»   » ಮಂಡ್ಯ ಮಾಜಿ ಸಂಸದೆ ರಮ್ಯಾಗೆ ಹುಚ್ಚ ವೆಂಕಟ್ ಫುಲ್ ಆವಾಝ್.!

ಮಂಡ್ಯ ಮಾಜಿ ಸಂಸದೆ ರಮ್ಯಾಗೆ ಹುಚ್ಚ ವೆಂಕಟ್ ಫುಲ್ ಆವಾಝ್.!

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಿಂದ ಹೊರಬಂದ ಮೇಲೆ ಸ್ವಲ್ಪ ಸೈಲೆಂಟ್ ಆಗಿ 'ಸಿನಿಮಾ...ಸಿನಿಮಾ' ಅಂತಿದ್ದ 'ಫೈರಿಂಗ್ ಸ್ಟಾರ್' ಅಲಿಯಾಸ್ 'ಟಿ.ಆರ್.ಪಿ ಕಾ ಬಾಪ್' ಹುಚ್ಚ ವೆಂಕಟ್ ಈಗ ಮತ್ತೆ ತಮಟೆ ಹೊಡ್ಕೊಂಡು ಬಂದು ರಮ್ಯಾ ವಿರುದ್ಧ 'ಫೈರಿಂಗ್' ಶುರು ಮಾಡಿದ್ದಾರೆ.

ಯಾವ 'ರಮ್ಯಾ ನನ್ ಹೆಂಡತಿ' ಅಂತ ಹೇಳ್ಕೊಂಡು ಮೊಟ್ಟ ಮೊದಲ ಬಾರಿಗೆ 'ಬಿಗ್ ಬ್ರೇಕಿಂಗ್ ನ್ಯೂಸ್' ಮಾಡಿದ್ದ ಹುಚ್ಚ ವೆಂಕಟ್, ಇವತ್ತು ಅದೇ ರಮ್ಯಾ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. [ಲಕ್ಕಿ ಸ್ಟಾರ್ ರಮ್ಯಾ ಲವ್ ಸ್ಟೋರಿ ಬಿಚ್ಚಿಟ್ಟ ಹುಚ್ಚ ವೆಂಕಟ್.!]

ಮಂಡ್ಯ ಸಂಸದೆ ಆಗಿ, ನಂತರದ ಚುನಾವಣೆಯಲ್ಲಿ ಸೋತ ಬಳಿಕ ಲಂಡನ್ ಗೆ ರಮ್ಯಾ ಹಾರಿ ಹೋಗಿದ್ದರು. ಇದೀಗ ಸಚಿವ ಸ್ಥಾನದ ಲಿಸ್ಟ್ ನಲ್ಲಿ ರಮ್ಯಾ ಹೆಸರು ಕೇಳಿ ಬರುತ್ತಿರುವ ಬೆನ್ನಲೇ, 'ಲಕ್ಕಿ ಸ್ಟಾರ್' ಬಗ್ಗೆ ಹುಚ್ಚ ವೆಂಕಟ್ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.

''ಮಂಡ್ಯ ರಾಜಕೀಯದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ವಿರುದ್ಧ ರಮ್ಯಾ ಹೋಗಬಾರದು'' ಅಂತ ಹುಚ್ಚ ವೆಂಕಟ್ ತಾಕೀತು ಮಾಡಿರುವ ವಿಡಿಯೋ ಔಟ್ ಆಗಿದೆ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ನಟಿ ಹಾಗೂ ಕಾಂಗ್ರೆಸ್ ರಾಜಕಾರಣಿ ರಮ್ಯಾ ವಿರುದ್ಧ ಹುಚ್ಚ ವೆಂಕಟ್ ಹೇಗೆಲ್ಲಾ ಬೆಂಡೆತ್ತಿ ಬ್ರೇಕ್ ಹಾಕಿದ್ದಾರೆ ಅಂತ ಅವರ ಮಾತುಗಳಲ್ಲೇ ಓದಿರಿ, ಕೆಳಗಿರುವ ಸ್ಲೈಡ್ ಗಳಲ್ಲಿ....

ನನ್ ಮಗಂದ್...ನಾನ್ ಯಾರು ಅಂತ ಗೊತ್ತಾಗುತ್ತೆ.!

''ನನ್ ಮಗಂದ್...ರಮ್ಯಾ ಅವರೇ...ರೆಬೆಲ್ ಸ್ಟಾರ್ ಅಂಬರೀಶ್ ವಿರುದ್ಧ ಹೋದರೆ ನಾನು ಯಾರು ಅಂತ ಗೊತ್ತಾಗುತ್ತೆ'' - ಹುಚ್ಚ ವೆಂಕಟ್ [ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಮದುವೆ ರಹಸ್ಯ ಬಯಲು]

ನಿಯತ್ತು ಇದ್ಯಾ.?

''ನಿಮ್ಮ ಎಲೆಕ್ಷನ್ ಕ್ಯಾನ್ವಾಸ್ ಗೆ ಬಂದಿದ್ದು ರೆಬೆಲ್ ಸ್ಟಾರ್ ಅಂಬರೀಶ್. ಅವರು ಸಿಂಗಾಪುರದಲ್ಲಿ ಟ್ರೀಟ್ಮೆಂಟ್ ತೆಗೆದುಕೊಳ್ತಿದ್ರು ಆಗ. ಅದು ಮುಗಿದ ತಕ್ಷಣ ಮೊದಲು ನಿಮಗೆ ಕ್ಯಾನ್ವಾಸ್ ಮಾಡಿದ್ರಲ್ಲಾ...ನಿಯತ್ತು ಇದ್ಯಾ.?'' - ಹುಚ್ಚ ವೆಂಕಟ್ [ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

ಮಂಡ್ಯ ಬಗ್ಗೆ ಏನು ಗೊತ್ತು?

''ಈಗ ನಾನು ನಿನ್ನ ಬಗ್ಗೆ ಮಾತನಾಡುತ್ತೀನಿ ಕಣೇ. ಒಂದು ಮಾತು ಅರ್ಥ ಮಾಡ್ಕೊಳ್ಳೇ. ಲಂಡನ್ ನಲ್ಲಿದ್ದು ಮಂಡ್ಯ ಬಗ್ಗೆ ಏನು ಗೊತ್ತು ರಮ್ಯಾ ಅವರಿಗೆ. ಸೋತ ಮೇಲೆ ಬರೀ ಲಂಡನ್ ನಲ್ಲೇ ಇದ್ದರು. ಎಷ್ಟು ತಿಂಗಳು ಇದ್ರು ಗೊತ್ತಾ.?'' - ಹುಚ್ಚ ವೆಂಕಟ್

ಬೇರೆ ದೇಶಗಳ ಬಗ್ಗೆ ಚೆನ್ನಾಗೊತ್ತು.!

''ಎಲೆಕ್ಷನ್ ಟೈಮ್ ನಲ್ಲಿ ಬಂದುಬಿಡ್ತಾರೆ. ಈಗೊಂದು ಮನೆ ಮಾಡ್ತಾರೆ. ಬೆಂಗಳೂರು ಇಂದ ಮಂಡ್ಯ. ಮಂಡ್ಯ ಇಂದ ಬೆಂಗಳೂರು ಓಡಾಡ್ತಾರೆ. ಮಂಡ್ಯದಲ್ಲಿ ಎಷ್ಟು ಹಳ್ಳಿ ಇದೆ ಗೊತ್ತಾ ಅವರಿಗೆ. ಬೇರೆ ದೇಶಗಳ ಬಗ್ಗೆ ಅವರಿಗೆ ಚೆನ್ನಾಗೊತ್ತು. ನಾನೇ ಒಪ್ಪಿಕೊಳ್ಳುತ್ತೇನೆ'' - ಹುಚ್ಚ ವೆಂಕಟ್ [ಅಂಬರೀಶ್ ಅವನತಿಗೆ ಕಾರಣವಾದ ಹೆಂಗಸಿನ ಬಗ್ಗೆ ಜಗ್ಗೇಶ್ ಟ್ವೀಟ್]

ನಮ್ ರಾಜ್ಯ ನೋಡಿದ್ದಾರಾ.?

''ನಮ್ ದೇಶ ಬೇಡ. ನಮ್ ಕರ್ನಾಟಕ ರಾಜ್ಯ ನೋಡಿದ್ದಾರಾ.?'' - ಹುಚ್ಚ ವೆಂಕಟ್

ಅಂಬರೀಶ್ ಪರ ಇರ್ಬೇಕ್.!

''ಮಂಡ್ಯ ಜನಕ್ಕೆ ನಿಯತ್ತು ಇದ್ರೆ, ನಿಜವಾಗ್ಲೂ ನನ್ನ ಮೇಲೆ ಪ್ರೀತಿ ಇದ್ರೆ, ರೆಬೆಲ್ ಸ್ಟಾರ್ ಅಂಬರೀಶ್ ಪರ ಇರ್ಬೇಕ್'' - ಹುಚ್ಚ ವೆಂಕಟ್ [ಪಾಪ ರಮ್ಯಾಗೆ ಏನು ತಿಳಿದಿಲ್ಲ, ಅವಳನ್ನು ದೂಷಿಸಬೇಡಿ: ಅಂಬರೀಶ್]

ಯಾಕ್ರೀ ಲಂಡನ್ ಗೆ ಹೋದ್ರೀ.?

''ನನ್ ಮಗಂದ್....ನಿಮ್ಮ ತಾಯಿಗೆ ಏನಾದ್ರೂ ಗೊತ್ತಾ.? ರಂಜಿತಾ ಅವರು ಹೇಳಿದ್ರು, ''ನನ್ನ ಮಗಳು ಸೋತರೂ ಕೂಡ ನಾವು ಮಂಡ್ಯದಲ್ಲೇ ಮನೆ ಮಾಡಿ ಇರ್ತೀವಿ. ಸೇವೆ ಮಾಡ್ತೀವಿ'' ಅಂತ. ಹಾಗಿದ್ಮೇಲೆ ಸೋತ್ಮೇಲೆ ಯಾಕ್ರೀ ಲಂಡನ್ ಗೆ ಹೋದ್ರಿ.?'' - ಹುಚ್ಚ ವೆಂಕಟ್

ಅಂಬಿ ಗಿಂತ ಮಂಡ್ಯ ಗೊತ್ತಾ?

''ಲಂಡನ್ ನಲ್ಲಿ ಎಷ್ಟು ಏರಿಯಾ ಇದೆ ಅಂತ ಗೊತ್ತು ನಿಮಗೆ, ಅದೇ ಮಂಡ್ಯದಲ್ಲಿ ಎಷ್ಟು ಜಾಗ ಇದೆ ಅಂತ ಗೊತ್ತಾ ನಿಮಗೆ? ಮಂಡ್ಯ ಪೂರ್ತಿ ನೀವು ನೋಡಿದ್ದೀರಾ.? ರೆಬೆಲ್ ಸ್ಟಾರ್ ಅಂಬರೀಶ್ ರವರಿಗಿಂತ'' - ಹುಚ್ಚ ವೆಂಕಟ್

ಎಲ್ಲಿಂದ ದುಡ್ಡು ಬಂತು.?

''ಲಂಡನ್ ನಲ್ಲಿ ಇದ್ಗೊಂಡು ನೀವು ಮಂಡ್ಯದವರಿಗೆ ಸಹಾಯ ಮಾಡಿದ್ರಾ.? ಎಲೆಕ್ಷನ್ ಗೆ ಅಷ್ಟೊಂದು ದುಡ್ಡು ಖರ್ಚು ಮಾಡಿದ್ರೀ ಅಲ್ವಾ.? ದುಡ್ಡು ಎಲ್ಲಿಂದ ಬಂತು.? ಲೋಕಾಯುಕ್ತ ಇದೇ ಅಲ್ವಾ.?'' - ಹುಚ್ಚ ವೆಂಕಟ್

ಈಗ ಮಂಡ್ಯ ಬೇಕಾ.?

''ನಾನು ನಿಮ್ಮನ್ನ ಪ್ರೀತಿಸಿದೆ. ತಪ್ಪು ಯಾರು ಮಾಡಿದ್ರೂ ತಪ್ಪು ತಪ್ಪೇ.! ಸೋತ ಮೇಲೆ ಲಂಡನ್ ಗೆ ಹೋಗಿ ಮುಚ್ಚಿಟ್ಟುಕೊಂಡು, ಈಗ ಮಂಡ್ಯದಲ್ಲಿ ಕೂತ್ಕೊಂತೀನಿ ಅಂತೀರಾ.?'' - ಹುಚ್ಚ ವೆಂಕಟ್

ಹೆಣ್ಣು ಹೆಣ್ಣಾಗಿದ್ದರೆ ಚೆನ್ನ.!

''ಮಂಡ್ಯ ಜನತೆ ನಿಮ್ಮನ್ನ ಬಿಡಲ್ಲ.! ಮಂಡ್ಯ ಜನ ಓಡಿಸ್ಬಿಡ್ತಾರೆ ನಿಮ್ಮನ್ನ. ಹೆಣ್ಣು ಹೆಣ್ಣಾಗಿದ್ದರೆ ಚೆನ್ನ. ಅಂಬರೀಶ್ ವಿರುದ್ಧ ಹೋಗ ಕೂಡದು'' - ಹುಚ್ಚ ವೆಂಕಟ್

ದಿಸ್ ಈಸ್ ಹುಚ್ಚ ವೆಂಕಟ್.!

''ನಾನು ಯಾವತ್ತೂ ನಿಮ್ಮನ್ನ ಪ್ರೀತಿಸಿಲ್ಲ. ಇದು ಮೈಂಡ್ ನಲ್ಲಿ ಇಟ್ಟುಕೊಳ್ಳಿ. ನನ್ನ ಪ್ರೀತಿ ಸಿಕ್ಕಿಲ್ಲ ಅಂತ ನಾನು ಹೀಗೆ ಮಾತನಾಡುತ್ತಿಲ್ಲ. ದಿಸ್ ಈಸ್ ಹುಚ್ಚ ವೆಂಕಟ್. ನನ್ನ ಬೆನ್ನು ಹಿಂದೆ ಎಷ್ಟು ಜನ ಹುಡುಗೀರು ಇದ್ದಾರೆ ಗೊತ್ತಾ.?'' - ಹುಚ್ಚ ವೆಂಕಟ್

English summary
Huccha Venkat is annoyed with Kannada Actress, Congress Politician, Mandya EX MP Ramya aka Divya Spandana for going against Rebel Star Ambareesh in Mandya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada