»   » 'ಪ್ರಥಮ್' ಆತ್ಮಹತ್ಯೆ ಯತ್ನ: ಜೀವನ ಪಾಠ ಹೇಳಿದ ಹುಚ್ಚ ವೆಂಕಟ್!

'ಪ್ರಥಮ್' ಆತ್ಮಹತ್ಯೆ ಯತ್ನ: ಜೀವನ ಪಾಠ ಹೇಳಿದ ಹುಚ್ಚ ವೆಂಕಟ್!

Posted By:
Subscribe to Filmibeat Kannada

'ಒಳ್ಳೆ ಹುಡುಗ' ಪ್ರಥಮ್ ಆತ್ಮಹತ್ಯೆ ಯತ್ನ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿದೆ. 'ಬಿಗ್ ಬಾಸ್' ಕಾರ್ಯಕ್ರಮದ ಮೂಲಕ ಕನ್ನಡ ಜನಗಳ ಪ್ರೀತಿ ಸಂಪಾದನೆ ಮಾಡಿದ್ದ ಪ್ರಥಮ್ ಈಗ ಆತ್ಮಹತ್ಯೆಗೆ ಮುಂದಾಗಿರುವುದು ನಿಜಕ್ಕೂ ಖಂಡನೀಯ.[ಒಳ್ಳೆ ಹುಡುಗ ಪ್ರಥಮ್ ಆತ್ಮಹತ್ಯೆಗೆ ಯತ್ನ!]

ಇದನ್ನ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಕೂಡ ಖಂಡಿಸಿದ್ದಾರೆ. ಅಂದು 'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಮೇಲೆ ಹಲ್ಲೆ ಮಾಡಿದ್ದ ಹುಚ್ಚ ವೆಂಕಟ್, ಇಂದು ಪ್ರಥಮ್ ನಡುವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಹುಚ್ಚ ವೆಂಕಟ್ 'ಒಳ್ಳೆ ಹುಡುಗ'ನಿಗೆ ಜೀವನದ ನೀತಿ ಪಾಠವನ್ನ ಹೇಳಿದ್ದಾರೆ.

ಪ್ರಥಮ್ ಮಾಡಿದ್ದು ಸರಿಯಲ್ಲ!

''ಪ್ರಥಮ್ ಮಾಡಿದ್ದು ನಿಜಕ್ಕೂ ಸರಿಯಲ್ಲ. ಆತ ಜೀವನದಲ್ಲಿ ಸೋತಿಲ್ಲ, ಬದಲಾಗಿ ಗೆದ್ದಿದ್ದಾನೆ. ಗೆದ್ದಿದ್ದರೂ ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು. ನಾನು ಸೋತಾಗಲೂ ಆತ್ಮಹತ್ಯೆಗೆ ಯತ್ನಿಸಿರಲಿಲ್ಲ''- ಹುಚ್ಚ ವೆಂಕಟ್ [ ಪ್ರಥಮ್ ಆತ್ಮಹತ್ಯೆ ಯತ್ನ ಬಳಿಕ ಲೋಕೇಶ್ ಬಿಚ್ಚಿಟ್ಟ ಸ್ಪೋಟಕ ಸುದ್ದಿ!]

ನಾನು ಆತ್ಮಹತ್ಯೆ ಮಾಡ್ಕೋಬೇಕು ಅಂದುಕೊಂಡಿದ್ದೆ!

''ಹುಚ್ಚ ವೆಂಕಟ್ ಸಿನಿಮಾ ಸೋತಾಗ ನಾನೂ ಆತ್ಮಹತ್ಯೆ ಮಾಡಬೇಕಂತ ಅಂದುಕೊಂಡಿದ್ದೆ ಆದರೆ ಸೋಲೇ ಜೀವನವಲ್ಲ. ಅದರಲ್ಲೂ ಗೆದ್ದವರು ಈ ರೀತಿ ಮಾಡಿದರೆ ಮುಟ್ಟಾಳತನ ಎಂದು ಹೇಳಬೇಕಷ್ಟೇ''- ಹುಚ್ಚ ವೆಂಕಟ್ [ನಿದ್ರೆ ಮಾತ್ರೆ ಸೇವಿಸಿದ್ಯಾಕೆ.? 'ಕೊನೆಯ' ಲೈವ್ ನಲ್ಲಿ ಪ್ರಥಮ್ ಬಾಯ್ಬಿಟ್ಟ ಸತ್ಯವೇನು.?]

ನಾವು ಮಾರ್ಗದರ್ಶಿಗಳಾಗಬೇಕು

''ಗೆದ್ದಾಗ ಜವಾಬ್ದಾರಿ ಜಾಸ್ತಿ ಆಗುತ್ತದೆ. ಜನರು ಅವರನ್ನು ಪ್ರೀತಿಸಿದ್ದಾರೆ, ಅವರಿಗೆ ನಾವು ಮಾರ್ಗದರ್ಶಿಗಳಾಗಬೇಕು. ಅವರಿಂದ ಹೆಸರು ಮಾಡಿಕೊಂಡು ಅವರನ್ನು ಮರೆಯಬಾರದು. ವ್ಯಕ್ತಿಯೊಬ್ಬ ಎಲ್ಲರನ್ನೂ ತೃಪ್ತಿಪಡಿಸಲು ಆಗಲ್ಲ, ಆದ್ರೆ ಪ್ರೀತಿಸುವವರನ್ನು ತೃಪ್ತಿಪಡಿಸಬೇಕು. ಜೀವನದಲ್ಲಿ ಹೊಗಳಿಕೆ ಇದ್ದರೆ ತೆಗಳುವವರೂ ಇರುತ್ತಾರೆ. ಹೀಗಾಗಿ ಸಣ್ಣ ಪುಟ್ಟ ವಿಚಾರಗಳಿಗೆ ಹೀಗೆ ಸೂಸೈಡ್ ಮಾಡಿಕೊಳ್ಳುತ್ತೇನೆ ಎನ್ನುವುದು ತಪ್ಪು'' - ಹುಚ್ಚ ವೆಂಕಟ್ [ಲೋಕಲ್ ಲೋಕಿ ಮತ್ತು ಪ್ರಥಮ್ ಕಿತ್ತಾಟಕ್ಕೆ ಅಸಲಿ ಕಾರಣ ಇದೇ!]

ತಂದೆ-ತಾಯಿ ಬಿಟ್ಟರೇ ಬೇರೆ ಯಾರು ಬರಲ್ಲ

''ಪ್ರಥಮ್ ವಯಸ್ಸು ಇನ್ನೂ ಚಿಕ್ಕದು, ಸಾಧಿಸುವುದು ಬಹಳ ಇದೆ. ಯಾರೋ ಫ್ರೆಂಡ್ ಏನೋ ಹೇಳಿದನೆಂದು ಹೀಗೆ ಮಾಡುವುದು ತಪ್ಪು. ಜನ್ಮ ಕೊಟ್ಟ ತಂದೆ ತಾಯಿ, ಕಟ್ಟಿಕೊಂಡ ಹೆಂಡತಿ ಅದು ಬಿಟ್ರೆ ಬೇರೆ ಯಾವ ಸಂಬಂಧಗಳು ಉಳಿಯುವುದಿಲ್ಲ. ಅವರಿಗಾಗಿ ಪ್ರಾಣ ಕೊಟ್ರೆ ಅರ್ಥ ಇರುತ್ತೆ, ಆದರೆ ಗೆಳೆಯನ ಜೊತೆ ಜಗಳವಾಯಿತೆಂದು ಜೀವ ಕೊಟ್ಟರೆ ಅದು ಮೂರ್ಖತನ''- ಹುಚ್ಚ ವೆಂಕಟ್ [ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಥಮ್ ನಾಲ್ಕು ಗಂಟೆ ಬಳಿಕ ಆಸ್ಪತ್ರೆಗೆ ದಾಖಲು]

ಧೈರ್ಯದಿಂದ ಇದ್ದವನು ಯಾಕೆ ಹೀಗೆ?

''ಪ್ರಥಮ್ ಇಷ್ಟು ದುರ್ಬಲ ಮನಸ್ಸಿನವನು ಅಂತ ಅಂದುಕೊಂಡಿರಲಿಲ್ಲ. 'ಬಿಗ್ ಬಾಸ್'ನಲ್ಲೂ ಎಲ್ಲರನ್ನೂ ಎದುರಿಸಿದ್ದಿ, ಆಗಲೂ ನಿನಗೆ ಎಲ್ಲರೂ ಬೈದಿದ್ದರು ಆಗ ಅಷ್ಟು ಧೈರ್ಯದಿಂದ ಇದ್ದವನು ಈಗ ಯಾಕೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದಿ? ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಬೇಡ ಅಪ್ಪ ಅಮ್ಮನ ಮಾತಿಗಷ್ಟೇ ಬೆಲೆ ಕೊಡು'' - ಹುಚ್ಚ ವೆಂಕಟ್

ಸುವರ್ಣ ನ್ಯೂಸ್ ವಾಹಿನಿ ಜೊತೆ ಮಾತನಾಡಿರುವ
ಹುಚ್ಚ ವೆಂಕಟ್ ವಿಡಿಯೋ ಇಲ್ಲಿದೆ ನೋಡಿ

English summary
Firing Star Huccha Venkat Reaction On BiggBoss Kannada Winner Pratham Suicide Attempt Incident.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X