗಿ ತೋರಿಸಿದ್ರೆ...

''ಹೆಣ್ಮಕ್ಕಳನ್ನ ಕೆಟ್ಟದಾಗಿ ತೋರಿಸಿ, ಪಿಕ್ಚರ್ ಓಡುತ್ತೆ ಅಂದುಕೊಂಡ್ರೆ, ಅದು ಓಡಲ್ಲ. ಕರ್ನಾಟಕ ಜನತೆಯನ್ನ ನಾನು ಕೇಳಿಕೊಳ್ಳೋದು ಇಷ್ಟೇ. ಇಂತಹ ಸಿನಿಮಾಗಳಿಗೆ ಪ್ರೋತ್ಸಾಹ ಕೊಡಬೇಡಿ'' - ಹುಚ್ಚ ವೆಂಕಟ್ [ಮಂಡ್ಯ ಮಾಜಿ ಸಂಸದೆ ರಮ್ಯಾಗೆ ಹುಚ್ಚ ವೆಂಕಟ್ ಫುಲ್ ಆವಾಝ್.!]


ನಮ್ಮ ಸಂಸ್ಕೃತಿ, ಸಂಪ್ರದಾಯ ಇದೇನಾ.?

''ಬೀಡಿ, ಸಿಗರೇಟ್ ಸೇದ್ತಾರಂತೆ, ಡ್ರಿಂಕ್ಸ್ ಮಾಡ್ತಾರಂತೆ. ಏನ್ರೀ ನಮ್ಮ ಸಂಸ್ಕೃತಿ, ಸಂಪ್ರದಾಯ.? ಇಡೀ ಭಾರತದಲ್ಲಿ ಕರ್ನಾಟಕ ಅಂದ್ರೆ ಯಾವ ಮಟ್ಟಕ್ಕೆ ಇತ್ತು. ಇಂತಹ ಕಚಡಾ ಡೈರೆಕ್ಟರ್, ಪ್ರೊಡ್ಯೂಸರ್ ಗಳಿಂದ ಇವತ್ತು ಹೆಂಗಾಗಿದೆ ನೋಡ್ರಿ..!'' - ಹುಚ್ಚ ವೆಂಕಟ್


ಹರಿದು ಬಿಸಾಕಿ.!

''ಕರ್ನಾಟಕ ಜನತೆಗೆ ನಾನು ಹೇಳೋದು ಏನು ಅಂದ್ರೆ, ಕಚಡಾ ಪೋಸ್ಟರ್ ಗಳು ಹಾಕಿದ್ರೆ ಹರಿದು ಬಿಸಾಕಿ. ಅಶ್ಲೀಲ ಸಿನಿಮಾಗಳಿಗೆ ಹೋಗಲೇಬೇಡಿ. ಅವರು ಬೀದಿಗೆ ಬರಬೇಕು, ಭಿಕ್ಷೆ ಬೇಡ ಬೇಕು. ಹಂಗೆ ಮಾಡಿ'' - ಹುಚ್ಚ ವೆಂಕಟ್


ಟ್ರೈಲರ್ ಹೇಗಿದೆ ಗೊತ್ತಾ.?

''ಟ್ರೈಲರ್ ಬಿಟ್ಟಿದ್ದಾರೆ. ಅದು ಹೇಗಿದೆ ಗೊತ್ತಾ.? ಒಂದು ಹೆಣ್ಣಿಗೆ ಗೌರವ ಇದೆ. ಇವತ್ತು ಭಾರತ ಇಡೀ ಪ್ರಪಂಚದಲ್ಲಿ ಗ್ರೇಟ್ ಆಗಿರುವುದು ಹೆಣ್ಣಿನ ವಿಚಾರಕ್ಕೆ. ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಕ್ಕೆ. ಅದನ್ನ ಇವರೆಲ್ಲಾ ಕೆಡಿಸುತ್ತಾ ಇದ್ದಾರೆ'' - ಹುಚ್ಚ ವೆಂಕಟ್


ಹೋರಾಟ ಮಾಡಬೇಕು.!

''ಕನ್ನಡ ಸಂಘಟನೆಗಳೆಲ್ಲಾ ಹೋರಾಟ ಮಾಡುತ್ತೀರಿ. ಈ ವಿಷಯಕ್ಕೆ ಯಾಕೆ ಹೋರಾಡಲ್ಲ.? ಐಟಂ ಸಾಂಗ್ ಬ್ಯಾನ್ ಆಗ್ಬೇಕು. ಅಶ್ಲೀಲ ತೋರಿಸಬಾರದು ಅಂತ ಯಾರೂ ಯಾಕೆ ಹೋರಾಡಲ್ಲ.? ತಪ್ಪಲ್ವಾ.? ನಮ್ಮ ಮನೆಯಲ್ಲೂ ಹೆಣ್ಮಕ್ಕಳು ಇದ್ದಾರೆ ಅಲ್ವಾ.?'' - ಹುಚ್ಚ ವೆಂಕಟ್


ಕಣ್ಣು ಕಿತ್ತು ಬಿಡ್ತೀನಿ.!

''ಹೆಣ್ಮಕ್ಕಳನ್ನು ಪ್ರೀತಿಯಿಂದ ನೋಡಿ, ಗೌರವದಿಂದ ನೋಡಿ, ಅಶ್ಲೀಲವಾಗಿ ನೋಡಿದರೆ ಕಣ್ಣು ಕಿತ್ತು ಬಿಡ್ತೀನಿ'' - ಹುಚ್ಚ ವೆಂಕಟ್


ನಾಚಿಕೆ ಆಗಲ್ವಾ.?

''ಹರಿಪ್ರಿಯಾ ಅವರೇ, ನೀವು ಈ ಪಾತ್ರ ಮಾಡಿದ್ದೀರಾ. ನಿಮಗೆ ನಾಚಿಕೆ ಆಗಲ್ವಾ.? ಒಂದು ಹೆಣ್ಣಾಗಿ ಸಿಗರೇಟ್, ಡ್ರಿಂಕ್ಸ್.? ಪಬ್ಲಿಸಿಟಿ ಗೋಸ್ಕರ ಮಾಡಿದ್ರಾ.? ದುಡ್ಡಿಗಾಗಿ ಮಾಡಿದ್ರಾ.? ತಪ್ಪು ಇನ್ಮೇಲೆ ಯಾವ ಐಟಂ ಸಾಂಗ್ ಮಾಡಬಾರದು'' - ಹುಚ್ಚ ವೆಂಕಟ್


ವಿಡಿಯೋ ನೋಡಿ....

'ನೀರ್ ದೋಸೆ' ವಿರುದ್ಧ ಹುಚ್ಚ ವೆಂಕಟ್ ಕಣ್ಣು ಕೆಂಪಗೆ ಮಾಡಿಕೊಂಡು ಮಾತನಾಡಿರುವ ವಿಡಿಯೋ ಇಲ್ಲಿದೆ. ಈ ಲಿಂಕ್ ಕ್ಲಿಕ್ ಮಾಡಿ....


English summary
Huccha Venkat is annoyed with Kannada Actress Haripriya's hot look in Kannada Movie 'Neer Dose'. Watch the video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada