»   » ಕಡೆಗೂ ಶಿವಣ್ಣನಿಗೆ ಕ್ಷಮೆ ಕೇಳಿದ ಹುಚ್ಚ ವೆಂಕಟ್

ಕಡೆಗೂ ಶಿವಣ್ಣನಿಗೆ ಕ್ಷಮೆ ಕೇಳಿದ ಹುಚ್ಚ ವೆಂಕಟ್

Posted By:
Subscribe to Filmibeat Kannada

ಬೆಳ್ಳಂಬೆಳಗ್ಗೆಯೇ ಶಿವರಾಜ್ ಕುಮಾರ್ ಬಗ್ಗೆ ವಿಡಿಯೋ ಒಂದರಲ್ಲಿ ಏನೇನೋ ಮಾತಾಡಿ ಶಿವ'ಭಕ್ತ'ರನ್ನ ಹುಚ್ಚ ವೆಂಕಟ್ ಕೆರಳಿಸಿದ್ದರು. ಶಿವಣ್ಣನ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದ ಹುಚ್ಚ ವೆಂಕಟ್ ಗೆ ಸೆಂಚುರಿ ಸ್ಟಾರ್ ಫ್ಯಾನ್ಸ್ ಛೀಮಾರಿ ಹಾಕಿದರು. ಇದೀಗ, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಹುಚ್ಚ ವೆಂಕಟ್ ಕ್ಷಮೆ ಕೇಳಿದ್ದಾರೆ.

ಎರಡು ದಿನಗಳಿಂದ ಶಿವರಾಜ್ ಕುಮಾರ್ ಅವರನ್ನ ಭೇಟಿ ಮಾಡಲು ಹುಚ್ಚ ವೆಂಕಟ್ ಪ್ರಯತ್ನ ಪಟ್ಟಿದ್ದರು. ಆದ್ರೆ, ಅವರ ಕೈಗೆ ಶಿವಣ್ಣ ಸಿಕ್ಕಿರಲಿಲ್ಲ. ಮನೆ ಹತ್ತಿರ ಹೋದಾಗ, ಮನೆಯಲ್ಲಿ ಶಿವಣ್ಣ ಇರಲಿಲ್ಲ. ಶಿವಣ್ಣ ಕಾರ್ ಡ್ರೈವರ್ ಹಾಗೂ ಸೆಕ್ಯೂರಿಟಿ ಗಾರ್ಡ್ ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ವಿಡಿಯೋ ಮಾಡಿ, ಅದರಲ್ಲಿ ಶಿವಣ್ಣ ಬಗ್ಗೆ ಹುಚ್ಚ ವೆಂಕಟ್ ಮನಬಂದಂತೆ ಮಾತನಾಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಹುಚ್ಚ ವೆಂಕಟ್ ಮಾಡಿದ್ದ ವಿಡಿಯೋ ನೋಡಿ ಶಿವರಾಜ್ ಕುಮಾರ್ ಫ್ಯಾನ್ಸ್ ರೊಚ್ಚಿಗೆದ್ದರು. ಹುಚ್ಚ ವೆಂಕಟ್ ಗೆ ಸೋಷಿಯಲ್ ಮೀಡಿಯಾದಲ್ಲೇ ಮಹಾ ಮಂಗಳಾರತಿ ಮಾಡಿದರು.

Huccha Venkat apologizes Shiva Rajkumar's fans

ಹುಚ್ಚ ವೆಂಕಟ್ ಗೆ ಉಗಿದು ಉಪ್ಪಿನಕಾಯಿ ಹಾಕಿದ ಶಿವಣ್ಣನ ಅಭಿಮಾನಿಗಳು!

ಇನ್ನೂ ಕೆಲ ಅಭಿಮಾನಿಗಳು ಹುಚ್ಚ ವೆಂಕಟ್ ಮನೆಗೆ ಭೇಟಿ ಕೊಟ್ಟರು. ಆದ್ರೆ, ಅಲ್ಲಿ ಹುಚ್ಚ ವೆಂಕಟ್ ಇರಲಿಲ್ಲ. ಆಗ ಹುಚ್ಚ ವೆಂಕಟ್ ಗೆ ಫೋನ್ ಮಾಡಿದ ಶಿವಣ್ಣನ ಅಭಿಮಾನಿಗಳು ಬಹಿರಂಗವಾಗಿ ಕ್ಷಮೆ ಕೇಳುವಂತೆ ಆಗ್ರಹಿಸಿದರು.

ವಿಡಿಯೋ: ಶಿವಣ್ಣ ಬಗ್ಗೆ ಬಾಯಿಗೆ ಬಂದ್ಹಂಗೆ ಮಾತನಾಡಿರುವ ಹುಚ್ಚ ವೆಂಕಟ್

ಮೊದಮೊದಲು 'ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ' ಎಂದು ಗರ್ವದಿಂದ ಮಾತನಾಡಿದ ಹುಚ್ಚ ವೆಂಕಟ್ ಬಳಿಕ ಶಿವಣ್ಣನ ಅಭಿಮಾನಿಗಳ ಮುಂದೆ ತಲೆಬಾಗಿ ಕ್ಷಮೆ ಕೇಳಿದರು.

ಹುಚ್ಚ ವೆಂಕಟ್ ಕ್ಷಮೆ ಕೇಳಿರುವುದರಿಂದ ಸದ್ಯಕ್ಕೆ ಶಿವಣ್ಣನ ಫ್ಯಾನ್ಸ್ ತಣ್ಣಗಾಗಿದ್ದಾರೆ.

English summary
Huccha Venkat apologizes to Shiva Rajkumar's fans

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada